ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ

Harmanpreet, Smriti, Mithali to lead teams in Womens T20 Challenge

ಜೈಪುರ, ಏಪ್ರಿಲ್‌ 26: ಭಾರತದ ಯುವ ಮಹಿಳಾ ಕ್ರಿಕೆಟಿಗರು ನ್ಯೂಜಿಲೆಂಡ್‌, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳ ಆಟಗಾರ್ತಿರೊಂದಿಗೆ ಬೆರೆತು ಆಡಲಿರುವ ಪ್ರಪ್ರಥಮ ಮಹಿಳಾ ಟಿ20 ಚಾಲೆಂಜ್‌ ತ್ರಿಕೋನ ಸರಣಿಗೆ ತಂಡಗಳು ಪ್ರಕಟಗೊಂಡಿವೆ.

ಕಳೆದ ಬಾರಿಯ ಐಪಿಎಲ್‌ ವೇಳೆ ಟ್ರಯಲ್‌ಬ್ಲೇಝರ್ಸ್‌ ಮತ್ತು ಸೂಪರ್‌ನೋವಾಸ್‌ ತಂಡಗಳ ನಡುವೆ ಏಕೈಕ ಮಹಿಳಾ ಟಿ20 ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಬಾರಿ ವೆಲಾಸಿಟಿ ಹೆಸರಿನ ಹೊಸ ತಂಡದ ಸೇರ್ಪಡೆಯಾಗಿದ್ದು, ಮೂರು ತಂಡಗಳ ನಡುವೆ ಮೇ 6ರಿಂದ ಮೇ11ರವರೆಗೆ ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ತ್ರಿಕೋನ ಸರಣಿ ನಡೆಯಲಿದೆ

 ಮಹಿಳಾ ಐಪಿಎಲ್‌: ಮಿಥಾಲಿ, ಹರ್ಮನ್‌, ಸ್ಮೃತಿಗೆ ನಾಯಕತ್ವ ಮಹಿಳಾ ಐಪಿಎಲ್‌: ಮಿಥಾಲಿ, ಹರ್ಮನ್‌, ಸ್ಮೃತಿಗೆ ನಾಯಕತ್ವ

ಸರಣಿಯಲ್ಲಿ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂಧಾನಾ ಕ್ರಮವಾಗಿ ವೆಲಾಸಿಟಿ , ಟ್ರಯಲ್‌ಬ್ಲೇಝರ್ಸ್‌ ಮತ್ತು ಸೂಪರ್‌ನೋವಾಸ್‌ ತಂಡಗಳನ್ನು ಮುನ್ನನಡೆಸಲಿದ್ದಾರೆ. ಭಾರತ ಮಹಿಳಾ ತಂಡದ ಕೋಚ್‌ ಡಬ್ಲ್ಯುವಿ ರಾಮನ್‌ ಸೂಪರ್‌ ನೋವಾಸ್‌ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದು, ಟ್ರಯಲ್‌ಬ್ಲೇಝರ್ಸ್‌ ಮತ್ತು ವೆಲಾಸಿಟಿ ತಂಡಗಳಿಗೆ ಕ್ರಮವಾಜಿ ಬಿಜು ಜಾರ್ಜ್‌ ಮತ್ತು ಮಮತಾ ಮೆಬೆನ್‌ ಕೋಚ್‌ಗಳಾಗಿ ನೇಮಕಗೊಂಡಿದ್ದಾರೆ.

 ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ! ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ!

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದಲ್ಲಿ ಮಹಿಳಾ ಟಿ20 ಕ್ರಿಕೆಟ್‌ನ ಜನಪ್ರಿಯತೆಯನ್ನು ಅರಿಯುವ ಉದ್ದೇಶದಿಂದ ಈ ಮಹಿಳಾ ಟಿ20 ಚಾಲೆಂಜ್‌ ತ್ರಿಕೋನ ಸರಣಿಯನ್ನು ಆಯೋಜಿಸುತ್ತಿದೆ. ಸರಣಿಯಲ್ಲಿನ ನಾಲ್ಕೂ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಐಪಿಎಲ್‌: ಪಾರ್ಥಿವ್‌ ಪಟೇಲ್‌ ಫೋರ್‌ಗೆ 'ಫ**' ಎಂದ ಕೆಎಲ್‌ ರಾಹುಲ್‌ಐಪಿಎಲ್‌: ಪಾರ್ಥಿವ್‌ ಪಟೇಲ್‌ ಫೋರ್‌ಗೆ 'ಫ**' ಎಂದ ಕೆಎಲ್‌ ರಾಹುಲ್‌

ಕಳೆದ ವರ್ಷ ಸೂಪರ್‌ನೋವಾಸ್‌ ಮತ್ತು ಟ್ರಯಲ್‌ಬ್ಲೇಝರ್ಸ್‌ ನಡುವಣ ಪಂದ್ಯ ಕೊನೆಯ ಓವರ್‌ ವರೆಗೂ ರೋಚಕತೆ ಹಿಡಿದಿಟ್ಟಿತ್ತು. ಅಂತ್ಯದಲ್ಲಿ ಸೂಪರ್‌ನೋವಾಸ್‌ ಎದುರು ಟ್ರಯಲ್‌ಬ್ಲೇಝರ್ಸ್‌ ತಂಡ 3 ವಿಕೆಟ್‌ಗಳ ಜಯ ದಾಖಲಿಸಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯಕ್ಕೂ ಮುನ್ನ ಅದೇ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನಿಸಿರಲಿಲ್ಲ.

