ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ಟೆಸ್ಟ್ ನಂತರ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರ & ಕೊನೇ ಸ್ಥಾನ ಯಾರಿಗೆ?

Here is how the World Test Championship points table stands after India vs Sri Lanka Test Series

ಶ್ರೀಲಂಕಾದ ಭಾರತ ಪ್ರವಾಸ ಅಂತ್ಯಗೊಂಡಿದ್ದು ಇತ್ತಂಡಗಳ ನಡುವೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನೂ ಗೆದ್ದು ಬೀಗಿರುವ ಟೀಮ್ ಇಂಡಿಯಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಹೌದು, ಕಳೆದ ತನ್ನ ಕಳೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುಂಡಿದ್ದ ಟೀಮ್ ಇಂಡಿಯಾ ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಸಾಧನೆ ಮಾಡುವ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ. ಇತ್ತ ರೋಹಿತ್ ಶರ್ಮಾ ನಾಯಕನಾದ ನಂತರ ನಡೆದ ಟಿ ಟ್ವೆಂಟಿ ಹಾಗೂ ಏಕದಿನ ಸರಣಿಗಳಲ್ಲಿ ವೈಟ್‌ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾದ ನಂತರ ನಡೆದ ಟೆಸ್ಟ್ ಸರಣಿಯಲ್ಲೂ ವೈಟ್‌ವಾಷ್ ಸಾಧನೆ ಮಾಡಿದ್ದು, ಈ ತಂಡ ಸಾಕಷ್ಟು ಬದಲಾವಣೆಗಳಿಂದಲೂ ಕೂಡಿತ್ತು.

ಐಪಿಎಲ್ 2022: ಬಲಿಷ್ಟ ಸಿಎಸ್‌ಕೆಯನ್ನು ಎದುರಿಸಿ ಕಠಿಣ ಪೈಪೋಟಿ ನೀಡಬಲ್ಲ ಸಾಮರ್ಥ್ಯವಿರುವ 3 ತಂಡಗಳಿವುಐಪಿಎಲ್ 2022: ಬಲಿಷ್ಟ ಸಿಎಸ್‌ಕೆಯನ್ನು ಎದುರಿಸಿ ಕಠಿಣ ಪೈಪೋಟಿ ನೀಡಬಲ್ಲ ಸಾಮರ್ಥ್ಯವಿರುವ 3 ತಂಡಗಳಿವು

ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದು ಹೀನಾಯ ಸೋಲು ಕಂಡಿದ್ದ ಟೀಮ್ ಇಂಡಿಯಾದಲ್ಲಿದ್ದ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ವೃದ್ಧಿಮಾನ್ ಸಹಾ ಮತ್ತು ಇಶಾಂತ್ ಶರ್ಮಾರನ್ನು ಹೊರಗಿಟ್ಟ ಆಯ್ಕೆಗಾರರು ಯುವ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾವನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಿತ್ತು. ಹೀಗೆ ಪ್ರಕಟವಾದ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಾ ಎಂಬ ಅನುಮಾನಗಳನ್ನೂ ಸಹ ಕೆಲ ಕ್ರಿಕೆಟ್ ಪಂಡಿತರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದರು. ಈ ಎಲ್ಲಾ ಅನುಮಾನಗಳಿಗೆ ಉತ್ತರ ನೀಡಿರುವ ಟೀಮ್ ಇಂಡಿಯಾ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ರೀತಿಯ ಟೆಸ್ಟ್ ಸ್ಪೆಷಲಿಸ್ಟ್‌ಗಳಿಲ್ಲದೇ ವೈಟ್‌ವಾಷ್ ಸಾಧನೆ ಮಾಡಿ ತೋರಿಸಿದೆ. ಹಾಗೂ ಈ ಸರಣಿ ಗೆಲುವಿನೊಂದಿಗೆ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಏರಿಕೆಯನ್ನೂ ಕೂಡ ಕಂಡಿದೆ.

