ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಮ್ರಾನ್‌ ಮಲಿಕ್‌ ಕುರಿತು ಹೇಳಿಕೆ ನೀಡಿದ್ದ ಹರ್ಷಲ್ ಪಟೇಲ್: 'ಆತನ ಮೇಲೆ ನಿನಗೆ ಹೊಟ್ಟೆಕಿಚ್ಚು' ಎಂದು ಟ್ರೋಲ್

Umran mallik and harshal patel

ಯುವ ವೇಗಿ ಹಾಗೂ ಕಾಶ್ಮೀರದ ಸೆನ್ಸೇಷನ್ ಉಮ್ರಾನ್ ಮಲಿಕ್ ಅವರಂತೆ ಮಿಂಚಿನ ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಸ್ಟಾರ್ ವೇಗಿ ಹರ್ಷಲ್ ಪಟೇಲ್ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

ಮಿಂಚಿನ ವೇಗದಲ್ಲಿ ಚೆಂಡುಗಳನ್ನು ಎಸೆಯುವ ಸಾಮರ್ಥ್ಯವಿಲ್ಲದಿದ್ದಾಗ ಬೌಲಿಂಗ್‌ನಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವುದು ಮುಖ್ಯ ಎಂದು ಹರ್ಷಲ್ ಪಟೇಲ್ ಹೇಳಿದ ಬಳಿಕ ನೆಟ್ಟಿಗರು ಹರ್ಷಲ್ ಪಟೇಲ್ ಕಾಲೆಳೆದಿದ್ದಾರೆ.

ಉಮ್ರಾನ್ ಮಲ್ಲಿಕ್‌ನಷ್ಟು ವೇಗವಾಗಿ ಬೌಲಿಂಗ್ ಮಾಡಲಾಗದು ಎಂದಿದ್ದ ಹರ್ಷಲ್

ಉಮ್ರಾನ್ ಮಲ್ಲಿಕ್‌ನಷ್ಟು ವೇಗವಾಗಿ ಬೌಲಿಂಗ್ ಮಾಡಲಾಗದು ಎಂದಿದ್ದ ಹರ್ಷಲ್

ಒತ್ತಡದ ಸಮಯದಲ್ಲಿ ಅಗತ್ಯವಿದ್ದಾಗ ಯೋಜನೆಗಳನ್ನು ಆತ್ಮವಿಶ್ವಾಸದಿಂದ ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ನಿರ್ಣಾಯಕ ಕ್ಷಣದಲ್ಲಿ ಚೆಂಡನ್ನು ಸರಿಯಾಗಿ ಹಾಕುವುದರ ಮೇಲೆ ನನ್ನ ಗಮನ ಇರುತ್ತದೆ. ಚೆಂಡುಗಳ ವೇಗದ ಬಗ್ಗೆ ಯೋಚಿಸುವುದಿಲ್ಲ. ನಾನು ಉಮ್ರಾನ್ ಮಲಿಕ್ ಅವರಂತೆ ಮಿಂಚಿನ ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನನ್ನ ಅಂತರರಾಷ್ಟ್ರೀಯ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲು ಚೆಂಡುಗಳಲ್ಲಿ ವೈವಿಧ್ಯತೆಯಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ ಎಂದು ಹರ್ಷಲ್ ಪಟೇಲ್ ಹೇಳಿದ್ದರು.

ನಾನು ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲೆ. ಆದರೆ ನನ್ನ ಗಮನ ಯಾವಾಗಲೂ ವೈವಿಧ್ಯತೆಯ ಮೇಲಿರುತ್ತದೆ. ನಾನು ವಿಶೇಷವಾಗಿ ನಿಧಾನಗತಿಯ ಪಿಚ್‌ಗಳಲ್ಲಿ ಬೌಲಿಂಗ್ ಮಾಡಲು ಇಷ್ಟಪಡುತ್ತೇನೆ. ಆದರೆ, ದೆಹಲಿಯಂತಹ ಪಿಚ್‌ಗಳಲ್ಲಿ ಆಡುವುದರಿಂದ ಬೌಲರ್‌ಗಳ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

ರಿಷಭ್ ಪಂತ್ ಇತ್ತೀಚಿನ ಪ್ರದರ್ಶನ ನೋಡಿದ್ರೆ, ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗದು: ವಾಸಿಂ ಜಾಫರ್

ಉಮ್ರಾನ್ ಮಲ್ಲಿಕ್ ಮೇಲೆ ನಿನಗೆ ಹೊಟ್ಟೆಕಿಚ್ಚು ಎಂದು ಟ್ರೋಲ್

ಕಾಶ್ಮೀರಿ ವೇಗಿ ಉಮ್ರಾನ್ ಮಲ್ಲಿಕ್ ಮೇಲೆ ನಿನಗೆ ಹೊಟ್ಟೆಕಿಚ್ಚು. ಆತನ ವೇಗವನ್ನ ಕಂಡು ನಿನಗೆ ಸಹಿಸಲಾಗದು ಹೀಗಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದೀಯ ಎಂದು ನೆಟ್ಟಿಗರು ಹರ್ಷಲ್ ಪಟೇಲ್‌ರನ್ನು ಟೀಕಿಸಿದ್ದಾರೆ.

