ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

hasan ali 2019

ಹೊಸದಿಲ್ಲಿ, ಜುಲೈ 30: ಪಾಕಿಸ್ತಾನ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಹಸನ್‌ ಅಲಿ, ಭಾರತದ ಹರಿಯಾಣ ಮೂಲದವರಾದ ಶಮಿಯಾ ಅಝ್ರೂ ಅವರೊಟ್ಟಿಗೆ ಆಗಸ್ಟ್‌ 20ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಹಸನ್‌ ಮತ್ತು ಶಮಿಯಾ ಅವರ ವಿವಾವ ದುಬೈನ ಅಟ್ಲಾಂಟಿಸ್‌ ಪಾಮ್‌ ಹೋಟೆಲ್‌ನಲ್ಲಿ ನಡೆಯಲಿದ್ದು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ. ಈ ವಿಚಾರವನ್ನು ಶಮಿಯಾ ಅವರ ತಂದೆ ಲಿಯಾಖತ್‌ ಅಲಿ ಖಾತ್ರಿ ಪಡಿಸಿದ್ದಾರೆ. ಶಮಿಯಾ ಅವರ ತಂಡ ಮಾಜಿ ಪಂಚಾಯತ್‌ ಅಧಿಕಾರಿ ಆಗಿದ್ದಾರೆ.

ಟೆಸ್ಟ್ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಕಿಕ್‌ ಔಟ್‌ಗೆ ಪಾಕಿಸ್ತಾನ ನಿರ್ಧಾರ?!

ಮಾನವ್‌ ರಚನಾ ಯೂನಿವರ್ಸಿಟಿಯಲ್ಲಿ ಏರೊನಾಟಿಕಲ್ಸ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿರುವ ಶಮಿಯಾ, ಸದ್ಯ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯಲ್ಲಿ ಫ್ಲೈಟ್‌ ಎಂಜಿನೀಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂದಹಾಗೆ ಪಾಕಿಸ್ತಾನದ ಕ್ರಿಕೆಟಿಗರು ಭಾರತೀಯ ವಧುವನ್ನು ವರಿಸುತ್ತಿರುವುದು ಇದೇ ಮೊದಲಲ್ಲ. ಪಾಕ್‌ ಕ್ರಿಕೆಟ್‌ ತಂಡದ ಮಾಜಿ ದಿಗ್ಗಜರಾದ ಜಾಹಿರ್‌ ಅಬ್ಬಾಸ್‌ ಮತ್ತು ಮೊಹ್ಸಿನ್‌ ಖಾನ್‌ ಈ ಪಟ್ಟಿಯಲ್ಲಿ ಮುಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಡೆದ ವಿಶ್ವಕಪ್‌ ಟೂರ್ನಿಯೊಂದಿಗೆ ನಿವೃತ್ತಿ ಘೋಷಿಸಿದ ಸ್ಟಾರ್‌ ಆಲ್‌ರೌಂಡರ್‌ ಶೊಯೇಬ್‌ ಮಲಿಕ್‌, ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಝಾ ಅವರೊಟ್ಟಿಗೆ 2010ರ ಏಪ್ರಿಲ್‌ 12ರಂದು ವರಿಸಿದ್ದರು.

ಕೋಚ್‌ ಆಗಿ ರವಿ ಶಾಸ್ತ್ರಿ ಸಾಧನೆಯೇನು? ಎಂದು ಪ್ರಶ್ನಿಸಿದ ರಾಬಿನ್‌ ಸಿಂಗ್‌ಕೋಚ್‌ ಆಗಿ ರವಿ ಶಾಸ್ತ್ರಿ ಸಾಧನೆಯೇನು? ಎಂದು ಪ್ರಶ್ನಿಸಿದ ರಾಬಿನ್‌ ಸಿಂಗ್‌

