ಎಬಿ ಡಿವಿಲಿಯರ್ಸ್‌ ಹೇಳಿದ ಆ ಮಾತು ನನ್ನ ವೃತ್ತಿಜೀವನದುದ್ದಕ್ಕೂ ಹಾಗೆಯೇ ಉಳಿಯಲಿದೆ: ಹರ್ಷಲ್ ಪಟೇಲ್

ರಾಂಚಿಯಲ್ಲಿ ನಡೆದ ಚೊಚ್ಚಲ ಟಿ20 ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್ ಮೊದಲ ಪಂದ್ಯದಲ್ಲೇ ಬೊಂಬಾಂಟ್ ಪ್ರದರ್ಶನ ನೀಡಿದ್ರು. ಐಪಿಎಲ್‌ 2021ರ ಅದ್ಭುತ ಫಾರ್ಮ್ ಮುಂದುವರಿಸಿದ ಹರಿಯಾಣ ಬೌಲರ್‌ ಚೊಚ್ಚಲ ಪಂದ್ಯದಲ್ಲೇ ಎರಡು ವಿಕೆಟ್ ಕಬಳಿಸಿದ್ರು.

ನಾಲ್ಕು ಓವರ್‌ಗಳಲ್ಲಿ 13 ಡಾಟ್ ಬಾಲ್ ಎಸೆತ ಹರ್ಷಲ್ ಕೇವಲ 25 ರನ್‌ಗಳನ್ನ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನ ಪಡೆದರು. ಉತ್ತಮವಾಗೇ ಆಡ್ತಿದ್ದ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್ ಮತ್ತು ಗ್ಲೆನ್‌ ಫಿಲಿಪ್ಸ್ ವಿಕೆಟ್ ಕಬಳಿಸಿದ್ದೇ ವಿಶೇಷ. ಹೀಗಾಗಿ ಇವರ ಬೌಲಿಂಗ್ ಆಧರಿಸಿ ಪಂದ್ಯದ ಗೆಲುವಿನಲ್ಲಿ ಇವರ ಪಾತ್ರಕ್ಕೆ ಅನುಸಾರ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನ ಪಡೆದುಕೊಂಡ್ರು.

ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಹರ್ಷಲ್ ಪಟೇಲ್ ತಮ್ಮ ಕನಸನ್ನ ನನಸು ಮಾಡಿಕೊಳ್ಳುವ ಮೂಲಕ ಟೀಂ ಇಂಡಿಯಾದಲ್ಲಿ ಚೊಚ್ಚಲ ಹೆಜ್ಜೆಯನ್ನಿಟ್ಟಿದ್ದಾರೆ. ಇದೇ ವೇಳೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ತಮ್ಮ ಆರ್‌ಸಿಬಿ ಟೀಮ್‌ಮೇಟ್ ಎಬಿ ಡಿವಿಲಿಯರ್ಸ್ ಬಗ್ಗೆ ಹರ್ಷಲ್ ತುಂಬಾ ಮೆಚ್ಚುಗೆಯ ಮಾತನಾಡಿದ್ದಾರೆ. ಅಲ್ಲದೆ ತಾನು ಕೇಳಿದ ಪ್ರಶ್ನೆಗೆ ಎಬಿಡಿ ಉತ್ತರವು ಸದಾಕಾಲ ನನ್ನ ಜೊತೆಗಿರಲಿದೆ ಎಂದಿದ್ದಾರೆ.

ಎಬಿಡಿಯ ಆ ಮಾತು ನನಗೆ ಸಾಕಷ್ಟು ಸಹಾಯ ಮಾಡಿದೆ!

ಎಬಿಡಿಯ ಆ ಮಾತು ನನಗೆ ಸಾಕಷ್ಟು ಸಹಾಯ ಮಾಡಿದೆ!

ದಕ್ಷಿಣ ಆಫ್ರಿಕಾದ ಲೆಜೆಂಡ್ ಆಟಗಾರ ಎಬಿಡಿ ತಮ್ಮ ವೃತ್ತಿ ಜೀವನದ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ ಎಂದು ಹರ್ಷಲ್ ಪಟೇಲ್ ಮನಬಿಚ್ಚಿ ಮಾತನಾಡಿದ್ದಾರೆ. ಎಬಿಡಿ 2021ರ ಸೀಸನ್‌ನಲ್ಲಿ ತಮಗೆ ಹೇಳಿದ ಆ ಅಮೂಲ್ಯ ಮಾತುಗಳು ನನ್ನ ವೃತ್ತಿಜೀವನದುದ್ದಕ್ಕೂ ತೆಗೆದುಕೊಂಡು ಹೋಗಲಿದೆ ಎಂದಿದ್ದಾರೆ.

'AB ಸರ್' ನಾನು ನಿಮ್ಮ ಬಹುದೊಡ್ಡ ಅಭಿಮಾನಿ: ಎಬಿಡಿ ನಿವೃತ್ತಿ ಬಳಿಕ ಯುಜವೇಂದ್ರ ಚಹಾಲ್ ಭಾವನಾತ್ಮಕ ಪೋಸ್ಟ್‌

ಓವರ್‌ನಲ್ಲಿ ದೊಡ್ಡ ರನ್‌ಗಳನ್ನು ಕಡಿಮೆ ಮಾಡುವುದು ಹೇಗೆ?

