ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚರ್ಚೆಗೆ ಕಾರಣವಾಯ್ತು ಪಾಕ್ ಕ್ರಿಕೆಟರ್ ಹಸನ್ ಅಲಿ ಕ್ಯಾಚ್: ವಿಡಿಯೋ

Hasan Ali’s dubious catch in practice match against Kent sparks debate - Watch

ಬೆಕೆನ್ಹ್ಯಾಮ್, ಏಪ್ರಿಲ್ 29: ಕ್ಯಾಚ್ ಕೈಚೆಲ್ಲಿಯೂ 'ಕ್ಯಾಚ್' ಸಂಭ್ರಮಾಚರಿಸಿದ ಪಾಕಿಸ್ತಾನ ಬೌಲರ್ ಹಸನ್ ಅಲಿ ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇಂಗ್ಲೆಂಡ್‌ನ ಬೆಕೆನ್ಹ್ಯಾಮ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಕೌಂಟಿ ತಂಡ ಕೆಂಟ್ ಮತ್ತು ಪಾಕ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ 'ವಿವಾದಾತ್ಮಕ ಕ್ಯಾಚ್' ಪ್ರಸಂಗ ನಡೆಯಿತು.

'ವಿಶೇಷ ಅಭಿಮಾನಿ', ಸಹ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿದ ರಸೆಲ್'ವಿಶೇಷ ಅಭಿಮಾನಿ', ಸಹ ಆಟಗಾರರ ಜೊತೆ ಹುಟ್ಟುಹಬ್ಬ ಆಚರಿಸಿದ ರಸೆಲ್

ಏಪ್ರಿಲ್ 27ರಂದು ನಡೆದ ಪಾಕ್‌ ಕ್ರಿಕೆಟ್‌ ತಂಡದ ಇಂಗ್ಲೆಂಡ್ ಪ್ರವಾಸ ಪಂದ್ಯದಲ್ಲಿ ಪಾಕಿಸ್ತಾನ 100 ರನ್‌ಗಳ ಗೆಲುವು ದಾಖಲಿಸಿತ್ತು. ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಪಾಕ್, 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 358 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಕೆಂಟ್ 44.1 ಓವರ್‌ಗೆ ಸರ್ವಪತನ ಕಂಡು 258 ರನ್ ಪೇರಿಸಿ ಶರಣಾಯ್ತು.

30ನೇ ಓವರ್‌ ಎಸೆಯೋಕೆ ಹಸನ್ ಅಲಿ ಬಂದಾಗ ಎದುರಿನಲ್ಲಿ ಅಲೆಕ್ಸ್ ಬ್ಲೇಕ್ ಇದ್ದರು. 29.3ನೇ ಓವರ್‌ನಲ್ಲಿ ಬ್ಲೇಕ್ ಬ್ಯಾಟ್ ತಾಗಿದ ಚೆಂಡು ಹಸನ್ ಮೇಲ್ನೇರಕ್ಕೆ ಚಿಮ್ಮಿತು. ಅದನ್ನು ಅಲಿ ಕ್ಯಾಚ್ ಮಾಡಿದರು. ಮರುಕ್ಷಣವೇ ಚೆಂಡನ್ನು ನೆಲಕ್ಕೆ ಚೆಲ್ಲಿದರು. ಅಂದರೆ ಕ್ಯಾಚೋ, ಡ್ರಾಪೋ ಖಾತರಿಯಾಗದಂತ ಕ್ಯಾಚ್ ಅದು.

ಐಪಿಎಲ್‌: ನಿಯಮ ಉಲ್ಲಂಘಿಸಿದ ರೋಹಿತ್‌ ಶರ್ಮಾಗೆ ದಂಡಐಪಿಎಲ್‌: ನಿಯಮ ಉಲ್ಲಂಘಿಸಿದ ರೋಹಿತ್‌ ಶರ್ಮಾಗೆ ದಂಡ

ಆದರೆ ಹಸನ್ ಆ ಕ್ಯಾಚನ್ನು 'ಕ್ಯಾಚ್' ಎಂದೇ ಸಮರ್ಥಿಸಿ ಸಂಭ್ರಮಾಚರಿಸಿದರು. ಅಲೆಕ್ಸ್ ಅವರನ್ನು ಔಟ್ ಎಂದೂ ತೀರ್ಪೀಯಲಾಗಿತ್ತು. ಆದರೆ ಪಂದ್ಯದ ಬಳಿಕ ಈ ಕ್ಯಾಚ್ ವಿಡಿಯೋ ಚರ್ಚೆಗೀಡಾಗಿದೆ. ಕ್ರಿಕೆಟ್ ಕಾನೂನಿನ ಪ್ರಕಾರ ಒಬ್ಬ ಫೀಲ್ಡರ್ ಚೆಂಡನ್ನು ಮತ್ತು ಸ್ವಂತ ಚಲನೆಯನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟು ಮಾಡಿದ ಕ್ಯಾಚ್, ಸರಿಯಾದ ಕ್ಯಾಚ್ ಎನಿಸುತ್ತದೆ. ಆದರೆ ವಿಡಿಯೋ ನೋಡುವವರಿಗೆ ಹಾಗನ್ನಿಸುವುದಿಲ್ಲ. ಹೀಗಾಗಿಯೇ ವಿವಾದ ಹುಟ್ಟಿಕೊಂಡಿದೆ.

Story first published: Monday, April 29, 2019, 19:30 [IST]
Other articles published on Apr 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X