ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೊಡ್ಡ ವೇದಿಕೆಯಲ್ಲಿ ಮತ್ತೆ ಮತ್ತೆ ನಾವು ಅದೇ ತಪ್ಪು ಮಾಡುತ್ತಿದ್ದೇವೆ: ತಂಡದ ಪ್ರದರ್ಶನಕ್ಕೆ ಸಿಡಿದ ನಾಯಕಿ

Harmanpreet Kaur express her disappointment said we make same mistakes again and again

ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡದ ವಿರುದ್ಧ ರೋಚಕ ಸೆಣೆಸಾಟದಲ್ಲಿ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಚಿನ್ನದ ಪದಕ ಗೆಲ್ಲುವ ಅವಕಾಶ ಭಾರತದ ಕೈತಪ್ಪಿದೆ. ಒಂದು ಹಂತದಲ್ಲಿ ಪಂದ್ಯವನ್ನು ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭಾರತ ತಂಡ ನಂತರ ನೀಡಿದ ಬೇಜವಾಬ್ಧಾರಿಯುತ ಪ್ರದರ್ಶನದಿಮದಾಗಿ ಸೋಲು ಅನುಭವಿಸಬೇಕಾಯಿತು.

ಇನ್ನು ಭಾರತ ಮಹಿಳಾ ತಂಡದ ಈ ಪ್ರದರ್ಶನದ ಬಗ್ಗೆ ಸ್ವತಃ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹತ್ವದ ಟೂರ್ನಿಗಳಲ್ಲಿ ಮಹತ್ವದ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಪದೇ ಪದೇ ಒಂದೇ ರೀತಿಯ ತಪ್ಪೆಸಗುತ್ತಿದೆ ಎಂದು ಹರ್ಮನ್‌ಪ್ರೀತ್ ಕೌರ್ ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ಕಿಡಿಕಾರಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?ಕಾಮನ್‌ವೆಲ್ತ್‌ ಗೇಮ್ಸ್‌ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?

9 ರನ್‌ಗಳಿಂದ ಎಡವಿದ ಭಾರತ

9 ರನ್‌ಗಳಿಂದ ಎಡವಿದ ಭಾರತ

ಆಸ್ಟ್ರೇಲಿಯಾ ತಂಡ ಭಾರತಕ್ಕೆ ಈ ಫೈನಲ್ ಪಂದ್ಯದಲ್ಲಿ ಗೆಲ್ಲಲು 162 ರನ್‌ಗಳ ಗುರಿಯನ್ನು ಮುಂದಿಟ್ಟಿತ್ತು. ಆರಂಭಿಕ ಎರಡು ವಿಕೆಟ್‌ಗಳನ್ನು ಶೀಘ್ರವಾಗಿ ಭಾರತ ಕಳೆದುಕೊಂಡರೂ ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜಮಿಮಾ ರೋಡ್ರಿಗಸ್ ಅವರ ಪ್ರದರ್ಶನದಿಂದಾಗಿ ಭಾರತ ತಂಡ ಗೆಲ್ಲುವ ಭರವಸೆ ಮೂಡಿಸಿತು. ಮೂರನೇ ವಿಕೆಟ್‌ಗೆ ಈ ಜೋಡಿಯಿಂದ ಭರ್ಜರಿ 96 ರನ್‌ಗಳ ಜೊತೆಯಾಟ ಬಂದಿತ್ತು. ಆದರೆ ನಂತರ ಈ ಜೋಡಿಯನ್ನು ಬೇರ್ಪಡಿಸಿದ ಆಸ್ಟ್ರೇಲಿಯಾ ಪಂದ್ಯವನ್ನು ತನ್ನತ್ತ ಸೆಳೆದುಕೊಂಡಿತು.

ಪದೇ ಪದೇ ಒಂದೇ ತಪ್ಪು!

ಪದೇ ಪದೇ ಒಂದೇ ತಪ್ಪು!

