ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಕ್ಸ್‌ವೆಲ್ ಐಪಿಎಲ್ ಪ್ರದರ್ಶನದ ವಿರುದ್ಧ ಮತ್ತೆ ಹರಿಹಾಯ್ದ ವೀರೇಂದ್ರ ಸೆಹ್ವಾಗ್

He is More Interested About Golf Than Cricket During IPL: Virender Sehwag slams Glenn Maxwell

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸೀಮಿಯ ಓವರ್‌ಗಳ ಸರಣಿ ಮುಕ್ತಾಯವಾಗಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರಶನವನ್ನು ನೀಡಿದ್ದಾರೆ. ಏಕದಿನದ ಬಳಿಕ ಅಂತಿಮ ಟಿ20 ಪಂದ್ಯದಲ್ಲೂ ಮ್ಯಾಕ್ಸ್‌ವೆಲ್ ಅಬ್ಬರದ ಪ್ರದರ್ಶನ ನೀಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ರಾಷ್ಟ್ರೀಯ ತಂಡದ ಪರವಾಗಿ ಮ್ಯಾಕ್ಸ್‌ವೆಲ್ ನೀಡಿದ ಈ ಪ್ರದರ್ಶನ ಐಪಿಎಲ್ ಅಭಿಮಾನಿಗಳನ್ನು ಕೆರಳಿಸಿದೆ.

ಇದಕ್ಕೆ ಕಾರಣ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ನೀಡಿದ ಕಳಪೆ ಪ್ರದರ್ಶನ. ಆಡಿದ 13 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ 100ರ ಗಡು ದಾಟಲಷ್ಟೇ ಶಕ್ತರಾಗಿದ್ದರು. ಇಡೀ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಬ್ಯಾಟ್‌ನಿಂದ ಒಂದೇ ಒಂದು ಸಿಕ್ಸರ್ ಸಿಡಿದಿರಲಿಲ್ಲ. ಇದಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಹರಿಹಾಯ್ದಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡ

ಪಂಜಾಬ್ ತಂಡದ ಮಾಜಿ ಕೋಚ್ ಸೆಹ್ವಾಗ್

ಪಂಜಾಬ್ ತಂಡದ ಮಾಜಿ ಕೋಚ್ ಸೆಹ್ವಾಗ್

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಜಿ ಕೋಚ್ ಆಗಿರುವ ವಿರೇಂದ್ರ ಸೆಹ್ವಾಗ್ ಮ್ಯಾಕ್ಸ್‌ವೆಲ್ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್ ಯಾವುದೇ ರೀತಿಯಲ್ಲೂ ಒತ್ತಡವನ್ನು ತೆಗೆದುಕೊಳ್ಳಲು ಬಯಸಿರಲಿಲ್ಲ. ಇದು ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿನ ಮ್ಯಾಕ್ಸ್‌ವೆಲ್ ಪ್ರದರ್ಶನದ ವ್ಯತ್ಯಾಸಕ್ಕೆ ಕಾರಣ ಎಂದು ಸೆಹ್ವಾಗ್ ಹೇಳಿದ್ದಾರೆ.

ಗಾಲ್ಫ್ ಮೇಲೆ ಪ್ರಾಶಸ್ತ್ಯ

ಗಾಲ್ಫ್ ಮೇಲೆ ಪ್ರಾಶಸ್ತ್ಯ

ಮುಂದುವರಿರುವು ಮಾತನಾಡಿದ ವೀರೇಂದ್ರ ಸೆಹ್ವಾಗ್ ಐಪಿಎಲ್ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಗಾಲ್ಫ್‌ ಕಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಇದು ಆತನ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು ಎಂದು ಸೆಹ್ವಾಗ್ ಹೇಳಿಕೆಯನ್ನು ನೀಡಿದ್ದಾರೆ.

ಎಂಜಾಯ್ ಮಾಡಲು ಮಾತ್ರವೇ ಅಲ್ಲಿದ್ದ

ಎಂಜಾಯ್ ಮಾಡಲು ಮಾತ್ರವೇ ಅಲ್ಲಿದ್ದ

"ಆತ(ಮ್ಯಾಕ್ಸ್‌ವೆಲ್) ಐಪಿಎಲ್‌ನಲ್ಲಿ ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳಲಿಲ್ಲ. ಆತ ಕೇವಲ ಎಂಜಾಯ್‌ಮೆಂಟ್‌ಗೆ ಮಾತ್ರವೇ ಅಲ್ಲಿದ್ದ. ಪಂದ್ಯದ ಸಂದರ್ಭದಲ್ಲಿ ಆತ ಎಲ್ಲವನ್ನೂ ಮಾಡುತ್ತಿದ್ದ. ಆಟಗಾರರನ್ನು ಉತ್ತೇಚಿಸುತ್ತಿದ್ದ, ಸುತ್ತಲೂ ಓಡಾಡುತ್ತಿದ್ದ ನೃತ್ಯ ಮಾಡುತ್ತಿದ್ದ. ಆದರೆ ರನ್ ಮಾತ್ರ ಗಳಿಸುತ್ತಿರಲಿಲ್ಲ. ಪಂದ್ಯದ ಮುಕ್ತಾಯದ ಬಳಿಕ ಆದಷ್ಟು ಬೇಗನೆ ಉಚಿತವಾಗಿ ದೊರೆಯುತ್ತಿದ್ದ ಡ್ರಿಂಕ್ಸ್‌ ತೆಗೆದುಕೊಂಡು ಆತನ ರೂಮ್‌ಗೆ ತೆರಳಿ ಸಾಕಷ್ಟು ಕುಡಿಯುತ್ತಿದ್ದ" ಎಂದು ಸೆಹ್ವಾಗ್ ಆರೋಪಿಸಿದ್ದಾರೆ.

ಗಂಭೀರನಾಗಿದ್ದರೆ ಪ್ರದರ್ಶನದಲ್ಲಿ ವ್ಯಕ್ತವಾಗಬೇಕಿತ್ತು

ಗಂಭೀರನಾಗಿದ್ದರೆ ಪ್ರದರ್ಶನದಲ್ಲಿ ವ್ಯಕ್ತವಾಗಬೇಕಿತ್ತು

"ಆತ ಆಟದ ಬಗ್ಗೆ ಗಂಭೀರನಾಗಿದ್ದಾನೆ ಎಂದು ನನಗೆ ಯಾವತ್ತಿಗೂ ಅನಿಸಿರಲಿಲ್ಲ. ಆತ ಐಪಿಎಲ್‌ಗೆ ಬಂದ ಸಂದರ್ಭದಲ್ಲಿ ಕ್ರಿಕೆಟ್‌ಗಿಂತಲೂ ಹೆಚ್ಚಾಗಿ ಗಾಲ್ಫ್‌ ಮೇಲೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ. ಯಾಕೆಂದರೆ ನೀವು ಗಂಭೀರನಾಗಿರುತ್ತಿದ್ದರೆ ಅದು ಪ್ರದರ್ಶನದಲ್ಲಿ ಕಾಣಿಸಬೇಕಿತ್ತು" ಎಂದು ಸೆಹ್ವಾಗ್ ಹರಿಹಾಯ್ದಿದ್ದಾರೆ.

Story first published: Wednesday, December 9, 2020, 17:46 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X