ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಲ್ಲಿ 1000 ವಿಕೆಟ್ ಪಡೆಯುವ ಸಾಮರ್ಥ್ಯವಿದೆ: ಭಾರತೀಯ ಬೌಲರ್ ಬಗ್ಗೆ ಶೇನ್ ವಾರ್ನ್ ವಿಶ್ವಾಸ

He will take 1000 wicket: Australian Great Shane warne praises Team India bowler

ವಿಶ್ವ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಪ್ರಮುಖರೆಂದರೆ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್. ಈ ಇಬ್ಬರು ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರಮವಾಗಿ 800 ಹಾಗೂ 709 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು ಎನಿಸಿಕೊಂಡಿದ್ದಾರೆ. ಈ ಬೌಲಿಂಗ್ ಸಾಧನೆಯನ್ನು ಸುದೀರ್ಘ ಕಾಲದಿಂದ ಯಾರೂ ಮುರಿಯುವುದು ಅಸಂಭವ ಎಂದೇ ಹೇಳಲಾಗುತ್ತಿದೆ. ಸದ್ಯಕ್ಕಂತೂ ವಿಕೆಟ್ ದಾಖಲೆ ಮುರಿಯುವ ಸನಿಹದಲ್ಲಿ ಯಾವ ಬೌಲರ್ ಕೂಡ ಇಲ್ಲ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ 640 ವಿಕೆಟ್ ಸಂಪಾದಿಸಿದ್ದು ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದ ನಿವೃತ್ತಿಯ ಸನಿಹದಲ್ಲಿದ್ದಾರೆ.

ಹೀಗಿದ್ದಾಗ ಈ ಶ್ರೇಷ್ಠ ಬೌಲರ್‌ಗಳ ದಾಖಲೆಯನ್ನು ಸದ್ಯದ ಮುಟ್ಟಿಗೆ ಮುರಿಯುವ ಬೌಲರ್ ಯಾರೂ ಕಾಣಿಸುತ್ತಿಲ್ಲ ಎಂಬುದು ನಿರ್ವಿವಾದ. ಹಾಗಿದ್ದರೂ ಕೂಡ ಸ್ವತಃ ಶೇನ್ ವಾರ್ನ್ ತನ್ನ ಹಾಗೂ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಹಿಂದಿಕ್ಕಬಲ್ಲ ಆಟಗಾರರು ಇದ್ದಾರೆ ಎಂಬ ಮಾತನ್ನು ಹೇಳಿದ್ದಾರೆ. ಇಬ್ಬರು ಆಟಗಾರರು ಈ ದಾಖಲೆಯನ್ನು ಹಿಂದಿಕ್ಕಲಿದ್ದು ಅವರು 1000 ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ.

ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!

ಆರ್ ಅಶ್ವಿನ್ ಹಾಗೂ ನಾಥನ್ ಲಿಯಾನ್ ಬಗ್ಗೆ ವಾರ್ನ್ ಮಾತು

ಆರ್ ಅಶ್ವಿನ್ ಹಾಗೂ ನಾಥನ್ ಲಿಯಾನ್ ಬಗ್ಗೆ ವಾರ್ನ್ ಮಾತು

ಇನ್ನು ಕ್ರಿಕೆಟ್ ಲೋಕದ ದಿಗ್ಗಜ ಬೌಲರ್ ಶೇನ್ ವಾರ್ನ್ ಈ ರೀತಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ಭಾರತದ ಅನುಭವಿ ಬೌಲರ್ ಆರ್ ಅಶ್ವಿನ್ ಹಾಗೂ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಬಗ್ಗೆ. ಈ ಇಬ್ಬರು ಅತ್ಯುತ್ತಮ ಗುಣಮಟ್ಟದ ಬೌಲಿಂಗ್ ಹೊಂದಿದ್ದು ಈ ದಾಖಲೆಯನ್ನು(ವಾರ್ನ್ ಹಾಗೂ ಮುರಳೀಧರನ್ ದಾಖಲೆ) ಹಿಂದಿಕ್ಕಲಿದ್ದಾರೆ ಎಂದಿದ್ದಾರೆ.

