ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!

 Here is the list of 5 Captains Chennai Super Kings can target in IPL 2022 Mega Auction

ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡದ ಬಳಿಕ ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿರುವ ತಂಡ. ಒಟ್ಟು 3 ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಐಪಿಎಲ್ ಆರಂಭವಾದ ವರ್ಷದಿಂದಲೂ ಎಂ ಎಸ್ ಧೋನಿಯೇ ನಿರ್ವಹಿಸಿಕೊಂಡು ಬಂದಿದ್ದಾರೆ.

ಮುಂಬೈ ತಂಡದಲ್ಲಿದ್ದಾಗ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಈ ಆಟಗಾರರು ಇಂದು ಸ್ಟಾರ್ ಪ್ಲೇಯರ್ಸ್!

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯದ್ಭುತ ಪ್ರದರ್ಶನಗಳನ್ನು ನೀಡಿದ್ದು ಸತತ ಹತ್ತು ವರ್ಷಗಳ ಕಾಲ ಪ್ಲೇ ಆಫ್ ಪ್ರವೇಶಿಸಿರುವ ದಾಖಲೆಯನ್ನು ಹೊಂದಿದೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು, ಆ ವೇಳೆ ಧೋನಿ ನಾಯಕತ್ವದ ಕುರಿತು ದೊಡ್ಡ ಮಟ್ಟದಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು. ಈ ಟೀಕೆಗಳಿಗೆಲ್ಲ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ಸಿನ ಹಾದಿಗೆ ಕರೆತರುವುದರ ಮೂಲಕ ಎಂಎಸ್ ಧೋನಿ ಉತ್ತರ ನೀಡಿದ್ದಾರೆ.

ಕನ್ನಡ ಬರುತ್ತಾ ಎಂದು ಕೇಳಿದ ಅಭಿಮಾನಿಗೆ ವಿರಾಟ್ ಕೊಹ್ಲಿ ಉತ್ತರ; ಕನ್ನಡಿಗರು ಫಿದಾ

ಹೌದು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನವನ್ನು ನೀಡಿದ್ದು ಯಶಸ್ಸಿನ ಹಾದಿಗೆ ಮರಳಿದೆ. ಈ ಮೂಲಕ ಎಂಎಸ್ ಧೋನಿ ತನ್ನಲ್ಲಿ ಇನ್ನೂ ನಾಯಕತ್ವ ನಿಭಾಯಿಸುವ ಶಕ್ತಿ ಇದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಆದರೂ ಸಹ ಮುಂಬರುವ ಜುಲೈ ತಿಂಗಳಿಗೆ ಎಂಎಸ್ ಧೋನಿ 40 ವರ್ಷ ದಾಟಲಿದ್ದು ಆದಷ್ಟು ಬೇಗ ಐಪಿಎಲ್‌ಗೂ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಧೋನಿ ನಂತರ ಚೆನ್ನೈ ತಂಡವನ್ನು ಮುನ್ನಡೆಸಲು ಸಮರ್ಥ ನಾಯಕನ ಅಗತ್ಯವಿದ್ದು 2022ರಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ನಾಯಕತ್ವ ನಿರ್ವಹಿಸಬಲ್ಲ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸುವ ಯೋಜನೆಯಲ್ಲಿದ್ದು ಈ ಕೆಳಕಂಡ ಆಟಗಾರರನ್ನು ಖರೀದಿಸಬಹುದು..

1. ಡೇವಿಡ್ ವಾರ್ನರ್

1. ಡೇವಿಡ್ ವಾರ್ನರ್

2016ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ನಾಯಕತ್ವದಡಿಯಲ್ಲಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಡೇವಿಡ್ ವಾರ್ನರ್ ಓರ್ವ ಅತ್ಯುತ್ತಮ ನಾಯಕತ್ವದ ಗುಣಗಳುಳ್ಳ ಆಟಗಾರನಾಗಿದ್ದು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದಿಂದಲೇ ಕಡೆಗಣಿಸಲ್ಪಟ್ಟಿದ್ದಾರೆ. ಹೀಗಾಗಿ ಮುಂಬರುವ ಮೆಗಾ ಹರಾಜಿನಲ್ಲಿ ವಾರ್ನರ್‌ನ್ನು ಹೈದರಾಬಾದ್ ತಂಡ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತನನ್ನು ಖರೀದಿಸಬಹುದಾಗಿದೆ.

2. ಮನೀಷ್ ಪಾಂಡೆ

2. ಮನೀಷ್ ಪಾಂಡೆ

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದ ಮನೀಷ್ ಪಾಂಡೆ ಐಪಿಎಲ್ ಟೂರ್ನಿಗಳಲ್ಲಿ ನಾಯಕತ್ವ ನಿಭಾಯಿಸಿರುವ ಅನುಭವ ಇಲ್ಲದಿದ್ದರೂ ಸಹ ರಣಜಿ ಕ್ರಿಕೆಟ್‍ನಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ಪಾಂಡೆಗಿದೆ. ಹೀಗಾಗಿ ಮುಂದಿನ ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಂಡೆಯನ್ನು ಖರೀದಿಸಬಹುದಾಗಿದೆ.

