ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಜೀವನದ ಪ್ರತಿ ಕ್ಷಣವೂ ನಿನ್ನ ಅನುಪಸ್ಥಿತಿ ಕಾಡುತ್ತದೆ: ಸಹೋದರಿ ಕುರಿತು ಅಳಲು ತೋಡಿಕೊಂಡ ಹರ್ಷಲ್ ಪಟೇಲ್

Harshal Patel pens an emotional note for his late sister Archita Patel

ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ತಮ್ಮ ಸಹೋದರಿಯ ಅಗಲುವಿಕೆ ಕುರಿತು ಭಾವನಾತ್ಮಕ ಟಿಪ್ಪಣಿ ಬರೆದು ಸಾಮಾಜಿಕ ಜಾಲದಲ್ಲಿ ಪೋಸ್ಟ್‌ ಹಾಕುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

Rashid Khan : ಅಫ್ಘಾನಿಸ್ತಾನದ ಸೂಪರ್‌ಸ್ಟಾರ್‌ ರಶೀದ್‌ ಖಾನ್‌ ಬಹುವರ್ಷದ ಕನಸು ನನಸಾಯ್ತು!Rashid Khan : ಅಫ್ಘಾನಿಸ್ತಾನದ ಸೂಪರ್‌ಸ್ಟಾರ್‌ ರಶೀದ್‌ ಖಾನ್‌ ಬಹುವರ್ಷದ ಕನಸು ನನಸಾಯ್ತು!

31ರ ಹರೆಯದ ವೇಗಿ ಐಪಿಎಲ್ ಆರಂಭಕ್ಕೂ ಮುನ್ನ ಸಹೋದರಿಯೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಸಹೋದರಿಯ ಅಗಲುವಿಕೆಯಿಂದ ಮನದಾಳದಲ್ಲಿ ಉಂಟಾದ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಟಿಪ್ಪಣಿ ಮೂಲಕ ವ್ಯಕ್ತಪಡಿಸಿದ ಹರ್ಷಲ್ ಪಟೇಲ್ ಹೀಗೆ ಬರೆದಿದ್ದಾರೆ.

ಸಹೋದರಿ, "ನಮ್ಮ ಜೀವನದಲ್ಲಿ ಕರುಣಾಮಯಿ ಮತ್ತು ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿದ್ದೀರಿ. ನಿಮ್ಮ ಕೊನೆಯ ಉಸಿರು ಇರುವವರೆಗೂ ನಿಮ್ಮ ಮುಖದಲ್ಲಿ ದೊಡ್ಡ ನಗುವಿನೊಂದಿಗೆ ನೀವು ಜೀವನದಲ್ಲಿ ನಂಬಲಾಗದ ಕಷ್ಟಗಳನ್ನು ಎದುರಿಸಿದ್ದೀರಿ. ನಾನು ಭಾರತಕ್ಕೆ ಹಿಂತಿರುಗುವ ಮೊದಲು ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇದ್ದಾಗ ನೀವು ನನ್ನ ಆಟದ ಮೇಲೆ ಕೇಂದ್ರೀಕರಿಸಲು ಮತ್ತು ನಿಮ್ಮ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೀರಿ. ಆ ಮಾತುಗಳೇ ನಾನು ನಿನ್ನೆ ರಾತ್ರಿ ಮರಳಿ ಬಂದು ತಂಡದಲ್ಲಿ ಸೇರಿಕೊಂಡು ಮೈದಾನಕ್ಕಿಳಿಯಲು ಕಾರಣ'' ಎಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರಸ್ತುತ "ನಿನ್ನನ್ನು ನೆನಪಿಸಿಕೊಳ್ಳುವುದನ್ನು ಮಾಡಬಲ್ಲೆ ಅಷ್ಟೆ. ನೀವು ನನ್ನ ಬಗ್ಗೆ ಹೆಮ್ಮೆಪಡುವ ಎಲ್ಲ ಕೆಲಸಗಳನ್ನು ನಾನು ಮುಂದುವರಿಸುತ್ತೇನೆ. ನನ್ನ ಜೀವನದ ಪ್ರತಿ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ ನಿಮ್ಮ ಅನುಪಸ್ಥಿತಿಯನ್ನು ಅನುಭವಿಸುತ್ತಿರುವೆ " ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿಮ್ಮ ಆತ್ಮಕ್ಕೆ ಚಿರ ಶಾಂತಿ ಸಿಗಲಿ'' ಎಂದು ದಿವಂಗತ ಸಹೋದರಿಗೆ ಹರ್ಷಲ್ ಸಂತಾಪ ಸೂಚಿಸಿದ್ದಾರೆ.

ಕೆಜಿಎಫ್ 2 ಕುರಿತು ಕೊಹ್ಲಿ, ಫಾಫ್, ಡಿಕೆ ಮತ್ತು ಮ್ಯಾಕ್ಸ್‌ವೆಲ್ ಮಾಡಿದ ಕೆಲಸ ನೋಡಿದ್ರೆ ಹೆಮ್ಮೆ ಎನಿಸುತ್ತೆ!ಕೆಜಿಎಫ್ 2 ಕುರಿತು ಕೊಹ್ಲಿ, ಫಾಫ್, ಡಿಕೆ ಮತ್ತು ಮ್ಯಾಕ್ಸ್‌ವೆಲ್ ಮಾಡಿದ ಕೆಲಸ ನೋಡಿದ್ರೆ ಹೆಮ್ಮೆ ಎನಿಸುತ್ತೆ!

ಏಪ್ರಿಲ್ 12 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದರು. ನಂತರ ಅವರು ಏಪ್ರಿಲ್ 16 ರಂದು ಜರುಗಿದ ದೆಹಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದರು. ಈವರೆಗೂ ಆರ್‌ಸಿಬಿ ಪರ ಹರ್ಷಲ್ ಪಟೇಲ್ ಆಡಿರುವ 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

Story first published: Monday, April 18, 2022, 19:32 [IST]
Other articles published on Apr 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X