ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!

Hasan Ali trolled on social media after Pakistans exit from T20 World Cup 2021

ನವೆಂಬರ್‌ 11ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ತಂಡದ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಪೈಪೋಟಿಯುತ ಮೊತ್ತವನ್ನು ದಾಖಲಿಸಿದರೂ ಸಹ ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿ ಸೋಲನ್ನು ಅನುಭವಿಸುವುದರ ಮೂಲಕ ಫೈನಲ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಹೀಗೆ ಪಾಕಿಸ್ತಾನ ತಂಡ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸುವುದರ ಮೂಲಕ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪಂದ್ಯವನ್ನು ಪ್ರವೇಶಿಸಿತು.

'ನಾಚಿಕೆಗೇಡಿನ ಆಟ': ಪಾಕ್ ವಿರುದ್ಧ ಸಿಕ್ಸರ್ ಬಾರಿಸಿದ ವಾರ್ನರ್‌ ಕುರಿತು ಕಿಡಿಕಾರಿದ ಗಂಭೀರ್!'ನಾಚಿಕೆಗೇಡಿನ ಆಟ': ಪಾಕ್ ವಿರುದ್ಧ ಸಿಕ್ಸರ್ ಬಾರಿಸಿದ ವಾರ್ನರ್‌ ಕುರಿತು ಕಿಡಿಕಾರಿದ ಗಂಭೀರ್!

ಇನ್ನು ವಿಶೇಷವಾಗಿ ಮ್ಯಾಥ್ಯೂ ವೇಡ್ ಈ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಕೇವಲ 17 ಎಸೆತಗಳಲ್ಲಿ ಅಜೇಯ 41 ರನ್ ಬಾರಿಸಿದ ಮ್ಯಾಥ್ಯೂ ವೇಡ್ 2 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಅಂತಿಮವಾಗಿ 10 ಎಸೆತಗಳಲ್ಲಿ 20 ರನ್ ಅಗತ್ಯವಿದ್ದಾಗ ಶಾಹಿನ್ ಅಫ್ರಿದಿ ಎಸೆತದಲ್ಲಿ ಸಿಕ್ಸ್ ಬಾರಿಸಲು ಮ್ಯಾಥ್ಯೂ ವೇಡ್ ಯತ್ನಿಸಿದರು. ಆದರೆ ಆ ಹೊಡೆತಕ್ಕೆ ಚೆಂಡು ಹಸನ್ ಅಲಿ ಕೈಗೆ ಹೋಗಿತ್ತು, ಆದರೂ ಸಹ ಹಸನ್ ಅಲಿ ಆ ಕ್ಯಾಚ್ ಹಿಡಿಯುವಲ್ಲಿ ವಿಫಲವಾಗಿ ಕ್ಯಾಚನ್ನು ಕೈಚೆಲ್ಲಿದರು. ಹೀಗೆ ಹಸನ್ ಅಲಿ ಕ್ಯಾಚ್ ಬಿಟ್ಟದ್ದೇ ತಡ ಅದೇ ಓವರ್‌ನ ಮುಂದಿನ 3 ಎಸೆತಗಳಿಗೂ ಸಿಕ್ಸರ್ ಚಚ್ಚುವ ಮೂಲಕ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯವನ್ನು ಇನ್ನೂ 1 ಓವರ್ ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿಸಿಬಿಟ್ಟರು. ಹೀಗೆ ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ಪರ ಅಬ್ಬರಿಸಿದ ಮ್ಯಾಥ್ಯೂ ವೇಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಾಕ್ ವಿರುದ್ಧ ವಾರ್ನರ್‌ ನಾಟ್ಔಟ್ ಆಗಿದ್ದರೂ ನಿರ್ಗಮಿಸಲು ಕಾರಣ ಆ ಆಟಗಾರ!; ಸತ್ಯ ಬಿಚ್ಚಿಟ್ಟ ವೇಡ್ಪಾಕ್ ವಿರುದ್ಧ ವಾರ್ನರ್‌ ನಾಟ್ಔಟ್ ಆಗಿದ್ದರೂ ನಿರ್ಗಮಿಸಲು ಕಾರಣ ಆ ಆಟಗಾರ!; ಸತ್ಯ ಬಿಚ್ಚಿಟ್ಟ ವೇಡ್

