ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಶಕದ ಅತ್ಯಂತ ಪರಿಣಾಮಕಾರಿ ಆಟಗಾರ ಎಂದು ಧೋನಿಯನ್ನು ಹೆಸರಿಸಿದ ಹೇಡನ್

Hayden picks Dhoni as Indias most impactful player of the decade in ODIs

ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ದಶಕದ ಪರಿಣಾಮಕಾರಿ ಏಕದಿನ ಕ್ರಿಕೆಟಿಗ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಹೆಸರಿಸಿದ್ದಾರೆ. ಹೆಚ್ಚು ಐಸಿಸಿ ಟ್ರೋಫಿಯನ್ನು ಗೆದ್ದಿರುವ ಕಾರಣಕ್ಕೆ ವಿರಾಟ್ ಕೊಹ್ಲಿಯ ಬದಲಾಗಿ ಧೋನಿಯನ್ನು ಹೇಡನ್ ಹೆಸರಿಸಿದ್ದಾರೆ.

ಐಸಿಸಿಯ ಎಲ್ಲಾ ಮೂರು ಟ್ರೊಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಎಂಎಸ್ ಧೋನಿಗೆ ಇದೆ. 2007ರಲ್ಲಿ ಟಿ20 ವಿಶ್ವಕಟ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಫಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಧೋನಿ ನಾಯಕತ್ವದಲ್ಲಿ ಗೆದ್ದು ಬೀಗಿತ್ತು.

ಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿ

"ನನ್ನ ಪ್ರಕಾರ ಬಹಳ ಪ್ರಮುಖವಾದದ್ದು ಹಾಗೂ ಗಮನಾರ್ಹವಾದ ಸಂಗತಿಯೆಂದರೆ ಎಂಎಸ್ ಧೋನಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಆ ವಿಶ್ವಕಪ್ ನನ್ನ ಪ್ರಕಾರ ನಿಜವಾದ ದೊಡ್ಡ ಮೈಲಿಗಲ್ಲು" ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.

"ನಾನು ಇದನ್ನು ಮೊದಲೇ ಹೇಳಿದ್ದೆ. ನಾವು ಸಾಕಷ್ಟು ಏಕದಿನ ಪಂದ್ಯಗಳನ್ನು ಆಡಿದ್ದೇವೆ. ನನಗೆ ಅನ್ನಿಸುವುದು ಏನೆಂದರೆ ವಿಶ್ವಕಪ್‌ನಂತಾ ಟೂರ್ನಿಯಲ್ಲಿ ನೀವು ಕೇವಲ ಉತ್ತಮ ನಾಯಕನನ್ನು ಹೊಂದಿದ್ದರೆ ಮಾತ್ರ ಸಾಲದು. ಮಧ್ಯಮ ಕ್ರಮಾಂಕದಲ್ಲಿ ಧೋನಿ ರೀತಿಯ ಶಾಂತಚಿತ್ತದ ಬಲಿಷ್ಠ ಆಟಗಾರನನ್ನು ಹೊಂದಿರಬೇಕಾಗುತ್ತದೆ" ಎಂದು ಹೇಡನ್ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಟಿ20 ತಂಡಕ್ಕೆ ನಾಯಕನಾಬೇಕು: ಪಾರ್ಥೀವ್ ಪಟೇಲ್ರೋಹಿತ್ ಶರ್ಮಾ ಟೀಮ್ ಇಂಡಿಯಾದ ಟಿ20 ತಂಡಕ್ಕೆ ನಾಯಕನಾಬೇಕು: ಪಾರ್ಥೀವ್ ಪಟೇಲ್

ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಈ ವರ್ಷದ ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದರು. 90 ಟೆಸ್ಟ್, 350 ಏಕದಿನ ಹಾಗೂ 98 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಧೋನಿ ಮುಂದುವರಿಯಲು ಬಯಸಿದ್ದಾರೆ.

Story first published: Thursday, December 10, 2020, 17:57 [IST]
Other articles published on Dec 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X