ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗದೇ ಮೂಲೆಗುಂಪಾದ 9 ಭಾರತೀಯ ಕ್ರಿಕೆಟಿಗರು!

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾವೈರಸ್ ನಡುವೆಯೂ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳವರೆಗೂ ಯಶಸ್ವಿಯಾಗಿ ನಡೆಯಿತು. ಆದರೆ 29 ಪಂದ್ಯಗಳ ನಂತರ ಕೊರೊನಾವೈರಸ್ ಕಾರಣದಿಂದ ಟೂರ್ನಿಯನ್ನು ಮುಂದೂಡಲಾಯಿತು.

ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳದೇ ತಂಡದಿಂದ ಕೈಬಿಟ್ಟ ಸ್ಟಾರ್ ಕ್ರಿಕೆಟಿಗರಿವರು!

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ ಪಂದ್ಯಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರೆ, ಕಳೆದ ಬಾರಿ ಮುಗ್ಗರಿಸಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ಸಿನ ಹಾದಿಗೆ ಮರಳಿ ಎರಡನೇ ಸ್ಥಾನದಲ್ಲಿದೆ, ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಐಪಿಎಲ್ ಟೂರ್ನಿಯ ಮೊದಲ ನಾಲ್ಕೂ ಪಂದ್ಯಗಳನ್ನು ಸತತವಾಗಿ ಗೆಲ್ಲುವುದರ ಮೂಲಕ ಅತ್ಯುತ್ತಮ ಆರಂಭವನ್ನು ಪಡೆದುಕೊಂಡು ಐಪಿಎಲ್ ಮುಂದೂಡಲ್ಪಟ್ಟ ವೇಳೆಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ ಹಾಗೂ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.

WTC Final: ನ್ಯೂಜಿಲೆಂಡ್‌ಗೆ ಲಾಭ, ಭಾರತಕ್ಕೆ ನಷ್ಟ; ಯುವರಾಜ್ ಸಿಂಗ್ ಅಸಮಾಧಾನ

ಇದೀಗ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯನ್ನು ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಮುಂದುವರೆಸಲು ಬಿಸಿಸಿಐ ತೀರ್ಮಾನಿಸಿದೆ. ಪ್ರಸ್ತುತ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಹಲವಾರು ಯುವ ಪ್ರತಿಭೆಗಳು ಮಿಂಚಿದ್ದು, ಅನ್‌ಕ್ಯಾಪ್ಡ್ ಆಟಗಾರರು ಅಂತಾರಾಷ್ಟ್ರೀಯ ಆಟಗಾರರಿಗಿಂತ ಉತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದು ವಿಶೇಷ. ಆದರೆ ಇನ್ನೂ ಕೆಲ ಅಂತಾರಾಷ್ಟ್ರೀಯ ಹಾಗೂ ಯುವ ಆಟಗಾರರು ಪ್ರಸ್ತುತ ಐಪಿಎಲ್ ಟೂರ್ನಿಗೆ ಆಯ್ಕೆಯಾಗಿದ್ದರೂ ಸಹ ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಗದೆ ಬೆಂಚ್ ಕಾದಿದ್ದಾರೆ. ಅಂತಹ ಅವಕಾಶ ಸಿಗದ ಭಾರತೀಯ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪರನ್ನು ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತು ಆದರೆ ಇದುವರೆಗೂ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶವನ್ನು ಮಾತ್ರ ನೀಡಿಲ್ಲ.

ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 1000 ರನ್ ಬಾರಿಸಬೇಕೆಂಬ ಕನಸ್ಸನ್ನು ರಾಬಿನ್ ಉತ್ತಪ್ಪ ವ್ಯಕ್ತಪಡಿಸಿದ್ದರು.

ಮನದೀಪ್ ಸಿಂಗ್ ಮತ್ತು ಶ್ರೀವತ್ಸ್ ಗೋಸ್ವಾಮಿ

ಮನದೀಪ್ ಸಿಂಗ್ ಮತ್ತು ಶ್ರೀವತ್ಸ್ ಗೋಸ್ವಾಮಿ

ಪಂಜಾಬ್ ಕಿಂಗ್ಸ್ ತಂಡದ ಮನದೀಪ್ ಸಿಂಗ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಶ್ರೀವತ್ಸ್ ಗೋಸ್ವಾಮಿ ಕೂಡಾ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ನಡೆದಿರುವ ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.

ಸಚಿನ್ ಬೇಬಿ ಮತ್ತು ಗುರ್‌ಕೀರತ್ ಸಿಂಗ್ ಮನ್

ಸಚಿನ್ ಬೇಬಿ ಮತ್ತು ಗುರ್‌ಕೀರತ್ ಸಿಂಗ್ ಮನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಚಿನ್ ಬೇಬಿ ಮತ್ತು ಗುರ್‌ಕೀರತ್ ಸಿಂಗ್ ಮನ್ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಯಾವುದೇ ಪಂದ್ಯದಲ್ಲಿಯೂ ಸಹ ಅವಕಾಶವನ್ನು ಪಡೆದಿಲ್ಲ.

ಕೃಷ್ಣಪ್ಪ ಗೌತಮ್ ಮತ್ತು ಉಮೇಶ್ ಯಾದವ್

ಕೃಷ್ಣಪ್ಪ ಗೌತಮ್ ಮತ್ತು ಉಮೇಶ್ ಯಾದವ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಕೃಷ್ಣಪ್ಪ ಗೌತಮ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಉಮೇಶ್ ಯಾದವ್ ಇದುವರೆಗೂ ಸಹ ಯಾವುದೇ ಪಂದ್ಯದಲ್ಲಿಯೂ ತಮ್ಮ ತಂಡಗಳ ಆಡುವ ಬಳಗವನ್ನು ಸೇರಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿಲ್ಲ.

 ಕುಲ್ ದೀಪ್ ಯಾದವ್ ಮತ್ತು ಆಕಾಶ್ ಸಿಂಗ್

ಕುಲ್ ದೀಪ್ ಯಾದವ್ ಮತ್ತು ಆಕಾಶ್ ಸಿಂಗ್

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕುಲದೀಪ್ ಯಾದವ್ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. ಹಾಗೆಯೇ ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರ ಆಕಾಶ್ ಸಿಂಗ್ ಕೂಡ ಒಂದೇ ಒಂದು ಅವಕಾಶವನ್ನೂ ಪಡೆದುಕೊಂಡಿಲ್ಲ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 7, 2021, 21:41 [IST]
Other articles published on Jun 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X