ಅಂದಹಾಗೆ ವಿಶ್ವಕಪ್‌ ಟೂರ್ನಿಯಲ್ಲಿ ಹಸನ್‌ ಅಲಿ ಅವರ ಪ್ರದರ್ಶನ ಅಷ್ಟು ಹೇಳಿಕೊಳ್ಳುವಂತಿರಲಿಲ್ಲ. ಟೂರ್ನಿಯಲ್ಲಿ ಪಾಕ್‌ ಪರ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದು ಒಂದೆರಡು ವಿಕೆಟ್‌ ಪಡೆಯಲಷ್ಟೇ ಶಕ್ತರಾದರು. ಅದರಲ್ಲೂ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆದ ಟೀಮ್‌ ಇಂಡಿಯಾ ವಿರುದ್ಧದ ಹೈ ವೋಲ್ಟೇಜ್‌ ಪಂದ್ಯದಲ್ಲಿ 84 ರನ್‌ಗಳನ್ನು ಬಿಟ್ಟುಕೊಟ್ಟ ಅಲಿ ಅವರನ್ನು ನಂತರದ ಪಂದ್ಯಗಳಿಂದ ಕೈಬಿಡಲಾಗಿತ್ತು.

2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹಸನ್‌ ಅಲಿ, 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ತಂಡಕ್ಕೆ ಚಾಂಪಿಯನ್ಸ್‌ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ವೃತ್ತಿ ಬದುಕಿನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು.

ಹಸನ್‌ ಅಲಿ ಟೆಸ್ಟ್‌ ಸಾಧನೆ

ಹಸನ್‌ ಅಲಿ ಟೆಸ್ಟ್‌ ಸಾಧನೆ

09 ಪಂದ್ಯ
31 ವಿಕೆಟ್‌
5/45 ಶ್ರೇಷ್ಠ ಸಾಧನೆ
28.90 ಸರಾಸರಿ
3.09 ಎಕಾನಮಿ
56.0 ಸ್ಟ್ರೈಕ್‌ರೇಟ್‌
01 ಐದು ವಿಕೆಟ್‌ ಸಾಧನೆ

 ಒಡಿಐ ಕ್ರಿಕೆಟ್‌ ಪರ್ಫಾರ್ಮನ್ಸ್‌

ಒಡಿಐ ಕ್ರಿಕೆಟ್‌ ಪರ್ಫಾರ್ಮನ್ಸ್‌

53 ಪಂದ್ಯ
82 ವಿಕೆಟ್‌
5/34 ಶ್ರೇಷ್ಠ ಸಾಧನೆ
29.03 ಸರಾಸರಿ
5.60 ಎಕಾನಮಿ
31.0 ಸ್ಟ್ರೈಕ್‌ ರೇಟ್‌
3 ಐದು ವಿಕೆಟ್‌ ಸಾಧನೆ

ಅಂತಾರಾಷ್ಟ್ರೀಯ ಟಿ20 ಹೈಲೈಟ್ಸ್‌

ಅಂತಾರಾಷ್ಟ್ರೀಯ ಟಿ20 ಹೈಲೈಟ್ಸ್‌

30 ಪಂದ್ಯ
35 ವಿಕೆಟ್‌
3/23 ಶ್ರೇಷ್ಠ ಸಾಧನೆ
25.05 ಸರಾಸರಿ
8.47 ಎಕಾನಮಿ
17.7 ಸ್ಟ್ರೈಕ್‌ರೇಟ್‌

ಫರ್ಸ್ಟ್ ಕ್ಲಾಸ್‌ ಕ್ರಿಕೆಟ್‌

ಫರ್ಸ್ಟ್ ಕ್ಲಾಸ್‌ ಕ್ರಿಕೆಟ್‌

38 ಪಂದ್ಯ
157 ವಿಕೆಟ್‌
8/107 ಶ್ರೇಷ್ಠ ಸಾಧನೆ
25.60 ಸರಾಸರಿ
3.36 ಎಕಾನಮಿ
45.7 ಸ್ಟ್ರೈಕ್‌ರೇಟ್‌
09 ಐದು ವಿಕೆಟ್‌ ಸಾಧನೆ
02 ಹತ್ತು ವಿಕೆಟ್‌ ಸಾಧನೆ

Story first published: Tuesday, July 30, 2019, 17:02 [IST]
Other articles published on Jul 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X