ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾರಿಂದಲೂ ಮುರಿಯಲಾಗದ ಸಿಎಸ್‌ಕೆ ನಿರ್ಮಿಸಿರುವ 5 ದಾಖಲೆಗಳು!

Here is the list of 5 Unbreakable records set by the Chennai Super Kings

ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಇತಿಹಾಸ ಕಂಡ ಯಶಸ್ವಿ ತಂಡಗಳಲ್ಲೊಂದು. 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಚಾಂಪಿಯನ್ ಆಗುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದ ತಂಡ ಎನಿಸಿಕೊಂಡಿತ್ತು.

ಬೀಳ್ಕೊಡುಗೆ ಗೌರವ ಸಿಗದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ 5 ಮಹಾನ್ ಕ್ರಿಕೆಟಿಗರುಬೀಳ್ಕೊಡುಗೆ ಗೌರವ ಸಿಗದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ 5 ಮಹಾನ್ ಕ್ರಿಕೆಟಿಗರು

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸಿನ ಹಾದಿಗೆ ಮರಳಿದೆ. ಐಪಿಎಲ್ ಇತಿಹಾಸದಲ್ಲಿ ಅತೀ ಕಡಿಮೆ ಕಳಪೆ ಪ್ರದರ್ಶನ ನೀಡಿರುವ ತಂಡಗಳಲ್ಲಿ ಚೆನ್ನೈ ಕೂಡ ಒಂದು. ಐಪಿಎಲ್ ಆಡಲು ಬರುವ ಪ್ರತಿಯೊಬ್ಬ ಆಟಗಾರನೂ ಸಹ ಒಮ್ಮೆಯಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ ತೊಟ್ಟು ಆಡಬೇಕೆನ್ನುವ ಆಸೆಯನ್ನು ಹೊಂದಿರುತ್ತಾರೆ, ಅಷ್ಟರಮಟ್ಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ತನ್ನ ಹೆಸರನ್ನು ನಿರ್ಮಿಸಿಕೊಂಡಿದೆ.

ಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿ

ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕೆಲವೇ ಐಪಿಎಲ್ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಯಾರೂ ಮುರಿಯಲಾಗದಂತಹ ಕೆಲವು ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಚೆನ್ನೈ ತಂಡ ನಿರ್ಮಿಸಿರುವ ಆ ದೊಡ್ಡ ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ.

1. ಸತತ ಮೂರು ಟ್ರೋಫಿಗಳು

1. ಸತತ ಮೂರು ಟ್ರೋಫಿಗಳು

2010ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಅದೇ ವರ್ಷದಲ್ಲಿ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಯಗಳಿಸಿತು. 2010ರಲ್ಲಿ ಈ ಎರಡೂ ಟ್ರೋಫಿಗಳನ್ನು ಗೆದ್ದ ಬೆನ್ನಲ್ಲೇ 2011ರ ಐಪಿಎಲ್ ಟ್ರೋಫಿಯನ್ನು ಸಹ ಜಯಗಳಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ 3 ಟ್ರೋಫಿಗಳನ್ನು ಗೆದ್ದಿರುವ ಸಾಧನೆ ಮಾಡಿದೆ. ಐಪಿಎಲ್ ತಂಡಗಳ ಪೈಕಿ ಯಾವ ತಂಡವೂ ಕೂಡ ಈ ಸಾಧನೆಯನ್ನು ಮಾಡಿಲ್ಲ.

2. ಸತತ ಹತ್ತು ಬಾರಿ ಪ್ಲೇಆಫ್‌ ಪ್ರವೇಶ

2. ಸತತ ಹತ್ತು ಬಾರಿ ಪ್ಲೇಆಫ್‌ ಪ್ರವೇಶ

ಐಪಿಎಲ್ ಇತಿಹಾಸದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ ಬೇರೆ ಯಾವ ತಂಡ ಕೂಡ ಸತತವಾಗಿ ಹತ್ತು ಬಾರಿ ಪ್ಲೇಆಫ್ ಪ್ರವೇಶವನ್ನು ಮಾಡಿಲ್ಲ. 2016 ಮತ್ತು 2017ರಲ್ಲಿ ಐಪಿಎಲ್ ಆಡದೇ ಇದ್ದರೂ ಸಹ ಹತ್ತು ಬಾರಿ ಪ್ಲೇ ಆಫ್ ಪ್ರವೇಶಿಸುವುದರ ಮೂಲಕ ಚೆನ್ನೈ ಈ ದಾಖಲೆಯನ್ನು ನಿರ್ಮಿಸಿದೆ.

3. ಅತ್ಯುತ್ತಮ ಬೌಲಿಂಗ್ ಪ್ರದರ್ಶನ

3. ಅತ್ಯುತ್ತಮ ಬೌಲಿಂಗ್ ಪ್ರದರ್ಶನ

2009ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 116 ರನ್‌ಗಳನ್ನು ಗಳಿಸಿತು. 117 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ ಕೇವಲ 92 ರನ್ ಗಳಿಸಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತಿಕಡಿಮೆ ಮೊತ್ತ ಗಳಿಸಿಯೂ ಗೆಲುವು ಸಾಧಿಸಿದ ತಂಡ ಎನಿಸಿಕೊಂಡಿದೆ.

4. ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್

4. ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಆಟಗಾರ ಡ್ವೇನ್ ಬ್ರಾವೊ 2013ರ ಐಪಿಎಲ್ ಆವೃತ್ತಿಯಲ್ಲಿ 32 ವಿಕೆಟ್‍ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿಯೇ ಆವೃತ್ತಿಯೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಚೆನ್ನೈ ತಂಡದ ಡ್ವೇನ್ ಬ್ರಾವೋ ತಮ್ಮ ಹೆಸರಿನಲ್ಲಿ ಹೊಂದಿದ್ದು ಇದುವರೆಗೂ ಯಾರೂ ಸಹ ಈ ದಾಖಲೆಯನ್ನು ಮುರಿಯಲಾಗಿಲ್ಲ.

5. ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿರುವ ಏಕೈಕ ನಾಯಕ

5. ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿರುವ ಏಕೈಕ ನಾಯಕ

ಎಂಎಸ್ ಧೋನಿ ಐಪಿಎಲ್ ಆರಂಭವಾದಾಗಿನಿಂದಲೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಆಟಗಾರ. ಹೀಗಾಗಿ ಐಪಿಎಲ್ ತಂಡವೊಂದನ್ನು ಅತಿಹೆಚ್ಚು ಪಂದ್ಯಗಳಲ್ಲಿ ಏಕೈಕ ನಾಯಕ ಮುನ್ನಡೆಸಿರುವ ದಾಖಲೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಂದಿದೆ. ಇದುವರೆಗೂ ಒಟ್ಟು 181 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಂಎಸ್ ಧೋನಿ ಮುನ್ನಡೆಸಿದ್ದಾರೆ.

Story first published: Monday, May 24, 2021, 15:20 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X