ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

‘Have seen Indian and Pakistani cricketers eat together’: Sarfaraz Ahmed

ಲಾಹೋರ್: ಹೈವೋಲ್ಟೇಜಿನಿಂದ ಕೂಡಿರುವ ಭಾರತ vs ಪಂದ್ಯಗಳು ಐಸಿಸಿ ಟೂರ್ನಿಯ ಹೊರತಾಗಿ ನಡೆಯುತ್ತಿಲ್ಲ. ಆದರೆ ಪಾಕಿಸ್ತಾನ ಮತ್ತು ಭಾರತ ತಂಡಗಳು ಕ್ರಿಕೆಟ್‌ ಆಡುವುದು ಇನ್ನುಮುಂದೆ ಸಾಧ್ಯವಿಲ್ಲ ಎಂಬ ವಾದವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ತಳ್ಳಿ ಹಾಕಿದ್ದಾರೆ. ಉಭಯ ತಂಡಗಳು ಶೀಘ್ರದಲ್ಲೇ ಮೈದಾನದಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂಬ ಭರವಸೆ ನನಗಿದೆ ಎಂದು ಅಹ್ಮದ್ ಹೇಳಿದ್ದಾರೆ.

ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!

ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ-ಪಾಕ್ ತಂಡಗಳು ಪಾಲ್ಗೊಳ್ಳುತ್ತಿಲ್ಲ. ಇತ್ತಂಡಗಳ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಿಂತು ವರ್ಷಗಳೇ ಕಳೆದಿವೆ. ರಾಜಕೀಯ ಅಡ್ಡಗಾಲಿನಿಂದಾಗಿ ಉಭಯ ತಂಡಗಳ ರೋಚಕ ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಬೇಕಾಗಿ ಬಂದಿದೆ.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಆದರೆ ಮುಂಬರುವ ದಿನಗಳಲ್ಲಿ ಎರಡೂ ತಂಡಗಳು ಮತ್ತೆ ಮೈದಾನಕ್ಕಿಳಿಯಲಿವೆ ಎಂಬ ಆಶಯ ಸರ್ಫರಾಜ್ ವ್ಯಕ್ತಪಡಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಸ್ಮರಿಸಿದ ಅಹ್ಮದ್

ಚಾಂಪಿಯನ್ಸ್ ಟ್ರೋಫಿ ಸ್ಮರಿಸಿದ ಅಹ್ಮದ್

ಭಾರತ-ಪಾಕ್ ತಂಡಗಳ ನಡುವೆ ವೈಮನಸ್ಸು ಇರಲಿಲ್ಲ ಎಂಬ ವಿಚಾರವನ್ನು ಸರ್ಫರಾಜ್ ಹೇಳಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಕ್ಷಣ ಸ್ಮರಿಸಿರುವ ಅಹ್ಮದ್, ಆವತ್ತು ಪಾಕ್ ತಂಡ ಭಾರತವನ್ನು ಸೋಲಿಸಿದ ಬಳಿಕ ಕೂಡ ಎರಡೂ ತಂಡಗಳ ಆಟಗಾರರು ಆನಂದಿಸುತ್ತಿದ್ದರು. ಪರಸ್ಪರ ಜೋಕ್ ಶೇರ್ ಮಾಡುತ್ತ ನಕ್ಕಿದ್ದರು ಎಂದಿದ್ದಾರೆ.

ಎರಡೂ ದೇಶಗಳ ಆಟಗಾರರಲ್ಲಿ ಗೆಳೆತನವಿದೆ

ಎರಡೂ ದೇಶಗಳ ಆಟಗಾರರಲ್ಲಿ ಗೆಳೆತನವಿದೆ

'ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜನರಲ್ಲಿ ಕ್ರಿಕೆಟ್‌ ಬಗ್ಗೆ ಅಪಾರ ಪ್ರೀತಿದೆ, ಉತ್ಸಾಹವಿದೆ. ಪಾಕಿಸ್ತಾನ ಮತ್ತು ಭಾರತದ ಆಟಗಾರರ ಮಧ್ಯೆ ಒಳ್ಳೆಯ ಗೆಳೆತನ ಇದ್ದಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ,' ಎಂದು ಕ್ರಿಕ್‌ ಟ್ರ್ಯಾಕರ್ ಜೊತೆ ಮಾತನಾಡಿದ ಸರ್ಫರಾಜ್ ಹೇಳಿದ್ದಾರೆ.

ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ

ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ

'ನಾನು 2007ರಲ್ಲಿ ಭಾರತಕ್ಕೆ ಹೋಗಿದ್ದಾಗ, 2008ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿದ್ದಾಗ ಎರಡೂ ದೇಶಗಳ ಆಟಗಾರರು ಜೊತೆಯಾಗಿ ಕೂತು ಊಟ ಮಾಡಿದ್ದನ್ನು ನೋಡಿದ್ದೇನೆ. ಆದರೆ ಈಗ ದುರದೃಷ್ಟಕರವಾಗಿ ಎರಡೂ ದೇಶಗಳು ಪಂದ್ಯ ಆಡದ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ನಾಳೆ ಸಂದರ್ಭ ಸುಧಾರಿಸುತ್ತದೆ. ಭಾರತ-ಪಾಕಿಸ್ತಾನ ಪಂದ್ಯವಾಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಅಹ್ಮದ್ ಅಭಿಪ್ರಾಯಿಸಿದ್ದಾರೆ.

ಇತ್ತೀಚೆಗೆ ಮುನಿಸು ಕೊಂಚ ಜೋರು

ಇತ್ತೀಚೆಗೆ ಮುನಿಸು ಕೊಂಚ ಜೋರು

ಅಸಲಿಗೆ ಬಹಳ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಪಾತ್ರ ಬದ್ಧ ಎದುರಾಳಿಯಾಗಿ ಕಾದಾಡುತ್ತಿದ್ದರೇ ಹೊರತು, ವೈಯಕ್ತಿಕವಾಗಿ ಎರಡೂ ತಂಡಗಳ ಆಟಗಾರರ ಮಧ್ಯೆಯೂ ಒಳ್ಳೆಯ ಗೆಳೆತನವಿತ್ತು. ಆದರೆ ತೀರಾ ಇತ್ತೀಚೆಗೆ ಪಾಕ್ ಆಲ್ ರೌಂಡರ್ ಶಾಹಿದ್ ಅಫ್ರಿದಿ ಭಾರತದ ಪ್ರಧಾನ ನರೇಂದ್ರ ಮೋದಿ ಕುರಿತಾಗಿ ಕೊಟ್ಟಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ಭಾರತದ ಆಟಗಾರರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ತಮ್ಮ ಗೆಳೆತನ್ನು ಕಡಿತಗೊಳಿಸಿಕೊಂಡಿರುವುದಾಗಿ ಹೇಳಿದ್ದರು.

Story first published: Friday, June 19, 2020, 15:49 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X