ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐನಲ್ಲಿ ಆರ್ ಅಶ್ವಿನ್ ಇನ್ನೂ ಕೂಡ ಬಹುದೊಡ್ಡ ಆಸ್ತಿ: ಕೈಫ್ ಪ್ರತಿಕ್ರಿಯೆ

He can still be a valuable asset for India: Mohammad Kaif backs Ashwin

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಟೀಮ್ ಆರ್ ಅಶ್ವಿನ್ ಪ್ರದರ್ಶನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಕಣ್ಕಕಿಳಿದ ಆರ್ ಅಶ್ವಿನ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಹೀಗಾಗಿ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಅಶ್ವಿನ್ ಕಮ್‌ಬ್ಯಾಕ್ ಮಾಡಲು ಅರ್ಹರಾಗಿದ್ದಾರೆ ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಉತ್ತಮ ಪ್ರದರ್ಶನವನ್ನು ನೀಡಿದ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಟೀಮ್ ಇಂಡಿಯಾಗೆ ಅಮೂಲ್ಯ ಆಸ್ತಿಯಾಗಲಿದ್ದಾರೆ ಎಂದಿದ್ದಾರೆ. ಪವರ್‌ಪ್ಲೇನಲ್ಲಿ ಆರ್ ಅಶ್ವಿನ್ ಡೆಲ್ಲಿ ತಂಡಕ್ಕೆ ಶ್ರೇಷ್ಠ ಕೊಡುಗೆಯನ್ನು ನೀಡಿರುವುದಾಗಿ ಕೈಫ್ ಹೇಳಿದ್ದಾರೆ.

ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್

ಈ ಬಾರಿಯ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ ಕಣಕ್ಕಿಳಿದ ಆರ್ ಅಶ್ವಿನ್ 13 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 7.66ರ ಎಕಾನಮಿಯಲ್ಲಿ ರನ್ ನೀಡಿದ್ದು ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲ್ಲಿ ತಂಡ 34ರ ಹರೆಯದ ಅನುಭವಿ ಆಟಗಾರನನ್ನು ಆರಂಭಿಕ ಓವರ್‌ಗಳಲ್ಲಿ ಬಳಸಿಕೊಂಡಿತ್ತು.

"ವಿರಾಟ್, ಪೊಲಾರ್ಡ್, ರೋಹಿತ್, ಗೇಲ್, ವಾರ್ನರ್, ಡಿಕಾಕ್, ಕರುಣ್, ಬಟ್ಲರ್, ಸ್ಮಿತ್, ಪಡಿಕ್ಕಲ್, ಪೂರನ್. ಓದಿ ಹಾಗೂ ಮತ್ತೊಮ್ಮೆ ಓದಿ. 13ನೇ ಆವೃತ್ತಿಯಲ್ಲಿ ಅಶ್ವಿನ್ ಬಾಚಿಕೊಂಡ ದೊಡ್ಡ ವಿಕೆಟ್‌ಗಳು. ನಹುತೇಕ ಪವರ್‌ಪ್ಲೇನಲ್ಲಿ. ನನಗನಿಸುತ್ತದೆ ಭಾರತ ತಂಡಕ್ಕೆ ಅಂತಾರಾಷ್ಟ್ರೀಯ ಟಿ20ನಲ್ಲಿ ಆರ್‌ಅಶ್ವಿನ್ ಇನ್ನು ಕೂಡ ಅಮೂಲ್ಯವಾದ ಆಸ್ತಿಯಾಗಿದ್ದಾರೆ" ಎಂದು ಕೈಫ್ ಟ್ವಿಟ್ ಮಾಡಿದ್ದಾರೆ.

Story first published: Wednesday, November 18, 2020, 21:41 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X