ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಗೆಲ್ಲಲು ಆಲ್ ರೌಂಡರ್ ಪ್ರದರ್ಶನ ಬೇಕು: ಮೊಹಮ್ಮದ್ ಕೈಫ್

Have to be all-round performers to win IPL: Mohammad Kaif

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೇಸಿಂಗ್ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಡಿಸಿ ಸಹಾಯಕ ಕೋಚ್, ಭಾರತದ ಜಾಂಟಿ ರೋಡ್ಸ್ ಖ್ಯಾತಿಯ ಮೊಹಮ್ಮದ್ ಕೈಫ್ ಹೇಳಿದ್ದಾರೆ. ಒಂದಿಷ್ಟು ಪಂದ್ಯಗಳಲ್ಲಿ ಡೆಲ್ಲಿ ಚೇಸಿಂಗ್ ಚೆನ್ನಾಗಿತ್ತು. ಆದರ ಕಡೆಯೇ ಹೆಚ್ಚಿನ ಗಮನ ನೀಡಬೇಕು ಎಂದು ಕೈಫ್ ಅಭಿಪ್ರಾಯಿಸಿದ್ದಾರೆ.

ಯುವರಾಜ್ ಸಿಂಗ್ ಪ್ರಕಾರ ಈ ತಂಡಗಳೇ ಐಪಿಎಲ್ ಫೈನಲ್‌ನಲ್ಲಿ ಮುಖಾಮುಖಿ: RCB ಹೆಸರು ಇಲ್ಲ!ಯುವರಾಜ್ ಸಿಂಗ್ ಪ್ರಕಾರ ಈ ತಂಡಗಳೇ ಐಪಿಎಲ್ ಫೈನಲ್‌ನಲ್ಲಿ ಮುಖಾಮುಖಿ: RCB ಹೆಸರು ಇಲ್ಲ!

ಸದ್ಯದ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಟಪಿಲ್ಸ್ ತಂಡ ಅಗ್ರ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಯುವಕರು ಹೆಚ್ಚಿರುವ ತಂಡ ಡೆಲ್ಲಿಯ ಪ್ರದರ್ಶನಕ್ಕೆ ಕೈಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 29ರಂದು ನಡೆದಿದ್ದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 163 ರನ್ ಗುರಿಯನ್ನು ತಲುಪುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಗಿತ್ತು. ಈ ಪಂದ್ಯದಲ್ಲಿ ಎಸ್‌ಆರ್ಎಚ್ 15 ರನ್‌ಗಳ ಜಯ ದಾಖಲಿಸಿತ್ತು. ಅದಾಗಿ ಅಕ್ಟೋಬರ್ 17ರಂದು ನಡೆದಿದ್ದ ಪಂದ್ಯದಲ್ಲಿ ಚೆನ್ನೈ ನೀಡಿದ್ದ 180 ರನ್ ಗುರಿಯನ್ನು ಡೆಲ್ಲಿ ಚೇಸ್ ಮಾಡಿ 5 ವಿಕೆಟ್‌ನಿಂದ ಗೆದ್ದಿತ್ತು.

ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!ಸೂಪರ್ ಓವರ್ ಟೈ ಆದ್ರೆ?!: 2020ರ ಸೂಪರ್ ಓವರ್ ನಿಯಮಗಳಿವು!

'ನಾವು ಈಗ ಖುಷಿಯಾಗಿದ್ದೇವೆ ಯಾಕೆಂದರೆ ಇದು ನಾವು ಚೇಸ್ ಮಾಡಿದ ಮೊದಲ ಪಂದ್ಯ. ಇದಕ್ಕಿಂತ ಮೊದಲು ನಾವು ಸನ್ ರೈಸರ್ಸ್ ಎದುರು ಸೋತಿದ್ದೆವು. ನಾವು ಆವತ್ತು 160 ರನ್ ಗುರಿ ತಲುಪಲಿಲ್ಲ. ಆದರೆ ಸಿಎಸ್‌ಕೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೆವು,' ಎಂದು ಕಿಂಗ್ಸ್ XI ಪಂಜಾಬ್ ಪಂದ್ಯಕ್ಕೂ ಮುನ್ನ ಕೈಫ್ ಹೇಳಿದ್ದಾರೆ. ಪಂಜಾಬ್-ಡೆಲ್ಲಿ ಪಂದ್ಯ ಅಕ್ಟೋಬರ್ 20ರಂದು ನಡೆಯಲಿದೆ.

Story first published: Tuesday, October 20, 2020, 10:29 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X