ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ನಿಜವಾದ 'ಕ್ರಿಕೆಟ್ ದೇವರು' ದಿಗ್ಗಜ ಆಟಗಾರನ ಬಗ್ಗೆ ಶ್ರೀಶಾಂತ್ ಮಾತು

‘He Was The Real God Of Cricket’: S Sreeshanth on Tendulkar

ಟೀಮ್ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ಟೀಮ್ ಇಂಡಿಯಾದ ದಿಗ್ಗಜ ಆಟಗಾರನನ್ನು ಮನಸಾರೆ ಹೊಗಳಿದ್ದಾರೆ. ಟೀಮ್ ಇಂಡಿಯಾದಲ್ಲಿ ಪ್ರಮುಖ ವೇಗಿಯಾಗಿದ್ದ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ನಿಷೇಧಕ್ಕೆ ಗುರಿಯಾಗಿದ್ದರು.

ವೇಗದ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದ ಶ್ರೀಶಾಂತ್ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿದ್ದರು. ಸೀಮಿತ ಓವರ್‌ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಆಗಿದ್ದರು ಶ್ರೀಶಾಂತ್. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು ಕೇರಳದ ಈ ಸ್ಪೀಡ್ ಸ್ಟಾರ್.

ಈಗ ಶ್ರೀಶಾಂತ್ ಪ್ರತಿಕ್ರಿಯೆ ನೀಡಿದ್ದು ಟೀಮ್ ಇಂಡಿಯಾದ ಆ ದಿಗ್ಗಜ ಕ್ರಿಕೆಟಿಗ ನಿಜವಾದ ಕ್ರಿಕೆಟ್‌ನ ದೇವರು ಎಂದು ಹೇಳಿದ್ದಾರೆ.

ಕ್ರಿಕೆಟ್ ದೇವರ ಬಗ್ಗೆಯೇ ಆಡಿದ ಮಾತು

ಕ್ರಿಕೆಟ್ ದೇವರ ಬಗ್ಗೆಯೇ ಆಡಿದ ಮಾತು

ಶ್ರೀಶಾಂತ್ ಈ ರೀತಿಯ ಮಾತನ್ನಾಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ವಿಶ್ವ ಕ್ರಿಕೆಟ್‌ನ ದೇವರೆನಿಸಿದ ಸಚಿನ್ ತೆಂಡೂಲ್ಕರ್ ಬಗ್ಗೆ. ಶ್ರೀಶಾಂತ್ ಸಚಿನ್ ತೆಂಡೂಲ್ಕರ್ ನಿಜವಾಗಿಯೂ ಕ್ರಿಕೆಟ್‌ನ ದೇವರು ಎಂದು ಸಚಿನ್ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಆ ಅವಕಾಶ ಅತಿದೊಡ್ಡ ಗಿಫ್ಟ್

ಆ ಅವಕಾಶ ಅತಿದೊಡ್ಡ ಗಿಫ್ಟ್

ಶ್ರೀಶಾಂತ್ ಕ್ರಿಕೆಟ್ ಕೊಟ್ಟ ಅತಿದೊಡ್ಡ ಗಿಫ್ಟ್‌ವೊಂದನ್ನು ಈ ಸಂದರ್ಭದಲ್ಲಿ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಜೊತೆಗೆ ಕ್ರಿಕೆಟ್ ಆಡುವ ಅವಕಾಶವಚೇ ಆ ದೊಡ್ಡ ಗಿಫ್ಟ್ ಎಂದು ಶ್ರೀಶಾಂತ್ ಬಣ್ಣಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಜೊತೆಗೆ ಕೆಲ ವರ್ಷಗಳ ಕಾಲ ಶ್ರೀಶಾಂತ್ ಟೀಮ್ ಇಂಡಿಯಾದ ಸದಸ್ಯರಾಗಿದ್ದರು.

