ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮುಂದಿನ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಆಯ್ಕೆ ಆಗಲಿ: ಸುನಿಲ್ ಗವಾಸ್ಕರ್

Sarfaraz khan

ಭಾರತ ತಂಡದ ಮುಂದಿನ ಟೆಸ್ಟ್ ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಖಂಡಿತವಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಆಶಿಸಿದ್ದಾರೆ. ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಂಬೈ ತಂಡದ ಪರ ಅದ್ಭುತ ಆಟವಾಡಿದ 24ರ ಹರೆಯದ ಆಟಗಾರ, ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆಯಲು ಅರ್ಹರು ಎಂದು ಗವಾಸ್ಕರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರೆಲ್ಲರೂ 30 ರ ಮಧ್ಯದಲ್ಲಿದ್ದಾರೆ. ಆದ್ದರಿಂದ, ಹೊಸ ಪೀಳಿಗೆಯನ್ನು ಕೆಂಪು ಚೆಂಡಿನ ಸ್ವರೂಪಕ್ಕೆ ರೂಪಿಸುವುದು ಭಾರತಕ್ಕೆ ಮುಖ್ಯವಾಗಿದೆ. ಸರ್ಫರಾಜ್ ಅವರಂತಹ ಹಲವು ಯುವ ಆಟಗಾರರು ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಲು ಕಾಯುತ್ತಿದ್ದಾರೆ ಎಂದಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಅದ್ಭುತ ಆಟವಾಡಿದ ಸರ್ಫರಾಜ್

ದೇಶೀಯ ಟೂರ್ನಿಯಲ್ಲಿ ಅದ್ಭುತ ಆಟವಾಡಿದ ಸರ್ಫರಾಜ್

ಶತಕದ ಮೇಲೆ ಶತಕ ಬಾರಿಸಿ ಸರ್ಫರಾಜ್ ಖಾನ್‌ರ ಅದ್ಭುತ ಆಟವು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ತಂದುಕೊಟ್ಟಿದೆ. ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಡಲಾಗಿದೆ. ಚೇತೇಶ್ವರ ಪೂಜಾರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕೊನೆಯ ಅವಕಾಶ ಪಡೆಯಲಿದ್ದಾರೆ. ಇದು ಖಂಡಿತವಾಗಿಯೂ ಸರ್ಫರಾಜ್ ಖಾನ್‌ಗೆ ಟೀಂ ಇಂಡಿಯಾದ ಬಾಗಿಲು ತೆರೆಯುತ್ತದೆ ಎಂದಿದ್ದಾರೆ.

Ind vs Ire 2nd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

ಸರ್ಫರಾಜ್ ಖಾನ್‌ರನ್ನ ಸೇರಿಸಿಕೊಳ್ಳದಿದ್ರೆ, ಆಶ್ಚರ್ಯವಾಗಲಿದೆ!

ಸರ್ಫರಾಜ್ ಖಾನ್‌ರನ್ನ ಸೇರಿಸಿಕೊಳ್ಳದಿದ್ರೆ, ಆಶ್ಚರ್ಯವಾಗಲಿದೆ!

"ಭಾರತದ ಮುಂದಿನ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್ ಅವರನ್ನು ಸೇರಿಸಿಕೊಳ್ಳದಿದ್ದರೆ, ಅದು ಅತಿದೊಡ್ಡ ಆಶ್ಚರ್ಯಕರವಾಗಿರುತ್ತದೆ" ಎಂದು ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಫರಾಜ್ ಟೀಂ ಇಂಡಿಯಾದ ಬಾಗಿಲಿನ ಕದ ತಟ್ಟಿದ್ದಾರೆ. ಆಯ್ಕೆಗಾರರು ಆತನ ಪ್ರದರ್ಶನವನ್ನ ಗಮನಿಸಿ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ನಂತರ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮುಂದಿನ ಟೆಸ್ಟ್ ಸರಣಿ ಆಡಲಿದೆ. ಐಸಿಸಿ ಟಿ20 ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ತಂಡ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ. ಭಾರತ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಟೆಸ್ಟ್‌ ಸರಣಿ ಗೆದ್ದ ಬಳಿಕ, WTC ಪಾಯಿಂಟ್ಸ್ ಟೇಬಲ್‌ ಹೇಗಿದೆ?

ನಾನೇ ಅಂತಿದ್ದ ಗಾಯಕ್ವಾಡ್ ಗೆ ಪಾಠ ಕಲಿಸಿದ ಪಾಂಡ್ಯ | *Cricket | OneIndia Kannada
ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರರಿದ್ದಾರೆ

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರರಿದ್ದಾರೆ

ಸರ್ಫರಾಜ್ ಖಾನ್ ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಇನ್ನೂ ಕೆಲವು ಆಟಗಾರರಿದ್ದಾರೆ. ರಜತ್ ಪಾಟಿದಾರ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇದು ಅವನ ಪಾಲಿಗೆ ಪ್ರಗತಿಯ ಸೀಸನ್ ಆಗಿರುತ್ತದೆ. ಅನೇಕ ಪ್ರತಿಭೆಗಳನ್ನು ಹೊಂದಿರುವ ಭಾರತವು ಧನ್ಯವಾಗಿದೆ. ಇದು ಹಿರಿಯ ಆಟಗಾರರನ್ನೂ ಸಂಕಷ್ಟಕ್ಕೆ ದೂಡಿದೆ. ಇದರಿಂದ ಇಲ್ಲಿ ನಿರಾಸಕ್ತಿಗೆ ಅವಕಾಶವಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳುವ ಮೂಲಕ ಗಮನ ಸೆಳೆದರು.

ರಣಜಿ ಟ್ರೋಫಿಯಲ್ಲಿ ಮುಂಬೈ ಫೈನಲ್ ತಲುಪುವಲ್ಲಿ ಸರ್ಫರಾಜ್ ಖಾನ್ ಪ್ರಮುಖ ಪಾತ್ರ ವಹಿಸಿದ್ದರು. ಆಟಗಾರ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ. ಸರ್ಫರಾಜ್ ಆರು ಪಂದ್ಯಗಳಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 982 ರನ್ ಗಳಿಸಿದರು. ಜೊತೆಗೆ ಬರೋಬ್ಬರಿ ಸರಾಸರಿ 122.75ರಲ್ಲಿ ಬ್ಯಾಟ್ ಬೀಸಿದ್ದು, ಇದರಲ್ಲಿ ನಾಲ್ಕು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ. ಆತನ ಗರಿಷ್ಠ ಸ್ಕೋರ್ 275 ರನ್ ಆಗಿತ್ತು.

Story first published: Tuesday, June 28, 2022, 15:05 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X