ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ನಾಯಕತ್ವದ ಪ್ರಮುಖ ಬದಲಾವಣೆ ಹೇಳಿದ ಪಠಾಣ್

He Was Much Calmer By 2013 Champions Trophy’: Irfan Pathan Explains How Ms Dhoni’s Captaincy

ಟೀಮ್ ಇಂಡಿಯಾ ಕಂಡ ಚಾಣಾಕ್ಷ ನಾಯಕ ಮಹೇಂದ್ರ ಸಿಂಗ್ ಧೋನಿ. ತನ್ನ ತಂತ್ರಗಾರಿಕೆ ಮತ್ತು ಶಾಂತಚಿತ್ತ ಮನೋಭಾವದಿಂದ ನಾಯಕತ್ವಕ್ಕೆ ಹೊಸ ಆಯಾಮವನ್ನು ನೀಡಿದ ನಾಯಕ ಎಂದೇ ಧೋನಿಯನ್ನು ಬಿಂಬಿಸಲಾಗುತ್ತದೆ. ಸುದೀರ್ಘ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಧೋನಿಯ ನಾಯಕತ್ವದಲ್ಲಾದ ಬದಲಾವಣೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಹೇಳಿದ್ದಾರೆ.

2007ರ ಟಿ20 ವಿಶ್ವಕಪ್‌ನ ಭಾಗವಾಗಿದ್ದ ಇರ್ಫಾನ್ ಪಠಾಣ್ 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಪಾಲ್ಗೊಂಡಿದ್ದರು. ಈ ಮಧ್ಯೆ ಅವರ ನಾಯಕತ್ವದಲ್ಲಿ ಯಾವ ಬದಲಾವಣೆಯನ್ನು ಕಂಡುಕೊಂಡಿರಿ ಎಂಬ ಪ್ರಶ್ನೆಗೆ 2007ಕ್ಕಿಂತಲೂ ಧೋನಿ 2013ರ ವೇಳೆಗೆ ಇನ್ನಷ್ಟು ಶಾಂತವಾಗಿದ್ದರು ಎಂದು ಹೇಳಿದ್ದಾರೆ.

ಧೋನಿ, ರೋಹಿತ್, ವಿರಾಟ್ : ಮೂವರ ನಾಯಕತ್ವದ ಭಿನ್ನತೆ ಬಗ್ಗೆ ಪಾರ್ಥಿವ್ ಮಾತುಧೋನಿ, ರೋಹಿತ್, ವಿರಾಟ್ : ಮೂವರ ನಾಯಕತ್ವದ ಭಿನ್ನತೆ ಬಗ್ಗೆ ಪಾರ್ಥಿವ್ ಮಾತು

ಧೋನಿಯ ತಂಡದ ಮೀಟಿಂಗ್ 2007ರ ರೀತಿಯಲ್ಲೇ 2013ರಲ್ಲೂ 5 ನಿಮಿಷದಲ್ಲಿ ಮುಕ್ತಾಯವಾಗುತ್ತಿತ್ತು. ಆದರೆ ಬಹುದೊಡ್ಡ ಬದಲಾವಣೆಯೆಂದರೆ ಬೌಲರ್‌ಗಳ ಮೇಲೆ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಳ್ಳು ಆರಂಭಿಸಿದ್ದರು. ಮೊದಲಿಗೆ ಧೋನಿ ತಾನು ಬೌಲರ್‌ಗಳ ಬಳಿ ತೆರಳ ಅವರನ್ನು ನಿಯಂತ್ರಿಸುತ್ತಿದ್ದರು. ಆದರೆ ಬಳಿಕ ಸ್ವತಃ ಬೌಲರ್‌ಗಳಿಗೆ ತಮ್ಮನ್ನು ನಿಯಂತ್ರಿಸಿಕೊಳ್ಳಲು ಬಿಟ್ಟುಬಿಡುತ್ತಿದ್ದರು ಎಂದು ಇರ್ಫಾನ್ ಪಠಾನ್ ಹೇಳಿದ್ದಾರೆ.

2013ರ ವೇಳೆಗೆ ಧೋನಿ ಬೌಲರ್‌ಗಳ ಸಾಮರ್ಥ್ಯದ ಮೇಲೆ ನಂಬಿಕೆಯನ್ನು ಹೊಂದಿದ್ದರು. ಅದರಿಂದ ಸ್ವತಃ ಬೌಲರ್‌ಗಳೇ ಅವರನ್ನು ನಿಯಂತ್ರಿಸಿಕೊಳ್ಳಲು ಬಿಡುತ್ತಿದ್ದರು. 2013ರಲ್ಲಿ ಧೋನಿ ಮತ್ತಷ್ಟು ತಾಳ್ಮೆಯನ್ನು ಹೊಂದಿದ್ದರು. ಧೋನಿ ನಿಧಾನದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳ ಮೇಲೆ ಕಠಿಣ ಸಂದರ್ಭಗಳನ್ನು ನಂಬಿಕೆಯನ್ನು ಇಟ್ಟುಕೊಂಡಿದ್ದರು. ಅವರನ್ನು ಪರಿಣಾಮಕಾರಿಯಾಗಿ ಬಳಸುವುದನ್ನು 2013ರ ವೇಳೆಗೆ ರೂಡಿಸಿಕೊಂಡಿದ್ದರು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?ಪಾಕ್ ನಾಯಕ ಬಾಬರ್ ಅಝಮ್‌ಗೆ ಸಾನಿಯಾ ಮಿರ್ಜಾ ಬೆದರಿಕೆ ಹಾಕಿದ್ದೇಕೆ?

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್, 2010 ಮತ್ತು 2016ರಲ್ಲಿ ಏಷ್ಯಾಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. 2014ರಲ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದ ಧೋನಿ 2016ರಲ್ಲಿ ಸೀಮಿತ ಓವರ್‌ಗಳ ನಾಯತ್ವವನ್ನೂ ಬಿಟ್ಟುಕೊಟ್ಟರು. ಕಳೆದ ವಿಶ್ವಕಪ್‌ನಲ್ಲಿ ಭಾರತ ಸೆಮಿ ಫೈನಲ್‌ನಲ್ಲಿ ಅನಿರೀಕ್ಷಿತವಾಗಿ ಹೊರಬಿದ್ದ ಬಳಿಕ ಧೋನಿ ಕ್ರಿಕೆಟ್ ಅಂಗಣದಲ್ಲಿ ಕಾಣಿಸಿಕೊಂಡಿಲ್ಲ.

Story first published: Monday, June 29, 2020, 10:28 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X