ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರತಿ ಚೆಂಡಿಗೂ ಆತನ ಬಳಿ 4 ರೀತಿಯ ಉತ್ತರವಿದೆ: ತಾನು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಹೇಳಿದ ಕುಂಬ್ಳೆ

He Had Four Different Shots To The Same Delivery,” Kumble Names The Toughest Batsman

ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ತನ್ನ 18 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ವಿಶ್ವ ಕ್ರಿಕೆಟ್‌ನ ಅನೇಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಿದ್ದಾರೆ. ಅದರೆ ಅವರಲ್ಲಿ ತಾನು ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಯಾರು ಎಂಬ ಬಗ್ಗೆ ಮಾತನಾಡಿದ್ದಾರೆ.

ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್ ಪಡೆದಿದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಪಡೆದು ಭಾರತ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1990ರಿಂದ ಆರಂಭವಾಗಿ 2008ರವರೆಗೆ ರಿಕಿ ಪಾಂಟಿಂಗ್, ಸ್ಟೀವ್ ವೋ, ಕುಮಾರ್ ಸಂಗಕ್ಕರ, ಸಯೀದ್ ಅನ್ವರ್, ಇನ್ಜಮಾಮ್ ಉಲ್ ಹಕ್, ಜಾಕ್ ಕ್ಯಾಲೀಸ್, ಬ್ರ್ಯಾನ್ ಲಾರಾ ಅವರಂತಾ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಿದ್ದಾರೆ.

ಜಾವಗಲ್ ಶ್ರೀನಾಥ್‌ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲು ಒತ್ತಾಯಜಾವಗಲ್ ಶ್ರೀನಾಥ್‌ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲು ಒತ್ತಾಯ

ಆದರೆ ತನಗೆ ಬೌಲಿಂಗ್ ಮಾಡಲು ನಿಜಕ್ಕೂ ಯಾವ ಬ್ಯಾಟ್ಸ್‌ಮನ್ ಕಷ್ಟ ಎಂಬುದನ್ನು ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.

ಕುಂಬ್ಳೆ ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಯಾರು?

ಕುಂಬ್ಳೆ ಎದುರಿಸಿದ ಕಠಿಣ ಬ್ಯಾಟ್ಸ್‌ಮನ್ ಯಾರು?

ತನಗೆ ಅತ್ಯಂತ ಕಠಿಣವೆನಿಸಿದ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆಗೆ ಅನಿಲ್ ಕುಂಬ್ಳೆ ಪ್ರಿನ್ಸ್ ಆಫ್ ಟ್ರಿನಿಡಾಡ್ ಎಂದೇ ಖ್ಯಾತರಾದ ಬ್ರ್ಯಾನ್ ಲಾರಾ ಹೆಸರನ್ನು ಹೇಳಿದ್ದಾರೆ. ಬೌಲಿಂಗ್ ಮಾಡಲು ಕಠಿಣವೆನಿಸುವಂತಾ ಹಲವು ಬ್ಯಾಟ್ಸ್‌ಮನ್‌ಗಳು ಇದ್ದರು. ಆದರೆ ಅದರಲ್ಲಿ ಪ್ರಮುಖವಾದವರು ಬ್ರ್ಯಾನ್ ಲಾರಾ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಪ್ರತಿ ಎಸೆತಕ್ಕೂ ವಿಭಿನ್ನ ಉತ್ತರ

ಪ್ರತಿ ಎಸೆತಕ್ಕೂ ವಿಭಿನ್ನ ಉತ್ತರ

ಅನಿಲ್ ಕುಂಬ್ಲೆ ಬ್ರ್ಯಾನ್ ಲಾರಾ ಮಾತನಾಡುತ್ತಾ "ಆತ ತನ್ನ ಬಳಿ ಪ್ರತಿ ಎಸತಕ್ಕೂ ನಾಲ್ಕು ವಿಶಿಷ್ಠ ಉತ್ತರಗಳನ್ನು ಹೊಂದಿದ್ದರು. ಹಾಗಾಗಿ ಆತನಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣವಾಗಿತ್ತು. ನೀವು ಆತನನ್ನು ಹಿಂದಿಕ್ಕಬಹುದು, ಆತನನ್ನ ಕೆಡವಬಹುದು ಎಂದುಕೊಂಡರೆ ಆತನ ತನ್ನ ಉತ್ತರವನ್ನು ಭಿನ್ನ ಹೊಡೆತಗಳ ಮೂಲಕ ನೀಡುತ್ತಿದ್ದರು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

5 ಬಾರಿ ಲಾರಾ ವಿಕೆಟ್ ಪಡೆದ ಕುಂಬ್ಳೆ

5 ಬಾರಿ ಲಾರಾ ವಿಕೆಟ್ ಪಡೆದ ಕುಂಬ್ಳೆ

ವೆಸ್ಟ್ ಇಂಡೀಸ್ ವಿರುದ್ಧ ಅನಿಲ್ ಕುಂಬ್ಳೆ 14 ಟೆಸ್ಟ್ ಪಂದ್ಯಗಳನ್ನಾಡಿದ್ದು ಅದರಲ್ಲಿ ಅನಿಲ್ ಕುಂಬ್ಳೆ ಲಾರಾ ವಿಕೆಟನ್ನು 5 ಬಾರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ 2002ರಲ್ಲಿ ಆಂಟಿಗುವಾದಲ್ಲಿ ನಡೆದ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೇಳೆ ದವಡೆ ಮುರಿದುಕೊಂಡು ಬ್ಯಾಂಡೇಜ್ ಹಾಕಿಂಡೇ ಬೌಲಿಂಗ್ ಮಾಡಿ ಲಾರಾ ವಿಕೆಟ್ ಪಡೆದದ್ದು ಸಾಕಷ್ಟು ಪ್ರಖ್ಯಾತಿಯಾಗಿದೆ.

ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ನಮ್ಮ ತಂಡದಲ್ಲಿದ್ದರು

ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ನಮ್ಮ ತಂಡದಲ್ಲಿದ್ದರು

ಇನ್ನು ಇದೇ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅದೃಷ್ಠವಶಾತ್ ಟೆಸ್ಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಹೆಚ್ಚಿನ ಆಟಗಾರರು ನಮ್ಮ ತಂಡದಲ್ಲೇ ಇದ್ದರು. ಸಚಿನ್ ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಸೆಹ್ವಾಗ್‌ಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಮ್ಯಾಚ್‌ನಲ್ಲಿ ಈ ಆಟಗಾರರು ಎದುರಾಳಿಯಾಗಿ ಸಿಕ್ಕಿದ್ದರೆ ಏನು ಕಥೆಯೆಂದು ಚಿಂತಿಸಿದ್ದೆ ಎಂದು ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.

Story first published: Friday, July 24, 2020, 20:37 [IST]
Other articles published on Jul 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X