ಹೀಗೆ ಶಾಹಿನ್ ಅಫ್ರಿದಿ ಮಾಡಿದ 19ನೇ ಓವರ್‌ನ ಕೊನೆಯ 4 ಎಸೆತಗಳು ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟವು. ಅದರಲ್ಲಿಯೂ ಮೂರನೇ ಎಸೆತದಲ್ಲಿ ಪಾಕಿಸ್ತಾನ ತಂಡದ ಆಟಗಾರ ಹಸನ್ ಅಲಿ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಬಿಟ್ಟದ್ದೇ ಪಾಕಿಸ್ತಾನದ ಸೋಲಿಗೆ ಕಾರಣವಾಯಿತು ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕೂಡ ಹೇಳಿದ್ದಾರೆ. ಇನ್ನು ಹಸನ್ ಅಲಿ ಈ ಕ್ಯಾಚ್ ಹಿಡಿದಿದ್ದರೆ ಆಸ್ಟ್ರೇಲಿಯಾ ಮೇಲೆ ಒತ್ತಡ ಹೆಚ್ಚಾಗುತ್ತಿತ್ತು ಮತ್ತು ಮುಂದಿನ 3 ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದ ಮ್ಯಾಥ್ಯೂ ವೇಡ್ ಆ ಎಸೆತದಲ್ಲಿಯೇ ಪೆವಿಲಿಯನ್ ಸೇರಿಕೊಳ್ಳುತ್ತಿದ್ದರು. ಹೀಗೆ ಹಸನ್ ಅಲಿ ಕ್ಯಾಚ್ ಬಿಟ್ಟ ಕಾರಣ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವಂತಾಗಿದ್ದು, ಈಗಾಗಲೇ ಪಾಕಿಸ್ತಾನ ತಂಡದ ಆಟಗಾರ ಹಸನ್ ಅಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟ್ರೋಲ್ ಮತ್ತು ಟೀಕೆಗಳು ವ್ಯಕ್ತವಾಗತೊಡಗಿವೆ. ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಬಿಟ್ಟ ಹಸನ್ ಅಲಿ ನೆಟ್ಟಿಗರ ಕೈಗೆ ಸಿಕ್ಕು ಎಷ್ಟರಮಟ್ಟಿಗೆ ಟ್ರೋಲ್ ಆಗಿದ್ದಾರೆ ಎಂಬುದರ ಕುರಿತ ಮಾಹಿತಿ ಮುಂದೆ ಓದಿ..

ಕೇಕ್ ತಿನ್ನಿಸಲಿಲ್ಲ ಅಂತ ಕ್ಯಾಚ್ ಬಿಟ್ಟ ಎಂದ ನೆಟ್ಟಿಗ!

ಕೇಕ್ ತಿನ್ನಿಸಲಿಲ್ಲ ಅಂತ ಕ್ಯಾಚ್ ಬಿಟ್ಟ ಎಂದ ನೆಟ್ಟಿಗ!

ಹಸನ್ ಅಲಿ ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತ ಕೂಡಲೇ ಹಸನ್ ಅಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಶುರುವಾಗಿದ್ದವು. ಹೀಗೆ ನೆಟ್ಟಿಗನೋರ್ವ ಹಸನ್ ಅಲಿ ವಿರುದ್ಧ ಟ್ರೋಲ್ ಮೂಲಕ ಟೀಕಿಸಿದ್ದು ಪಾಕಿಸ್ತಾನ ತಂಡದ ಆಟಗಾರನೋರ್ವನ ಹುಟ್ಟುಹಬ್ಬದ ಹಳೆಯ ವಿಡಿಯೋವನ್ನು ಹಂಚಿಕೊಳ್ಳುವುದರ ಮೂಲಕ ಹಸನ್ ಅಲಿಯ ಕಾಲೆಳೆದಿದ್ದಾರೆ. ಈ ವಿಡಿಯೋದಲ್ಲಿ ಹಸನ್ ಅಲಿಗೆ ಪಾಕ್ ಆಟಗಾರನೋರ್ವ ಕೇಕ್ ತಿನ್ನಿಸಲು ಮುಂದಾಗುತ್ತಾನೆ, ಆದರೆ ಇದಕ್ಕೆ ಶಾಹಿನ್ ಅಫ್ರಿದಿ ಅಡ್ಡ ಬಂದ ಕಾರಣದಿಂದಾಗಿ ಹಸನ್ ಅಲಿಗೆ ಆ ಆಟಗಾರ ಕೇಕ್ ತಿನ್ನಿಸಲು ಆಗುವುದಿಲ್ಲ. ಹೀಗೆ ಈ ವಿಡಿಯೋದಲ್ಲಿ ಕೇಕ್ ತಿನ್ನಲು ಬಾಯ್ತೆರೆದು ನಿಂತಿದ್ದ ಹಸನ್ ಅಲಿ ಕೇಕ್ ಸಿಗದೇ ಸಪ್ಪೆ ಮುಖ ಹಾಕಿಕೊಂಡು ನಿಲ್ಲುತ್ತಾನೆ. ಹೀಗೆ ಈ ವಿಡಿಯೋವನ್ನು ಬಳಸಿಕೊಂಡಿರುವ ಈ ನೆಟ್ಟಿಗ ಅಂದು ಕೇಕ್ ತಿನ್ನಿಸಲಿಲ್ಲ ಎಂಬ ಕಾರಣಕ್ಕೆ ಇಂದು ಹಸನ್ ಅಲಿ ಕ್ಯಾಚ್ ಬಿಡುವುದರ ಮೂಲಕ ತನ್ನ ಸೇಡನ್ನು ತೀರಿಸಿಕೊಂಡಿದ್ದಾನೆ ಎಂದು ಟ್ರೋಲ್ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಹಿಂದಿರುಗುತ್ತಿರುವ ಹಸನ್ ಅಲಿ

