ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಖಂಡಿತಾ ಆತ WTC ಫೈನಲ್‌ನಲ್ಲಿ ರನ್ ಗಳಿಸುತ್ತಾನೆ: ಯುವ ಆಟಗಾರನ ಬೆಂಬಲಕ್ಕೆ ನಿಂತ ದೀಪ್ ದಾಸ್‌ಗುಪ್ತ

He will be back scoring runs at the WTC final: Deep Dasgupta on Shubman Gill

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನಾಲ್ಕು ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದರೂ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಗಮನಾರ್ಹ ನೀಡಿದ್ದ ಶುಬ್ಮನ್ ಗಿಲ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಗಿಲ್ ಉತ್ತಮವಾಗಿ ರನ್‌ಗಳಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಬ್ಮನ್ ಗಿಲ್ 4 ಟೆಸ್ಟ್ ಪಂದ್ಯಗಳಲ್ಲಿ 119 ರನ್‌ ಮಾತ್ರವೇ ಗಳಿಸಿದ್ದಾರೆ. ಈ ಸರಣಿಯಲ್ಲಿ ಗಿಲ್ ಸರಾಸರಿ ಕೇವಲ 19 ಮಾತ್ರ. ಗಿಲ್ ಒಂದು ಅರ್ಧ ಶತಕವನ್ನು ಗಳಿಸಿದ್ದರೆ ಎರಡು ಶೂನ್ಯ ಸಂಪಾದನೆಯನ್ನೂ ಮಾಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಪ್ರತಿ ಸ್ಥಾನಕ್ಕೂ ಸಾಕಷ್ಟು ಪೈಪೋಟಿಗಳು ಇರುವ ಈ ಸಂದರ್ಭದಲ್ಲಿ ಗಿಲ್ ಫಾರ್ಮ್‌ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

ಐಪಿಎಲ್‌ಗೆ ಆದ್ಯತೆ ನೀಡುವ ಆಂಗ್ಲ ಕ್ರಿಕೆಟರ್ಸ್ ವಿರುದ್ಧ ಬೈಕಾಟ್ ಕಿಡಿ!ಐಪಿಎಲ್‌ಗೆ ಆದ್ಯತೆ ನೀಡುವ ಆಂಗ್ಲ ಕ್ರಿಕೆಟರ್ಸ್ ವಿರುದ್ಧ ಬೈಕಾಟ್ ಕಿಡಿ!

ಆದರೆ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಗಿರುವ ದೀಪ್‌ದಾಸ್‌ಗುಪ್ತ ಶುಬ್ಮನ್ ಗಿಲ್ ಪ್ರದರ್ಶನದ ಮೇಲೆ ಸಾಕಷ್ಟು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಶುಬ್ಮನ್ ಗಿಲ್ ಸಂದರ್ಭವನ್ನು ಅರ್ಥಮಾಡಿಕೊಳ್ಳುತ್ತಾರೆ. ತನ್ನ ತಪ್ಪುಗಳಿಂದ ಆತ ಕಲಿಯುತ್ತಾನೆ ಎಂದು ನಿರೀಕ್ಷಿಸುತ್ತೇನೆ" ಎಂದಿದ್ದಾರೆ ದೀಪ್ ದಾಸ್‌ಗುಪ್ತ.

"ಶುಬ್ಮನ್ ಗಿಲ್ ತನ್ನಲ್ಲಿನ ಕೊರತೆಯನ್ನು ಕಂಡುಕೊಳ್ಳುತ್ತಾರೆ. ತನ್ನ ಮೊದಲ ಸರಣಿಯಾದ ಆಸ್ಟ್ರೇಲಿಯಾದಲ್ಲಿ ಅವರು ಪ್ಯಾಟ್ ಕಮ್ಮಿನ್ಸ್ ಎಸೆದ ದೇಹದಿಂದ ದೂರ ಹೋಗುತ್ತಿದ್ದ ಎಸೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದರು. ಆದರೆ ಬಳಿಕ ಅಂತಾ ಎಸೆತಗಳಿಗೆ ಪ್ರತ್ಯುತ್ತರವನ್ನು ನೀಡಲು ಆರಂಭಿಸಿದರು. ಆದರೆ ಇಂಗ್ಲೆಂಡ್ ಸರಣಿಯಲ್ಲಿ ಇಂಗ್ಲೀಷ್ ವೇಗಿಗಳು ಇನ್‌ಸ್ವಿಂಗ್ ಎಸೆತಗಳನ್ನು ಎಸೆಯಲು ಆರಂಭಿಸಿದ್ದರು. ಆದು ಆತನಿಗೆ ಸಂಕಷ್ಟವನ್ನು ಉಂಟು ಮಾಡಿದೆ. ಯುವ ಆಟಗಾರನಾಗಿ ಎದುರಾಳಿಗಳಿಂದ ಬರುವ ವಿಭಿನ್ನ ರೀತಿಯ ಎಸೆತಗಳಿಗೆ ಸೂಕ್ತ ಹೊಂದಾಣಿಕೆ ಮಾಡಿಕೊಂಡಿರಬೇಕು. ವಿಭಿನ್ನ ಸರಣಿಗಳಲ್ಲಿ ಈ ಹೊಂದಾಣಿಕೆಗಳು ಕೆಲಸಕ್ಕೆ ಬರುತ್ತದೆ" ಎಂದಿದ್ದಾರೆ ದೀಪ್ ದಾಸ್‌ಗುಪ್ತ.

Story first published: Tuesday, March 9, 2021, 18:57 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X