ಇವರಿಂದ ಈ ದಾಖಲೆ ಸಾಧ್ಯ

ಇವರಿಂದ ಈ ದಾಖಲೆ ಸಾಧ್ಯ

"ನನ್ನ ಅನಿಸಿಕೆಯ ಪ್ರಕಾರ ಅಶ್ವಿನ್ ಹಾಗೂ ಲಿಯಾನ್ ಈ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಯಾಕೆಂದರೆ ಈ ಇಬ್ಬರು ಸ್ಪಿನ್ ಬೌಲರ್‌ಗಳ ಬೌಲಿಂಗ್ ದಾಳಿಯನ್ನು ಅಂತಾ ಗುಣಮಟ್ಟವನ್ನು ನಾನು ಕಂಡಿದ್ದೇನೆ. ಇದು ಕ್ರಿಕೆಟ್‌ಅನ್ನು ಮತ್ತಷ್ಟು ಕುತೂಹಲಕಾರಿಯಾಗಿಸಿದೆ. ವೇಗದ ಬೌಲಿಂಗ್ ಗುಣಮಟ್ಟ ಅದ್ಭುತವಾಗಿದ್ದಾಗ ಬ್ಯಾಟಿಂಗ್ ಗುಣಮಟ್ಟ ಕೂಡ ಹೆಚ್ಚಾಗುತ್ದೆ ಅದೇ ರೀತಿ ಸ್ಪಿನ್ ಬೌಲಿಂಗ್ ಗುಣಮಟ್ಟ ಉತ್ಕೃಷ್ಠವಾಗಿದ್ದಾಗ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲರ್‌ಗಳ ನಡುವಿನ ಪೈಪೋಟಿ ಹೆಚ್ಚಾಗುತ್ತದೆ. ಹೀಗೆ ಕ್ರೀಡೆ ಬೆಳೆಯುತ್ತಾ ಸಾಗುತ್ತದೆ. ಇದನ್ನು ನೀವು ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಣಬಹುದಾಗಿದೆ. ಆಗ ಟೆಸ್ಟ್ ಕ್ರಿಕೆಟ್ ಮತ್ತಷ್ಟು ಮನರಂಜನೀಯವಾಗಿರುತ್ತದೆ. ಅದು ಸಾಧ್ಯವಾದರೆ ಆರ್ ಅಶ್ವಿನ್ ಹಾಗೂ ನಾಥನ್ ಲಿಯಾನ್ 1000 ವಿಕೆಟ್‌ಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪಡೆಯಲಿದ್ದಾರೆ. ಅದು ಅದ್ಭುತವಾಗಿರಲಿದೆ" ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಅಶ್ವಿನ್ ಗುಣ್ಣಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ

ಅಶ್ವಿನ್ ಗುಣ್ಣಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ

ಇನ್ನು ಮುಂದುವರಿದು ಮಾತನಾಡಿದ ಶೇನ್ ವಾರ್ನ್ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಮುಂದುವರಿಸಿದರು. "ಆರ್ ಅಶ್ವಿನ್ ತಮ್ಮ ಗುಣಮಟ್ಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ಪ್ರದರ್ಶನ ಅದ್ಭುತವಾಗಿದೆ. ಓರ್ವ ಕ್ರಿಕೆಟಿಗನಿಗೆ ನಿಜವಾದ ಪರೀಕ್ಷೆಯೆಂದರೆ ತವರಿಗಿಂತ ಹೊರಗೆ ಯಾವ ರೀತಿ ಆಡುತ್ತಾರೆ ಎಂಬುದರ ಮೇಲಿದೆ. ಅದರಲ್ಲಿ ಆರ್ ಅಶ್ವಿನ್ ಯಶಸ್ಸು ಸಾಧಿಸಿದ್ದಾರೆ. ನಾನು ಆರ್ ಅಶ್ವಿನ್ ಅವರ ಅಭಿಮಾನಿ. ನನ್ನ ಪ್ರಕಾರ ಆತ ಯಾವಾಗಲೂ ಬೆಳವಣಿಗೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ. ವಿಭಿನ್ನ ಎಸೆತಗಳನ್ನು ಪ್ರಯೋಗಿಸುತ್ತಿರುತ್ತಾರೆ" ಎಂದು ಶೇನ್ ವಾರ್ನ್ ಹೇಳಿದ್ದಾರೆ.

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

Story first published: Tuesday, January 25, 2022, 18:00 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X