ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022ರ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಆಟಗಾರರು

Here is the List of 5 players on whom RCB could use the RTM Card in IPL 2022 Mega Auction
RCBಯಿಂದ ಸಾಕಷ್ಟು ಆಟಗಾರರು ದೂರ ಹೊಡೆದಿದ್ದಾರೆ | Oneindia Kannada

ಪ್ರಸ್ತುತ ಐಪಿಎಲ್ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ ಸತತವಾಗಿ ಜಯಗಳಿಸುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಕಾಣದಂತಹ ಅತ್ಯದ್ಭುತ ಆರಂಭವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪಡೆದುಕೊಂಡಿತು. ಟೂರ್ನಿ ಮುಂದೂಡಲ್ಪಡುವ ವೇಳೆಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಬೆಂಗಳೂರು ತಂಡ ಉತ್ತಮ ಸ್ಥಿತಿಯಲ್ಲಿದೆ.

ಧೋನಿಗೆ ಅವಕಾಶ ನೀಡಲು ಗಂಗೂಲಿ ಒಪ್ಪಿರಲಿಲ್ಲ, ಹತ್ತು ದಿನಗಳ ಕಾಲ ಒತ್ತಾಯ ಮಾಡಿದ್ದೆ: ಮಾಜಿ ಕ್ರಿಕೆಟಿಗ

ಇನ್ನು ಪ್ರಸ್ತುತ ಐಪಿಎಲ್ ಟೂರ್ನಿಯ ಜೊತೆಗೆ ಮುಂಬರುವ ಐಪಿಎಲ್ ಆವೃತ್ತಿಯ ಕುರಿತು ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, 2022ರ ಐಪಿಎಲ್ ಹರಾಜಿನ ಕುರಿತು ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಹೌದು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ ಎನ್ನಲಾಗುತ್ತಿದ್ದು ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಪ್ರತಿ ತಂಡಗಳೂ 3 ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಡಬೇಕಾಗಿದೆ.

ಐಪಿಎಲ್ 2022ರ ಹರಾಜಿನಲ್ಲಿ ಕೃನಾಲ್ ಪಾಂಡ್ಯನನ್ನು ಖರೀದಿಸಬಹುದಾದ 3 ತಂಡಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಇಬ್ಬರನ್ನು ಖಡಾಖಂಡಿತವಾಗಿ ಉಳಿಸಿಕೊಳ್ಳಲಿದೆ. ಈ ಇಬ್ಬರು ಆಟಗಾರರ ಜೊತೆ ಮತ್ತೊಬ್ಬ ಆಟಗಾರನನ್ನು ಬೆಂಗಳೂರು ತಂಡ ಉಳಿಸಿಕೊಳ್ಳಬಹುದಾಗಿದ್ದು ಈ ಕೆಳಕಂಡ 5 ಆಟಗಾರರ ಪೈಕಿ ಯಾರಾದರೂ ಒಬ್ಬನನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಿದೆ.

5. ಕೈಲ್ ಜೆಮಿಸನ್

5. ಕೈಲ್ ಜೆಮಿಸನ್

ಪ್ರಸ್ತುತ ಐಪಿಎಲ್ ಆವೃತ್ತಿಯ ಮಿನಿ ಹರಾಜಿನಲ್ಲಿ 15 ಕೋಟಿ ರೂಪಾಯಿಗಳಿಗೆ ಕೈಲ್ ಜೆಮಿಸನ್‌ನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 9 ವಿಕೆಟ್ ಪಡೆದುಕೊಂಡು ಉತ್ತಮ ಆಟವನ್ನು ಪ್ರದರ್ಶಿಸಿದ ಕೈಲ್ ಜೆಮಿಸನ್‌ನ್ನು ಮುಂಬರುವ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಳ್ಳುವ ಸಾಧ್ಯತೆಯಿದೆ.

4. ಯುಜುವೇಂದ್ರ ಚಾಹಲ್

4. ಯುಜುವೇಂದ್ರ ಚಾಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಯಜುವೇಂದ್ರ ಚಹಾಲ್‌ನ್ನು ಮುಂಬರುವ ಐಪಿಎಲ್ ಹರಾಜಿನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆರ್‌ಸಿಬಿ ಪರ 105 ಪಂದ್ಯಗಳನ್ನಾಡಿರುವ ಚಾಹಲ್ 125 ವಿಕೆಟ್‍ಗಳನ್ನು ಪಡೆದು ಮಿಂಚಿದ್ದಾರೆ.

3. ಮೊಹಮ್ಮದ್ ಸಿರಾಜ್

3. ಮೊಹಮ್ಮದ್ ಸಿರಾಜ್


ಇತ್ತೀಚಿನ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಕಳೆದ ಕೆಲವು ಪಂದ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಮುಂಬರುವ ಐಪಿಎಲ್ ಹರಾಜಿನಲ್ಲಿ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಿವೆ.

2. ದೇವದತ್ ಪಡಿಕ್ಕಲ್

2. ದೇವದತ್ ಪಡಿಕ್ಕಲ್

ಕಳೆದ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿರುವ ಯುವ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮೇಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣ್ಣಿಟ್ಟಿದ್ದು ಮುಂಬರುವ ಹರಾಜಿನಲ್ಲಿ ತಂಡದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದು.

1. ಗ್ಲೆನ್ ಮ್ಯಾಕ್ಸ್‌ವೆಲ್

1. ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್ ಮೈದಾನದಲ್ಲಿದ್ದರೆ ಎದುರಾಳಿ ತಂಡಗಳು ಭಯಭೀತರಾಗುವುದಂತೂ ಖಚಿತ. ಇನ್ನು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಬೆಂಗಳೂರು ಪರ ಆಡಿದ 6 ಇನ್ನಿಂಗ್ಸ್‌ನಲ್ಲಿ 223 ರನ್ ಬಾರಿಸಿರುವ ಮ್ಯಾಕ್ಸ್‌ವೆಲ್ ತಂಡಕ್ಕೆ ಅತಿಮುಖ್ಯವಾಗಿ ಬೇಕಾಗಿರುವ ಆಟಗಾರ ಎನಿಸಿಕೊಂಡಿದ್ದು ಮುಂಬರುವ ಐಪಿಎಲ್ ಹರಾಜಿನಲ್ಲಿ ತಂಡದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

Story first published: Tuesday, July 27, 2021, 15:43 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X