ಫೈನಲ್ ಪಂದ್ಯದ ಬಳಿಕ ಪಿಟಿಐ ಜೊತೆಗೆ ಮಾತನಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತೆ ಮತ್ತೆ ಒಂದೇ ರೀತಿಯ ತಪ್ಪನ್ನು ಮಾಡುವುದನ್ನು ನಿಲ್ಲಿಸಬೇಕಿದೆ ಎಂದಿದ್ದಾರೆ. ಈ ವಿಚಾರವಾಗಿ ತಂಡ ಪ್ರಗತಿ ಕಾಣಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. "ಪ್ರತಿ ಬಾರಿಯೂ ದೊಡ್ಡ ಫೈನಲ್ ಪಂದ್ಯ ಇರುವಾಗ ನಾವು ಬ್ಯಾಟಿಂಗ್‌ನಲ್ಲಿ ಮತ್ತೆ ಮತ್ತೆ ಒಂದೇ ತಪ್ಪನ್ನು ಮಾಡುತ್ತಿದ್ದೇವೆ. ಅದನ್ನು ನಾವು ಸರಿಪಡಿಸಿಕೊಳ್ಳಲೇಬೇಕು. ನಾವು ಈ ತಪ್ಪನ್ನು ಲೀಗ್ ಹಂತದಲ್ಲಿ ಅಥವಾ ದ್ವಿಪಕ್ಷೀಯ ಸರಣಿಗಳಲ್ಲಿ ಈ ತಪ್ಪನ್ನು ಮಾಡುತ್ತಿಲ್ಲ" ಎಂದಿದ್ದಾರೆ ಹರ್ಮನ್‌ಪ್ರೀತ್ ಕೌರ್.

ಕಾಮನ್‌ವೆಲ್ತ್‌ ಗೇಮ್ಸ್‌ 2022: 11ನೇ ದಿನದಲ್ಲಿ ಭಾರತದ ಪ್ರಮುಖ ಸ್ಪರ್ಧೆಗಳ ವೇಳಾಪಟ್ಟಿ

ಗೆಲುವಿನ ಸನಿಹದಲ್ಲಿ ಎಡವಿದ ಭಾರತ

ಗೆಲುವಿನ ಸನಿಹದಲ್ಲಿ ಎಡವಿದ ಭಾರತ

ಈ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲುವ ಅದ್ಭುತ ಅವಕಾಶವಿತ್ತು. ಆರಂಭಿಕ ಆಟಗಾರ್ತಿಯರನ್ನು ಅಗ್ಗಕ್ಕೆ ಕಳೆದುಕೊಂಡ ಭಾರತ ತಂಡದ ಪರವಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರೊಗಸ್ ಅದ್ಭುತ ಜೊತೆಯಾಟ ನೀಡುವ ಮೂಲಕ ತಂಡವನ್ನು ಮೇಲಕ್ಕೆತ್ತಿದರು. ಜಾಣ್ಮೆಯ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಆಟಗಾರ್ತಿಯರು 96 ರನ್‌ಗಳ ಜೊತೆಯಾಟವನ್ನು ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ತಂಡ ನಾಟಕೀಯವಾಗಿ ಕುಸಿಯಲು ಆರಂಭಿಸಿತು. ಅಗತ್ಯ ಜೊತೆಯಾಟವೇ ಭಾರತಕ್ಕೆ ದೊರೆಯಲಿಲ್ಲ. ಒಂದರ ಬಳಿಕ ಮತ್ತೊಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 9 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸಿತು.

ಚಿನ್ನ ಗೆದ್ದ ಆಸಿಸ್, ಭಾರತಕ್ಕೆ ಬೆಳ್ಳಿ ಪದಕ

ಚಿನ್ನ ಗೆದ್ದ ಆಸಿಸ್, ಭಾರತಕ್ಕೆ ಬೆಳ್ಳಿ ಪದಕ

ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 161 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಭಾರತ ತಂಡದ ಬೌಲಿಂಗ್ ವಿಭಾಗ ಅಂತಿಮ ಹಂತದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಕಾರಣ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಗುರಿ ನೀಡಲು ವಿಫಲವಾಗಿ ಸವಾಲಿನ ಮೊತ್ತ ಸೇರಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ರೋಚಕವಾಗಿ ಬೆನ್ನಟ್ಟಿದ ಭಾರತದ ಆಟಗಾರ್ತಿಯರು ಅಂತಿಮವಾಗಿ 9 ರನ್‌ಗಳ ಅಂತರದಿಂದ ಶರಣಾದರು.

Story first published: Monday, August 8, 2022, 17:04 [IST]
Other articles published on Aug 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X