ಕೋಟ್ಯಂತರ ಜನರು ಕ್ರಿಕೆಟ್ ಆಡುವಂತೆ ಮಾಡಿದರು

ಕೋಟ್ಯಂತರ ಜನರು ಕ್ರಿಕೆಟ್ ಆಡುವಂತೆ ಮಾಡಿದರು

ಸಚಿನ್ ಕಾಲದಲ್ಲಿ ನಾನು ಹುಟ್ಟಿದ್ದು ನನ್ನ ಅದೃಷ್ಟ. ಅದರಲ್ಲೂ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಜೊತೆಗೆ ಕ್ರಿಕೆಟ್ ಆಟವಾಡುವ ಅವಕಾಶ ನಂಬುವುದು ಕಷ್ಟ ಎಂದಿದ್ದಾರೆ ಸಚಿನ್ ತೆಂಡೂಲ್ಕರ್ ಅವರಿಂದಾಗಿ ಕೋಟ್ಯಂತರ ಜನರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ಆರಂಭಿಸಿದರು ಎಂದು ಶ್ರೀಶಾಂತ್ ಹೇಳಿದ್ದಾರೆ.

ಸಚಿನ್ ಜೊತೆ ವಿಶ್ವಕಪ್ ಆಡುವ ಕನಸು

ಸಚಿನ್ ಜೊತೆ ವಿಶ್ವಕಪ್ ಆಡುವ ಕನಸು

ಶ್ರೀಶಾಂತ್ ಟೀಮ್ ಇಂಡಿಯಾ ಪರವಾಗಿ 2011ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಸಚಿನ್ ತೆಂಡೂಲ್ಕರ್ ಜೊತೆಗೆ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವುದು ನನ್ನ ಕನಸಾಗಿತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ.

ಏಳು ವರ್ಷಕ್ಕೆ ಶ್ರೀಶಾಂತ್ ನಿಷೇಧ ಅಂತ್ಯ

ಏಳು ವರ್ಷಕ್ಕೆ ಶ್ರೀಶಾಂತ್ ನಿಷೇಧ ಅಂತ್ಯ

ಐಪಿಎಲ್‌ ಸ್ಪಾಟ್‌ಫಿಕ್ಸಿಂಗ್ಸ್‌ನಲ್ಲಿ ಭಾಗಿಯಾಗಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಶ್ರೀಶಾಂತ್‌ಗೆ ಅಜೀವ ನಿಷೇಧ ಶಿಕ್ಷೆಯನ್ನು ನೀಡಲಾಗಿತ್ತು. ಆದರೆ ಕಳೆದ ಆಗಸ್ಟ್‌ನಲ್ಲಿ ಇದರ ಪ್ರಮಾಣವನ್ನು ಕಡಿತಗೊಳಿಸಲಾಗಿತ್ತು. ಏಳುವರ್ಷಕ್ಕೆ ಅಂತ್ಯಗೊಳಿಸಲಾಗಿತ್ತು.

ಮುಂದಿನ ಆಗಸ್ಟ್‌ನಲ್ಲಿ ಶ್ರೀಶಾಂತ್ ಶಿಕ್ಷೆ ಅಂತ್ಯ

ಮುಂದಿನ ಆಗಸ್ಟ್‌ನಲ್ಲಿ ಶ್ರೀಶಾಂತ್ ಶಿಕ್ಷೆ ಅಂತ್ಯ

ಆಜೀವ ಶಿಕ್ಷೆಯಿಂದ ಪಾರಾಗಿರುವ ಶ್ರೀಶಾಂತ್ ಮುಂದಿನ ಆಗಸ್ಟ್‌ನಲ್ಲಿ ತಮ್ಮ ನಿಷೇಧವನ್ನು ಸಂಪೂರ್ಣಗೊಳಿಸಲಿದ್ದಾರೆ. ಮತ್ತೆ ಶ್ರೀಶಾಂತ್ ಕೇರಳ ತಂಡದ ಪರವಾಗಿ ಮತ್ತು ಟೀಮ್ ಇಂಡಿಯಾ ಪರವಾಗಿ ಆಡುವ ಅರ್ಹತೆಯನ್ನು ಪಡೆಯಲಿದ್ದಾರೆ. ಆದರೆ ಸಧ್ಯ 37 ವರ್ಷದವರಾಗಿರುವ ಶ್ರೀಶಾಂತ್‌ಗೆ ಕಮ್‌ಬ್ಯಾಕ್ ಮಾಡುವುದು ಸುಲಭವಿಲ್ಲ ಎಂಬುದು ಅಷ್ಟೇ ಸತ್ಯ.

Story first published: Thursday, April 2, 2020, 19:26 [IST]
Other articles published on Apr 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X