ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ರೇಗ್ ಚಾಪೆಲ್ ತಮ್ಮ ಹೆಸರು ತಾವೇ ಕೆಡಿಸಿಕೊಂಡರು: ಮೊಹಮದ್ ಕೈಫ್

He spoilt his name,’ Mohammad Kaif on Greg Chappell

ಟೀಮ್ ಇಂಡಿಯಾದ ಮಾಜಿ ಕೋಚ್ ಗ್ರೇಚ್ ಚಾಪೆಲ್ ಅತ್ಯಂತ ವಿವಾದಾತ್ಮಕ ಕೋಚ್ ಆಗಿ ಕುಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಕೋಚ್ ಆಗಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಅಕ್ಷರಶಃ ಗೊಂದಲದ ವಾತಾವರಣ ಸೃಷ್ಟಿಮಾಡಿಬಿಟ್ಟಿದ್ದರು. ಅಂತಿಮವಾಗಿ 2007ರ ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಹೊರಬೀಳುವುದರೊಂದಿಗೆ ಗ್ರೇಮ್ ಚಾಪೆಲ್ ತಲೆದಂಡವೂ ಆಗಿತ್ತು.

ಟೀಮ್ ಇಂಡಿಯಾದಲ್ಲಿ ಅಂದಿನ ಆಟಗಾರರು ಈಗಲೂ ಚಾಪೆಲ್ ಹೆಸರು ಹೇಳಿದರೆ ಉರಿದು ಬೀಳುತ್ತಾರೆ. ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮದ್ ಕೈಫ್ ಕೂಡ ಗ್ರೇಗ್ ಚಾಪೆಲ್ ಬಗ್ಗೆ ಮಾತನ್ನಾಡಿದ್ದಾರೆ. ಗ್ರೇಗ್ ಚಾಪೆಲ್‌ಗೆ ಒಳ್ಳೆಯ ಬ್ಯಾಟಿಂಗ್ ಕೋಚ್ ಆಗುವ ಸಾಧ್ಯತೆಯಿತ್ತು. ಆದರೆ ತಂಡದ ಮುಖ್ಯ ಕೋಚ್ ಆದ ಚಾಪೆಲ್ ತಮ್ಮ ಹೆಸರನ್ನು ತಾವೇ ಹಾಳು ಮಾಡಿಕೊಂಡರು ಎಂದು ಹೇಳಿದ್ದಾರೆ.

ಯುವ ಕ್ರಿಕೆಟಿಗರ ಮಾನಸಿಕ ಸಮಸ್ಯೆಗೆ ವೃತ್ತಿಪರರಿಂದ ಪರಿಹಾರ: ದ್ರಾವಿಡ್ಯುವ ಕ್ರಿಕೆಟಿಗರ ಮಾನಸಿಕ ಸಮಸ್ಯೆಗೆ ವೃತ್ತಿಪರರಿಂದ ಪರಿಹಾರ: ದ್ರಾವಿಡ್

ಟೀಮ್ ಇಂಡಿಯಾದ ಮಾಜಿ ಕೋಚ್ ಆಗಿದ್ದ ಜಾನ್‌ರೈಟ್ ಮತ್ತು ಚಾಪೆಲ್ ಕಾರ್ಯ ವೈಖರಿಯನ್ನು ತುಲನೆ ಮಾಡಿದ್ದಾರೆ ಕೈಫ್. ಜಾನ್ ರೈಟ್‌ಗೆ ಟೀಮ್ ಇಂಡಿಯಾದಲ್ಲಿ ಅಪಾರ ಗೌರವ ಸಿಕ್ಕಿತ್ತು. ಅದಕ್ಕೆ ಕಾರಣ ಆಟಗಾರರ ಜೊತೆಗೆ ಅವರು ವ್ಯವಹರಿಸುತ್ತಿದ್ದ ರೀತಿ. ನಾಯಕ ಸೌರವ್ ಗಂಗೂಲಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ಅವರು ಯಶಸ್ಸನ್ನು ಸಾಧಿಸಿದ್ದರು ಎಂದಿದ್ದಾರೆ ಕೈಫ್.

ಆದರೆ ಗ್ರೇಗ್ ಚಾಪೆಲ್‌ಗೆ ತಂಡವನ್ನು ಹೇಗೆ ಮುನ್ನಡೆಸಬೇಕೆಂದೇ ಅರಿವಿರಲಿಲ್ಲ. ಟೀಮ್ ಇಂಡಿಯಾದ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನವನ್ನೂ ಮಾಡಿಕೊಂಡಿರಲಿಲ್ಲ. ವ್ಯಕ್ತಿಗಳನ್ನು ನಿರ್ವಹಿಸಲೂ ಅವರಿಂದ ಸಾಧ್ಯವಾಗಲಿಲ್ಲ. ಒಳ್ಳೆಯ ಕೋಚ್ ಆಗುವ ಯಾವ ಲಕ್ಷಣವೂ ಅವರಲ್ಲಿ ಇರಲಿಲ್ಲ ಎಂದು ಕೈಫ್ ಹೇಳಿದ್ದಾರೆ.

ಧೋನಿ ತಂಡದ ಮೀಟಿಂಗ್‌ಗಳು 2 ನಿಮಿಷಕ್ಕೆ ಹೆಚ್ಚಿರುತ್ತಿರಲಿಲ್ಲ: ಪಾರ್ಥಿವ್ಧೋನಿ ತಂಡದ ಮೀಟಿಂಗ್‌ಗಳು 2 ನಿಮಿಷಕ್ಕೆ ಹೆಚ್ಚಿರುತ್ತಿರಲಿಲ್ಲ: ಪಾರ್ಥಿವ್

ಗ್ರೇಗ್ ಚಾಪೆಲ್ ಬಗ್ಗೆ ಈ ಹಿಂದೆ ಹಲವು ಆಟಗಾರರು ಹೇಳಿಕೆಯನ್ನು ನೀಡಿದ್ದಾರೆ. ಹರ್ಭಜನ್ ಸಿಂಗ್ ಹಿಂದೊಮ್ಮೆ ಚಾಪೆಲ್ ಬಗ್ಗೆ ಎರಡು ಮುಖವನ್ನು ಹೊಂದಿದ್ದ ವ್ಯಕ್ತಿ ಎಂದಿದ್ದರು. ಇತ್ತೀಚೆಗೆ ಮತ್ತೊಮ್ಮೆ ಭಜ್ಜಿ ಚಾಪೆಲ್ ಕೋಚ್ ಆಗಿದ್ದ ಕಾಲವನ್ನು"ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು" ಎಂದು ಬಣ್ಣಿಸಿದ್ದರು.

Story first published: Thursday, May 28, 2020, 18:32 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X