ಈತ ರಹಾನೆ ಮತ್ತು ಪೂಜಾರ ಸ್ಥಾನ ತುಂಬಬಲ್ಲ ಆಟಗಾರ ಎಂದು ಕೊಂಡಾಡಿದ ರೋಹಿತ್ಈತ ರಹಾನೆ ಮತ್ತು ಪೂಜಾರ ಸ್ಥಾನ ತುಂಬಬಲ್ಲ ಆಟಗಾರ ಎಂದು ಕೊಂಡಾಡಿದ ರೋಹಿತ್

ಇನ್ನು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಮುಕ್ತಾಯಗೊಂಡ ನಂತರ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿ ಈ ಕೆಳಕಂಡಂತಿದೆ

ಏರಿಕೆ ಕಂಡ ಭಾರತ

ಏರಿಕೆ ಕಂಡ ಭಾರತ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೃಹತ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಒಟ್ಟು 4 ಟೆಸ್ಟ್ ಸರಣಿಗಳನ್ನಾಡಿರುವ ಭಾರತ 6 ಪಂದ್ಯಗಳಲ್ಲಿ ಗೆಲುವು ಕಂಡಿದ್ದು, 3 ಪಂದ್ಯಗಳಲ್ಲಿ ಸೋತಿದೆ ಹಾಗೂ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು 77 ಅಂಕಗಳನ್ನು ಪಡೆದುಕೊಳ್ಳುವುದರ ಶೇ, 58.33ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಇನ್ನು ಭಾರತ 3 ಅಂಕಗಳನ್ನು ಪೆನಾಲ್ಟಿಗಾಗಿ ಕಳೆದುಕೊಂಡಿದೆ.

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ

ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ

ಇನ್ನು ಒಟ್ಟು 2 ಸರಣಿಗಳಲ್ಲಿ ಭಾಗವಹಿಸಿರುವ ಆಸ್ಟ್ರೇಲಿಯಾ 4 ಪಂದ್ಯಗಳಲ್ಲಿ ಗೆದ್ದು, ಯಾವುದೇ ಸೋಲು ಕಾಣದೇ 2 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ 56 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಇಲ್ಲಿಯವರೆಗೂ ಸೋಲನ್ನೇ ಕಾಣದ ಆಸ್ಟ್ರೇಲಿಯಾ ಶೇ. 77.77ರಷ್ಟು ಗೆಲುವನ್ನು ಸಾಧಿಸಿದೆ. ಇನ್ನು 40 ಅಂಕಗಳೊಂದಿಗೆ 66.66 ಗೆಲುವಿನ ಶೇಕಡಾಂಶವನ್ನು ಹೊಂದಿರುವ ಪಾಕಿಸ್ತಾನ ಈ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, 36 ಅಂಕಗಳೊಂದಿಗೆ 60.00 ಗೆಲುವಿನ ಶೇಕಡಾಂಶವನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತೃತೀಯ ಸ್ಥಾನದಲ್ಲಿದೆ.

ಆಶಸ್ ಸೋತ ಇಂಗ್ಲೆಂಡ್ ಅಂತಿಮ

ಆಶಸ್ ಸೋತ ಇಂಗ್ಲೆಂಡ್ ಅಂತಿಮ

ಇನ್ನು ಆಶಸ್ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತ ಇಂಗ್ಲೆಂಡ್ ಈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 14 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ 11.67 ಗೆಲುವಿನ ಶೇಕಡಾಂಶದೊಂದಿಗೆ ಈ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ಸದ್ಯ ಟೀಮ್ ಇಂಡಿಯಾ ವಿರುದ್ಧ ಸೋತ ಶ್ರೀಲಂಕಾ ಐದನೇ ಸ್ಥಾನ, ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ನ್ಯೂಜಿಲೆಂಡ್ ಆರನೇ ಸ್ಥಾನ, ಬಾಂಗ್ಲಾದೇಶ ಏಳನೇ ಸ್ಥಾನ ಹಾಗೂ ವೆಸ್ಟ್ ಇಂಡೀಸ್ ಎಂಟನೇ ಸ್ಥಾನದಲ್ಲಿದೆ.

Story first published: Tuesday, March 15, 2022, 15:23 [IST]
Other articles published on Mar 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X