ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೇ ಎಸೆತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶರಣಾದ ಭಾರತದ ವನಿತೆಯರು

Heartbreak for India womens team as Australia win in 2nd ODI

ಮ್ಯಾಕೆ: ಆಸ್ಟ್ರೇಲಿಯಾದ ಮ್ಯಾಕೆಯ ಹರಪ್ ಪಾರ್ಕ್ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 24) ನಡೆದ ಭಾರತದ ಮಹಿಳೆಯರು ಮತ್ತು ಭಾರತದ ಮಹಿಳೆಯರ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಜಯ ಗಳಿಸಿದೆ. ಪಂದ್ಯ ಗೆಲ್ಲುವುದರಲ್ಲಿದ್ದ ಭಾರತ ಕೊನೇ ಎಸೆತದಲ್ಲಿ ಪಂದ್ಯ ಸೋತು ನಿರಾಸೆ ಅನುಭವಿಸಿದೆ.

ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಮಹಿಳೆಯರು, ಸ್ಮೃತಿ ಮಂಧಾನ 86, ಶಫಾಲಿ ವರ್ಮಾ 22, ನಾಯಕಿ ಮಿಥಾಲಿ ರಾಜ್ 8, ಯಕ್ಷಿತ ಭಾಟಿಯಾ 3, ರಿಚಾ ಘೋಷ್ 44, ದೀಪ್ತಿ ಶರ್ಮಾ 23, ಪೂಜಾ ವಸ್ತ್ರಾಕರ್ 29, ಜೂಲನ್ ಗೋಸ್ವಾಮಿ 28 ರನ್‌ನೊಂದಿಗೆ 50 ಓವರ್‌ಗೆ 7 ವಿಕೆಟ್ ಕಳೆದು 274 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಹಿಳೆಯರು ಬೆತ್ ಮೂನಿ 125, ಮೆಗ್ ಲ್ಯಾನಿಂಗ್ 6, ಎಲ್ಲಿಸ್ ಪೆರ್ರಿ 2, ಆಶ್ಲೇ ಗಾರ್ಡ್ನರ್ 12, ನಿಕೋಲ ಕೇರಿ 39 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 275 ರನ್ ಗಳಿಸಿತು. ಕೊನೇ ಎಸೆತಕ್ಕೆ ಆಸ್ಟ್ರೇಲಿಯಾ ಗೆಲ್ಲಲು 3 ರನ್ ಬೇಕಿತ್ತು. ಜೂಲನ್ ಗೋಸ್ವಾಮಿ ಕೊನೇ ಎಸೆತ ನೋ ಬಾಲ್ ಹಾಕಿದರು. ಗೋಸ್ವಾಮಿ ಓವರ್ ಪೂರ್ಣಗೊಳಿಸುವಾಗ ಆಸೀಸ್ 2 ರನ್ ಗಳಿಸಿ ಪಂದ್ಯ ಗೆದ್ದಿತು.

ರಾಹುಲ್, ಪಂತ್ ಅಲ್ಲ; ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನು ಹೆಸರಿಸಿದ ಬ್ರಾಡ್ ಹಾಜ್ರಾಹುಲ್, ಪಂತ್ ಅಲ್ಲ; ಟೀಮ್ ಇಂಡಿಯಾದ ಭವಿಷ್ಯದ ನಾಯಕನನ್ನು ಹೆಸರಿಸಿದ ಬ್ರಾಡ್ ಹಾಜ್

ಭಾರತದ ಮಹಿಳೆಯರ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಡಾರ್ಸಿ ಬ್ರೌನ್ 1, ಸೋಫಿ ಮೊಲಿನಕ್ಸ್ 2, ತಹ್ಲಿಯಾ ಮೆಕ್‌ಗ್ರಾತ್ 3 ವಿಕೆಟ್‌ ಪಡೆದರೆ, ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ 1, ಮೇಘನಾ 1, ಪೂಜಾ ವಸ್ತ್ರಾಕರ್ 1, ದೀಪ್ತಿ ಶರ್ಮಾ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಬೆತ್ ಮೂನಿ ಪಂದ್ಯಶ್ರೇಷ್ಠರೆನಿಸಿದರು.

Story first published: Saturday, September 25, 2021, 10:33 [IST]
Other articles published on Sep 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X