3. ಸೂರ್ಯಕುಮಾರ್ ಯಾದವ್

3. ಸೂರ್ಯಕುಮಾರ್ ಯಾದವ್

ಮುಂಬೈ ಇಂಡಿಯನ್ಸ್ ತಂಡದ ಪರ ಉತ್ತಮ ಇನ್ನಿಂಗ್ಸ್ ಅಡಿ ಐಪಿಎಲ್ ಟೂರ್ನಿಯಲ್ಲಿ ಭರವಸೆ ಮೂಡಿಸಿರುವ ಸೂರ್ಯಕುಮಾರ್ ಯಾದವ್ ದೇಶೀಯ ಕ್ರಿಕೆಟ್‍ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿರುವ ತುಸು ಅನುಭವವನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂದುವೇಳೆ ಸೂರ್ಯಕುಮಾರ್ ಯಾದವ್ ಕೈಬಿಟ್ಟರೆ ಚೆನ್ನೈ ತಂಡ ಆತನನ್ನು ಖರೀದಿಸಬಹುದಾಗಿದೆ.

4. ಸ್ಟೀವ್ ಸ್ಮಿತ್

4. ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ತಂಡದ ಮತ್ತು ಐಪಿಎಲ್ ಟೂರ್ನಿಯಲ್ಲಿಯೂ ನಾಯಕತ್ವವನ್ನು ನಿಭಾಯಿಸಿರುವ ದೊಡ್ಡಮಟ್ಟದ ಅನುಭವವನ್ನೇ ಹೊಂದಿದ್ದಾರೆ. ಆದರೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಮಿತ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ಕಳಪೆ ಪ್ರದರ್ಶನ ನೀಡಿದ ಕಾರಣ ಈ ಬಾರಿ ಆತನನ್ನು ತಂಡದಿಂದ ಕೈಬಿಡಲಾಯಿತು, ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಮಿತ್ ಆಡುತ್ತಿದ್ದು ಆತನ ನಾಯಕತ್ವವನ್ನು ಕಡೆಗಣಿಸುವಂತಿಲ್ಲ. ನಾಯಕತ್ವದ ಹೊರೆಯನ್ನು ಹೊರುವಂತಹ ಗುಣವಿರುವ ಸ್ಮಿತ್‌ನ್ನು ಚೆನ್ನೈ ತಂಡ ಮುಂದಿನ ಐಪಿಎಲ್ ಹರಾಜಿನಲ್ಲಿ ಖರೀದಿಸಬಹುದಾಗಿದೆ.

5. ಇಶಾನ್ ಕಿಶನ್

5. ಇಶಾನ್ ಕಿಶನ್

2016ರಲ್ಲಿ ಸುರೇಶ್ ರೈನಾ ನಾಯಕತ್ವದ ಗುಜರಾತ್ ಲಯನ್ಸ್ ತಂಡದ ಪರ ಉತ್ತಮ ಆಟವಾಡಿದ್ದ ಇಶಾನ್ ಕಿಶನ್ 2018ರಿಂದ ಮುಂಬೈ ಇಂಡಿಯನ್ಸ್ ತಂಡದ ಪರ ಆಟವಾಡುತ್ತಿದ್ದಾರೆ. ಕಳೆದ ಬಾರಿ ಮುಂಬೈ ತಂಡದ ಪರ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದ ಇಶಾನ್ ಕಿಶನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಂಕಾಗಿದ್ದಾರೆ, ಅಲ್ಲದೆ ಒಂದೆರಡು ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಸಿಗದೆ ಬೆಂಚ್ ಕಾದಿದ್ದಾರೆ. ಮುಂದಿನ ಹರಾಜಿನಲ್ಲಿ ಒಂದುವೇಳೆ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್‌ನ್ನು ಬಿಟ್ಟುಕೊಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತನನ್ನು ಖರೀದಿಸಬಹುದಾಗಿದೆ. ಇಶಾನ್ ಕಿಶನ್ ಅಂಡರ್ 19 ತಂಡ ಮತ್ತು ಜಾರ್ಖಂಡ್ ತಂಡವನ್ನು ದೇಶೀಯ ಕ್ರಿಕೆಟ್‍ನಲ್ಲಿ ಮುನ್ನೆಡೆಸಿರುವ ಅನುಭವವನ್ನು ಹೊಂದಿದ್ದಾರೆ.

Story first published: Sunday, May 30, 2021, 18:41 [IST]
Other articles published on May 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X