ಪಾಕಿಸ್ತಾನಕ್ಕೆ ಹಿಂದಿರುಗುತ್ತಿರುವ ಹಸನ್ ಅಲಿ

ಮತ್ತೋರ್ವ ನೆಟ್ಟಿಗ ಹಸನ್ ಅಲಿಯ ವಿಚಿತ್ರ ವೇಷದ ಭಾವಚಿತ್ರವನ್ನು ಹಂಚಿಕೊಂಡಿದ್ದು ಹಸನ್ ಅಲಿ ಈ ರೀತಿಯಾಗಿ ಪಾಕಿಸ್ತಾನ ಪ್ರವೇಶಿಸಲಿದ್ದಾನೆ ಎಂದು ಕಾಲೆಳೆದಿದ್ದಾರೆ. ಹೌದು, ಮೈತುಂಬ ಲೆಗ್ ಪ್ಯಾಡ್ ಧರಿಸಿಕೊಂಡಿರುವ ಹಸನ್ ಅಲಿಯ ಫೋಟೊವನ್ನು ಹಂಚಿಕೊಂಡಿದ್ದು, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಕಲ್ಲು ತೂರಿದರೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹಸನ್ ಅಲಿ ಈ ರೀತಿ ಲೆಗ್ ಪ್ಯಾಡ್ ಬಳಸಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬರ್ಥದಲ್ಲಿ ನೆಟ್ಟಿಗ ಈ ಫೋಟೋವನ್ನು ಹರಿಬಿಟ್ಟಿದ್ದಾನೆ.

ಹಸನ್ ಅಲಿ ಬಿಟ್ಟಿದ್ದು ಕೇವಲ ಕ್ಯಾಚ್ ಮಾತ್ರವಲ್ಲ, ಪಾಕಿಸ್ತಾನದ ಮರ್ಯಾದೆಯನ್ನೂ ಕೂಡ

ಹಸನ್ ಅಲಿ ಬಿಟ್ಟಿದ್ದು ಕೇವಲ ಕ್ಯಾಚ್ ಮಾತ್ರವಲ್ಲ, ಪಾಕಿಸ್ತಾನದ ಮರ್ಯಾದೆಯನ್ನೂ ಕೂಡ

ಹಸನ್ ಅಲಿ ಕ್ಯಾಚ್ ಬಿಟ್ಟಿರುವುದರ ಕುರಿತು ಮತ್ತೋರ್ವ ನೆಟ್ಟಿಗ ಟ್ವೀಟ್ ಮಾಡಿದ್ದು, ಹಸನ್ ಅಲಿ ಬಿಟ್ಟಿರುವುದು ಕೇವಲ ಕ್ಯಾಚ್ ಮಾತ್ರವಲ್ಲ ಪಾಕಿಸ್ತಾನದ ಮರ್ಯಾದೆಯನ್ನು, ಪಾಕಿಸ್ತಾನದ ಕ್ರಿಕೆಟ್ ಪರಂಪರೆಯನ್ನು, ಫೈನಲ್ ಪಂದ್ಯಕ್ಕೆ ಇಮ್ರಾನ್ ಖಾನ್ ಪ್ರವೇಶಿಸುವುದನ್ನು, ಸಯೀದ್ ಅಜ್ಮಲ್ ಸೇಡನ್ನು, ಸದಾಬ್ ಖಾನ್ ಮತ್ತು ಶಾಹಿನ್ ಅಫ್ರಿದಿಯ ಶ್ರಮವನ್ನು ಹಾಗೂ ತನ್ನನ್ನು ತಾನೇ ತಂಡದಿಂದ ಕೈಬಿಟ್ಟಿದ್ದಾನೆ ಎಂದು ಬರೆದುಕೊಂಡಿದ್ದಾನೆ. ಹೀಗೆ ಇನ್ನೂ ಮುಂತಾದ ಹಲವಾರು ರೀತಿಯ ಟ್ರೋಲ್ ಮತ್ತು ಟೀಕೆಗಳು ಹಸನ್ ಅಲಿ ವಿರುದ್ಧ ವ್ಯಕ್ತವಾಗುತ್ತಿದ್ದು, ಇನ್ನೂ ಕೆಲವರು ಹಸನ್ ಅಲಿ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ತೆರಳಿ ಆತನ ಫೋಟೋಗಳಿಗೆ ಅಸಭ್ಯವಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ.

Story first published: Friday, November 12, 2021, 17:25 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X