ವಿದೇಶಿ ಸ್ಟಾರ್‌ಗಳೂ ಕಣಕ್ಕೆ

ವಿದೇಶಿ ಸ್ಟಾರ್‌ಗಳೂ ಕಣಕ್ಕೆ

ಇಂಗ್ಲೆಂಡ್‌ನ ನಥಾಲಿ ಶಿವರ್‌ (ಸೂಪರ್‌ನೋವಾಸ್‌), ನ್ಯೂಜಿಲೆಂಡ್‌ನ ಸೋಫೀ ಡಿವೈನ್‌ (ಸೂಪರ್‌ನೋವಾಸ್‌), ವೆಸ್ಟ್‌ ಇಂಡೀಸ್‌ನ ಸ್ಟೆಫನಿ ಟೇಲರ್‌ (ಟ್ರಯಲ್‌ಬ್ಲೇಝರ್ಸ್‌), ಇಂಗ್ಲೆಂಡ್‌ನ ಸೋಫಿ ಎಕ್ಲೇಸ್ಟೋನ್‌ (ಟ್ರಯಲ್‌ಬ್ಲೇಝರ್ಸ್‌), ನ್ಯೂಜಿಲೆಂಡ್‌ನ ಸೂಝಿ ಬೇಟ್ಸ್‌ (ಟ್ರಯಲ್‌ಬ್ಲೇಝರ್ಸ್‌), ಇಂಗ್ಲೆಂಡ್‌ನ ಡೇನಿಯೆಲ್‌ ವ್ಯಾಟ್‌ (ವೆಲಾಸಿಟಿ) ಮತ್ತು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್‌ (ವೆಲಾಸಿಟಿ) ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ತಾರೆಗಳಾಗಿದ್ದಾರೆ.

 ಸೂಪರ್‌ನೋವಾಸ್‌

ಸೂಪರ್‌ನೋವಾಸ್‌

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಅನುಜಾ ಪಾಟಿಲ್‌, ಅರುಂಧತಿ ರೆಡ್ಡಿ, ಚಾಮರಿ ಅತಪತ್ತು(ಶ್ರೀಲಂಕಾ), ಜೆಮಿಮಾ ರೋಡ್ರಿಗಸ್‌, ಒಲೀ ತಹುಹು (ನ್ಯೂಜಿಲೆಂಡ್‌), ಮಾನ್ಸೀ ಜೋಶಿ, ನಥಾಲಿ ಶಿವರ್‌ (ಇಂಗ್ಲೆಂಡ್‌), ಪೂನಮ್‌ ಯಾದವ್‌, ಪ್ರಿಯಾ ಪೂನಿಯಾ, ರಾಧಾ ಪಿ. ಯಾದವ್‌, ಸೋಫೀ ಡಿವೈನ್‌ (ನ್ಯೂಜಿಲೆಂಡ್‌), ತಾನಿಯಾ ಭಾಟಿಯಾ (ವಿಕೆಟ್‌ಕೀಪರ್‌).

ಟ್ರಯಲ್‌ ಬ್ಲೇಝರ್ಸ್‌

ಟ್ರಯಲ್‌ ಬ್ಲೇಝರ್ಸ್‌

ಸ್ಮೃತಿ ಮಂಧಾನಾ (ನಾಯಕಿ), ಭಾರತಿ ಫುಲ್ಮಾಲಿ, ದಯಾಳನ್‌ ಹೇಮಲತ, ದೀಪ್ತಿ ಶರ್ಮಾ, ಹರ್ಲೀನ್‌ ಡಿಯೋಲ್‌, ಜಸಿಯಾ ಅಖ್ತರ್‌, ಜೂಲನ್‌ ಗೋಸ್ವಾಮಿ, ಆರ್‌. ಕಲ್ಪನಾ(ವಿಕೆಟ್‌ಕೀಪರ್‌), ರಾಜೇಶ್ವರಿ ಗಾಯಕ್ವಾಡ್‌, ಶಕೀರಾ ಸಲ್ಮಾನ್‌ (ವೆಸ್ಟ್‌ ಇಂಡೀಸ್‌), ಸೋಫೀ ಎಕ್ಲೇಸ್ಟೋನ್‌ (ಇಂಗ್ಲೆಂಡ್‌), ಸ್ಟೆಫನಿ ಟೇಲರ್‌ (ವೆಸ್ಟ್‌ ಇಂಡೀಸ್‌), ಸೂಝೀ ಬೇಟ್ಸ್‌ (ನ್ಯೂಜಿಲೆಂಡ್‌).

ವೆಲಾಸಿಟಿ

ವೆಲಾಸಿಟಿ

ಮಿಥಾಲಿ ರಾಜ್‌ (ನಾಯಕಿ), ಅಮೆಲಿಯಾ ಕೆರ್‌ (ನ್ಯೂಜಿಲೆಂಡ್‌), ಡೇನಿಯೆಲ್‌ ವ್ಯಾಟ್‌ (ಇಂಗ್ಲೆಂಡ್‌), ದೇವಿಕಾ ವಿದ್ಯಾ, ಏಕ್ತ ಬಿಷ್ತ್‌, ಹೇಲೇ ಮ್ಯಾಥ್ಯೂಸ್‌ (ವೆಸ್ಟ್‌ ಇಂಡೀಸ್‌), ಜಹನಾರ ಆಲಮ್‌ (ಬಾಂಗ್ಲಾದೇಶ), ಕೋಮಲ್‌ ಝ್ಹಂಝಾದ್‌, ಶಫಾಲಿ ವರ್ಮಾ, ಶಿಖಾ ಪಾಂಡೆ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್‌), ಸುಶ್ರೀ ದಿವ್ಯದರ್ಶಿನಿ, ವೇದಾ ಕೃಷ್ಣಮೂರ್ತಿ.

Story first published: Friday, April 26, 2019, 13:00 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X