ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ನಂ.1 ಆಗಲು ವಿರಾಟ್ ಕೊಹ್ಲಿ ಹೇಳಿದ ಸಲಹೆ ಬಹಿರಂಗಪಡಿಸಿದ ಹಾರ್ದಿಕ್

Hardik reveals Virat Kohlis suggestion to become world No.1

ನವದೆಹಲಿ, ಜೂನ್ 27: ಆಧುನಿಕ ಕ್ರಿಕೆಟ್ ಯುಗದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಈ ಮೂವರು ಭಾರತದ ಬೆಸ್ಟ್ ಬ್ಯಾಟ್ಸ್‌ಮನ್‌ಗಳೆಂದು ಗುರುತಿಸಿಕೊಂಡವರು. ಹೆಚ್ಚು ರನ್ ಗಳಿಸಬೇಕನ್ನೋ ಹಂಬಲ ಈ ಮೂವರನ್ನು ಬಲಿಷ್ಠ ಕ್ರಿಕೆಟಿಗರಾಗಿ, ತಂಡದ ಬಲವಾಗಿ ರೂಪಿಸಿದೆ.

ಹಫೀಜ್‌ಗೆ ಮೊದಲು ಕೊರೊನಾ ಪಾಸಿಟಿವ್, ಮತ್ತೆ ನೆಗೆಟಿವ್, ಈಗ ಪಾಸಿಟಿವ್!ಹಫೀಜ್‌ಗೆ ಮೊದಲು ಕೊರೊನಾ ಪಾಸಿಟಿವ್, ಮತ್ತೆ ನೆಗೆಟಿವ್, ಈಗ ಪಾಸಿಟಿವ್!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಯಶಸ್ವಿ ಆಟಗಾರರೆನಿಸಲು ಕಾರಣ ಅವರಲ್ಲಿ ಆಟದ ಬಗೆಗಿದ್ದ ತುಡಿತ. ಇದೇ ವಿಚಾರವನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಹೇಳಿಕೊಂಡಿದ್ದಾರೆ.

'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ

ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಅಂಡರ್ 19 ತಂಡದ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್, ತಾನು ಇತ್ತೀಚೆಗೆ ಕೊಹ್ಲಿ ಜೊತೆ ಮಾತನಾಡುವಾಗ, ನಿನ್ನ ಯಶಸ್ಸಿನ ಹಿಂದಿರುವ ಕಾರಣವೇನು ಎಂದು ಪ್ರಶ್ನಿಸಿದ್ದೆ. ಅದಕ್ಕೆ ಕೊಹ್ಲಿ ಮೌಲ್ಯಯುತ ಪ್ರತಿಕ್ರಿಯೆ ನೀಡಿದ್ದರು ಎಂದಿದ್ದಾರೆ.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

'ನನ್ನ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನಿನ್ನ ವರ್ತನೆ ಚೆನ್ನಾಗಿದೆ, ಎಲ್ಲವೂ ಚೆನ್ನಾಗಿದೆ. ಆದರೆ ನೀನು ದೊಡ್ಡ ಮಟ್ಟದವರೆಗೆ ಸ್ಥಿರ ಫಾರ್ಮ್ ಕಾಯ್ದುಕೊಳ್ಳಬೇಕಾಗುತ್ತದೆ. ಇದಕ್ಕೆ ನಿನ್ನಲ್ಲಿ ವಿಶ್ವ ನಂ.1 ಬ್ಯಾಟ್ಸ್‌ಮನ್ ಅನ್ನಿಸುವ ಬಗ್ಗೆ ದೊಡ್ಡ ಹಸಿವಿರಬೇಕಾಗುತ್ತದೆ ಎಂದರು,' ಎಂದು ಹಾರ್ದಿಕ್ ಹೇಳಿದರು.

ಸಂಗಕ್ಕರ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೊಂಡಿದ್ದು ಯಾಕೆ ಗೊತ್ತಾ? ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ ಕಾರಣ!ಸಂಗಕ್ಕರ ಡ್ಯಾನ್ಸ್ ಕ್ಲಾಸ್‌ಗೆ ಸೇರಿಕೊಂಡಿದ್ದು ಯಾಕೆ ಗೊತ್ತಾ? ರಸೆಲ್ ಅರ್ನಾಲ್ಡ್ ಬಿಚ್ಚಿಟ್ಟಿದ್ದಾರೆ ಕಾರಣ!

'ಹಾಗಂತ ಯಾರನ್ನೂ ಕೆಳಗೆಳೆದು ನೀನು ನಂ.1 ಆಗುವುದಲ್ಲ. ಎಲ್ಲರಿಗೂ ಪ್ರೋತ್ಸಾಹ ನೀಡುತ್ತಲೇ ಸರಿಯಾದ ದಾರಿಯಲ್ಲಿ ನೀನು ಬೆಳೆದು ನಿಲ್ಲಬೇಕು, ವಿಶ್ವ ನಂ.1 ಅನ್ನಿಸಿಕೊಳ್ಳಬೇಕು. ನಿನ್ನ ಸ್ವಂತ ಪರಿಶ್ರಮ, ನಿನ್ನ ಸ್ವಂತ ಸಾಧನೆಯೊಂದಿಗೆ ನೀನು ವಿಶ್ವ ನಂ.1 ಬ್ಯಾಟ್ಸ್‌ಮನ್ ಆಗುವ ಗುರಿ ಹೊಂದಿರಬೇಕು ಎಂದು ಕೊಹ್ಲಿ ಹೇಳಿದರು,' ಎಂದು ಹಾರ್ದಿಕ್ ವಿವರಿಸಿದರು.

Story first published: Saturday, June 27, 2020, 18:03 [IST]
Other articles published on Jun 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X