ಓವರ್‌ನಲ್ಲಿ ದೊಡ್ಡ ರನ್‌ಗಳನ್ನು ಕಡಿಮೆ ಮಾಡುವುದು ಹೇಗೆ?

2021ರ ಐಪಿಎಲ್‌ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ತನ್ನ ಮೊದಲ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಸೇರಿಕೊಂಡ ಹರ್ಷಲ್ ತಮ್ಮ ವೃತ್ತಿಜೀವನದಲ್ಲಿ ಅಮೋಘ ಪ್ರದರ್ಶನ ನೀಡಿದ್ರು. ಇದರಲ್ಲಿ ಎಬಿಡಿಯ ಪಾತ್ರ ಬಹಳ ದೊಡ್ಡದು ಎಂಬುದು ಅವರ ಮಾತಾಗಿದೆ

ಪಟೇಲ್ ಎಬಿ ಡಿವಿಲಿಯರ್ಸ್‌ ಬಳಿ ಹೋಗಿ ದೊಡ್ಡ ಓವರ್‌ಗಳನ್ನು ಹೇಗೆ ಕಡಿಮೆ ಮಾಡುವುದು ಎಂದು ಕೇಳಿದ್ರಂತೆ. ಏಕೆಂದರೆ ಅದಕ್ಕೂ ಮೊದಲು ಐಪಿಎಲ್‌ನಲ್ಲಿ ಓವರ್‌ಗೆ 15 ರಿಂದ 20 ರನ್‌ಗಳನ್ನ ನೀಡುತ್ತಿದೆ ಎಂದಿದ್ದಾರೆ.

ಹಿರಿಯ ವಯಸ್ಸಿನಲ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಭಾರತದ ಕ್ರಿಕೆಟಿಗರು

ಬೌಲಿಂಗ್ ಮಾಡುವ ವಿಧಾನ ಬದಲಾಗಬಾರದು!

ಬೌಲಿಂಗ್ ಮಾಡುವ ವಿಧಾನ ಬದಲಾಗಬಾರದು!

ಹರ್ಷಲ್ ಪಟೇಲ್ ಹೆಚ್ಚು ರನ್‌ಗಳನ್ನ ಬಿಟ್ಟುಕೊಡದೇ ಇರುವುದು ಹೇಗೆ ಎಂದು ಕೇಳಿದ ಪ್ರಶ್ನೆಗೆ, ಎಬಿಡಿ ಅಮೂಲ್ಯವಾದ ಉತ್ತರ ನೀಡಿದ್ದಾರೆ. ಅವರು ಬೌಲ್ ಮಾಡಿದ ಉತ್ತಮ ಎಸೆತವನ್ನು ಎದುರಾಳಿ ಬ್ಯಾಟ್ಸ್‌ಮನ್ ಬೌಂಡರಿಗೆ ಹೊಡೆದಾಗ, ಬೌಲಿಂಗ್ ಮಾಡುವ ವಿಧಾನವನ್ನು ಬದಲಾಯಿಸಬಾರದು ಎಂದು ಹೇಳಿದ್ದಾರೆ.

ಏಕೆಂದರೆ ಉತ್ತಮ ಎಸೆತವನ್ನ ಬ್ಯಾಟ್ಸ್‌ಮನ್ ದಂಡಿಸಿ, ಬೌಲರ್ ತನ್ನ ತಂತ್ರವನ್ನು ಬದಲಾಯಿಸುವ ನಿರೀಕ್ಷೆಯಲ್ಲಿರುತ್ತಾನೆ ಎಂದಿದ್ದಾರೆ. ಹೀಗಾಗಿ ಈ ಡಿವಿಲಿಯರ್ಸ್‌ನ ಸಲಹೆಯು ಅವರ ವೃತ್ತಿಜೀವನದುದ್ದಕ್ಕೂ ಅವರೊಂದಿಗೆ ಉಳಿಯುತ್ತದೆ ಎಂದು ಪಟೇಲ್ ಹೇಳಿದರು.

