ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಭಾರತದ ಎಬಿ ಡಿವಿಲಿಯರ್ಸ್: ಅನ್‌ಕ್ಯಾಪ್‌ಡ್ ಆಟಗಾರನನ್ನು ಹೊಗಳಿದ ಭಜ್ಜಿ

He is the Indian AB de Villiers: Harbhajan Singh praised uncapped Indian player

ಹರ್ಭಜನ್ ಸಿಂಗ್ ಈ ಬಾರಿಯ ಐಪಿಎಲ್‌ನಿಂದ ಅಂತಿಮ ಕ್ಷಣದಲ್ಲಿ ಹಿಂದಕ್ಕೆ ಸರಿದಿದ್ದರು. ಚೆನ್ನೈ ಪರವಾಗಿ ಕಣಕ್ಕಿಳಿಬೇಕಿದ್ದ ಬಜ್ಜಿ ವೈಯಕ್ತಿಕ ಕಾರಣವನ್ನು ನೀಡಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಈಗ ಐಪಿಎಲ್ ಸಂಪೂರ್ಣವಾಗಿ ಮುಕ್ತಾಯ ಕಂಡಿದ್ದು ಭಾರತೀಯ ಆಟಗಾರನೋರ್ವನ ಪ್ರದರ್ಶನದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಅನುಭವಿ ಆಟಗಾರ ಹರ್ಭಜನ್ ಸಿಂಗ್ ಅವರ ಮನಸುಗೆದ್ದ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್. ಮುಂಬೈ ತಂಡದ ಪರವಾಗಿ ಶ್ರೇಷ್ಠ ಪ್ರದರ್ಶನ ನಿಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಸೂರ್ಯಕುಮಾರ್ ಯಾದವ್. ಟೂರ್ನಿಯಲ್ಲಿ 145.01ರ ಸ್ಟ್ರೈಕ್‌ರೇಟ್‌ನಲ್ಲಿ 480 ರನ್ ಬಾರಿಸಿ ಮಿಂಚಿದ್ದಾರೆ ಸೂರ್ಯಕುಮಾರ್ ಯಾದವ್.

ಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆ

ಸೂರ್ಯಕುಮಾರ್ ಯಾದವ್ ಬಗ್ಗೆ ಟ್ವಿಟ್ಟರ್‌ನಲ್ಲಿ ಹರ್ಭಜನ್ ಸಿಂಗ್ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. "ಸೂರ್ಯಕುಮಾರ್ ಯಾದವ್ ಗೇಮ್‌ಚೇಂಜರ್‌ನಿಂದ ಮ್ಯಾಚ್ ವಿನ್ನರ್ ಮುಂಬೈ ತಂಡದಲ್ಲಿ ಆಗಿ ಬದಲಾಗಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಜವಾಬ್ಧಾರಿಯನ್ನು ಹೊಂದಿದ್ದಾರೆ" ಎಂದು ಭಜ್ಜಿ ಪ್ರಶಂಸೆಯನ್ನು ವ್ತಕ್ತಪಡಿಸಿದ್ದಾರೆ.

"ಆತ 100 ಸ್ಟರಯಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸುವುದಿಲ್ಲ. ಆತನ ಸ್ಟ್ರೈಕ್‌ರೇಟ್‌ಅನ್ನು ನೀವು ಗಮನಿಸಿ. ಆರಂಭಿಕ ಎಸೆತದಿಂದಲೇ ಆತ ದಂಡಿಸಲು ಶುರುಮಾಡುತ್ತಾನೆ. ಆತನನ್ನು ಕಟ್ಟಿಹಾಕುವುದು ಕಠಿಣ. ಕವರ್‌ನ ಮೇಲೆ ಹೊಡೆಯಬಲ್ಲ. ಚೆನ್ನಾಗಿ ಸ್ವೀಪ್ ಮಾಡಬಲ್ಲ. ಸ್ಪಿನ್‌ಗೆ ಅದ್ಭುತವಾಗಿ ಆಡಬಲ್ಲ. ವೇಗದ ಬೌಲಿಂಗ್‌ಅನ್ನು ಅದ್ಭುತವಾಗಿ ಎದುರಿಸಬಲ್ಲ" ಎಂದು ಹರ್ಭಜನ್ನ ಸಿಂಗ್ ಹೇಳಿದ್ದಾರೆ.

ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

"ನನ್ನ ಪ್ರಕಾರ ಆತ ಭಾರತೀಯ ತಂಡಕ್ಕೆ ಆಯ್ಕೆಯಾಗಬೇಕಿತ್ತು. ಅದು ಈಗ ಆಗಿಲ್ಲ. ಆದರೆ ಅದು ದೂರವೇನೂ ಇಲ್ಲ. ಆತನೋರ್ವ ನಂಬಲಾಗದಂತಾ ಆಟಗಾರ. ಆತನ ಬ್ಯಾಟಿಂಗ್ ಶೈಲಿ ಪ್ರತಿಯೊಬ್ಬರು ಆತನತ್ತ ಆಕರ್ಷಿತವಾಗುವಂತೆ ಮಾಡುತ್ತದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Story first published: Friday, November 13, 2020, 17:14 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X