ಪತ್ನಿಯಿಂದ ಮೋಸಕ್ಕೊಳಗಾದ ಮೂವರು ಅಂತರಾಷ್ಟ್ರೀಯ ಕ್ರಿಕೆಟಿಗರ ಕಥೆ-ವ್ಯಥೆ

ನಿನ್ನ ಬಳಿ ಕೌಶಲ್ಯವಿಲ್ಲ, ಕೇವಲ ಸ್ಲೋ ಬಾಲ್

ಇನ್ನೂ ಒಂದು ಹಂತ ಮೀರಿ ಟ್ರೋಲ್ ಮಾಡಿರುವ ನೆಟ್ಟಿಗರು ಹರ್ಷಲ್ ಪಟೇಲ್ ಬಳಿಕ ಯಾವುದೇ ಕೌಶಲ್ಯವಿಲ್ಲ. ಕೇವಲ ಸ್ಲೋ ಬಾಲ್ ಹಾಕುವುದರಿಂದ ವಿಕೆಟ್‌ಗಳನ್ನ ಪಡೆಯುತ್ತಾರೆ. ವೇರಿಯೇಷನ್‌ಗಳು ಸಹ ಕಡಿಮೆ ಎಂದು ಮತ್ತಷ್ಟು ನೆಟ್ಟಿಗಳು ಕಾಲೆಳೆದಿದ್ದಾರೆ.

ಉಮ್ರಾನ್ ಮಲಿಕ್ ತರ ಬೌಲಿಂಗ್ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದ ಹರ್ಷಲ್ ಪಟೇಲ್

ಪ್ರೆಡಿಕ್ಟೇಬಲ್ ಪಟೇಲ್

ಇನ್ನು ಹರ್ಷಲ್ ಪಟೇಲ್‌ರನ್ನು ಪ್ರೆಡಿಕ್ಟೇಬಲ್ ಪಟೇಲ್ ಎಂದು ಸಹ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನಿನ್ನ ಬೌಲಿಂಗ್ ಅನ್ನು ಯಾರೂ ಬೇಕಾದರೂ ಊಹಿಸಬಹುದು ಎಂಬುದು ಇದರ ಅರ್ಥವಾಗಿದೆ. ಜೊತೆಗೆ ವೈಜಾಗ್ ಪಿಚ್‌ನಲ್ಲಿ ನೀನು ಸ್ಲೋ ಬಾಲ್ ಬಿಟ್ಟು ಬೇರೆ ಏನು ಸ್ಕಿಲ್ ತೋರಿಸಿರುವೆ ಎಂದು ಕೂಡ ಹರ್ಷಲ್ ಪಟೇಲ್‌ರನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.

Ind vs SA: 4ನೇ ಟಿ20 ಪಂದ್ಯದಲ್ಲಿ ಭಾರತದ ಆಡುವ 11ರ ಬಳಗ; ಅವೇಶ್ ಖಾನ್ ಬದಲು ಅರ್ಶ್‌ದೀಪ್?

ವಿಶಾಖಪಟ್ಟಣದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಪಟೇಲ್

ವಿಶಾಖಪಟ್ಟಣದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಪಟೇಲ್

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲರ್ ಎನಿಸಿಕೊಂಡಿದ್ದ ಹರ್ಷಲ್ ಪಟೇಲ್ ವೈಜಾಗ್ ಟಿ20ಐನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಅವರು 3.1 ಓವರ್‌ಗಳಲ್ಲಿ ಕೇವಲ 25 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಈ ಪಂದ್ಯವನ್ನು ಭಾರತ 48 ರನ್‌ಗಳಿಂದ ಗೆದ್ದುಕೊಂಡಿತು. ಜೊತೆಗೆ ಸರಣಿಯ ಅಂತರವನ್ನ 2-1 ಕ್ಕೆ ತಗ್ಗಿಸಿದೆ. ನಾಲ್ಕನೇ ಟಿ20 ಪಂದ್ಯಕ್ಕೆ ರಾಜ್‌ಕೋಟ್‌ ಆತಿಥ್ಯ ವಹಿಸಿದೆ.

Story first published: Friday, June 17, 2022, 16:52 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X