"ಎಬಿ ನನ್ನ ವೃತ್ತಿಜೀವನದ ಮೇಲೆ ಭಾರೀ ಪರಿಣಾಮ ಬೀರಿದ್ದಾರೆ. ನಾನು ಯಾವಾಗಲೂ ಅವರ ಮೂಕ ಪ್ರೇಕ್ಷಕನಾಗಿದ್ದೇನೆ. ಇತ್ತೀಚೆಗೆ ನಾವು ಯುಎಇಯಲ್ಲಿ ನಮ್ಮ ಅಭಿಯಾನವನ್ನು ಪ್ರಾರಂಭಿಸಿದಾಗ ನಾನು ಅವರನ್ನು ಕೇಳಿದೆ, 'ನನ್ನ ದೊಡ್ಡ ಓವರ್‌ಗಳನ್ನು ನಾನು ಹೇಗೆ ಕಡಿಮೆಗೊಳಿಸಬಹುದು? ನಾನು ಐಪಿಎಲ್‌ನಲ್ಲಿ 12 ರಿಂದ 15 ಸಹ 20 ರನ್ ಓವರ್‌ಗಳನ್ನು ಬೌಲ್ ಮಾಡಿದ್ದೇನೆ. ಆದ್ದರಿಂದ ನಾನು ಅದನ್ನು ಹೇಗೆ ಕಡಿಮೆ ಮಾಡಬೇಕು?' ಎಂದು ನಾನು ಕೇಳಿದೆ. ಅದಕ್ಕೆ ಅವರು 'ಬ್ಯಾಟ್ಸ್‌ಮನ್ ನಿಮ್ಮ ಉತ್ತಮ ಎಸೆತವನ್ನು ಹೊಡೆದಾಗ, ನೀವು ಅದನ್ನು ಬದಲಾಯಿಸಬಾರದು'' ಎಂದು ಸಲಹೆ ನೀಡಿದರು

ನಿರಂತರವಾಗಿ ಉತ್ತಮ ಎಸೆತಗಳಿಂದ ಕಟ್ಟಿಹಾಕಬೇಕು!

ನಿರಂತರವಾಗಿ ಉತ್ತಮ ಎಸೆತಗಳಿಂದ ಕಟ್ಟಿಹಾಕಬೇಕು!

ಎಬಿಡಿ ಸಲಹೆಗಳನ್ನ ಬಿಚ್ಚಿಟ್ಟಿರುವ ಹರ್ಷಲ್‌ '' ನಿಮ್ಮ ಉತ್ತಮ ಎಸೆತಗಳನ್ನು ಮಾತ್ರ ಹೊಡೆಯಲು ಎದುರಾಳಿ ಬ್ಯಾಟ್ಸ್‌ಮನ್‌ಗೆ ನೀವು ನಿರಂತರವಾಗಿ ಒತ್ತಾಯಿಸಬೇಕು. ಒಮ್ಮೆ ನಿಮ್ಮ ಉತ್ತಮ ಎಸೆತಕ್ಕೆ ಆತ ದಂಡಿಸಿದರೆ, ನಿಮ್ಮ ಬೌಲಿಂಗ್ ವಿಧಾನವನ್ನು ಬದಲಾಯಿಸಲಿ ಎಂದು ಬ್ಯಾಟ್ಸ್‌ಮನ್ ನಿರೀಕ್ಷಿಸುತ್ತಾನೆ ಎಂದು ಎಬಿಡಿ ಹೇಳಿದ್ದಾರಂತೆ. ಇದು ಐಪಿಎಲ್‌ 2021ರ ಎರಡನೇ ಹಂತದಲ್ಲಿ ನನ್ನೊಂದಿಗೆ ಉಳಿದುಕೊಂಡಿದೆ ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುತ್ತದೆ'' ಎಂದು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ನಂತರ ಪಟೇಲ್ ಹೇಳಿದರು.

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ RCBಯ ಪ್ರೀತಿಯ ಎಬಿಡಿ: 10 ವಿಶೇಷ ದಾಖಲೆಗಳು ಇಲ್ಲಿವೆ

ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು ? | Oneindia Kannada
ಉತ್ತಮ ಆ್ಯಂಗಲ್‌ಗಳಿಂದ ಬೌಲಿಂಗ್ ಮಾಡುವೆ!

ಉತ್ತಮ ಆ್ಯಂಗಲ್‌ಗಳಿಂದ ಬೌಲಿಂಗ್ ಮಾಡುವೆ!

ಹರ್ಷಲ್ ಪಟೇಲ್ ಇಷ್ಟು ಯಶಸ್ವಿಯಾಗಲು ಅವರ ಉತ್ತಮ ಆ್ಯಂಗಲ್‌ಗಳು ಕೂಡ ದೊಡ್ಡ ಪಾತ್ರವಹಿಸಿವೆ ಎಂದು ಪಟೇಲ್ ತಮ್ಮ ಮಾತಿಗೆ ಸೇರಿಸಿದ್ರು. ವಿವಿಧ ಆ್ಯಂಗಲ್‌ಗಳಿಂದ ಬೌಲಿಂಗ್ ಮಾಡುವುದರಿಂದ ಬ್ಯಾಟ್ಸ್‌ಮನ್‌ಗೆ ಕಷ್ಟವಾಗಬಹುದು ಎಂದು ಪಟೇಲ್ ವಿವರಿಸಿದ್ರು. ಅವರು ಬೌಲಿಂಗ್ ಮಾಡುವ ಆ್ಯಂಗಲ್ ರಚಿಸುವುದು ಅವರ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿದೆ ಎಂದು ಪಟೇಲ್ ತಮ್ಮ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, November 20, 2021, 10:41 [IST]
Other articles published on Nov 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X