ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಆಟಗಾರ ಯಾರು ಗೊತ್ತಾ?

Here is the list of players with most not outs in IPL history

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ನಾನು ಕಾಲಿಸ್ ಮತ್ತು ವಾಟ್ಸನ್ ರೀತಿಯ ಆಟಗಾರ : ವಿಜಯ್ ಶಂಕರ್ನಾನು ಕಾಲಿಸ್ ಮತ್ತು ವಾಟ್ಸನ್ ರೀತಿಯ ಆಟಗಾರ : ವಿಜಯ್ ಶಂಕರ್

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಯಶಸ್ಸಿನ ಹಾದಿಗೆ ಮರಳಿದೆ. ಕಳೆದ ಬಾರಿ ನೀಡಿದ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದ ಎಂಎಸ್ ಧೋನಿ ಈ ಬಾರಿ ಎಲ್ಲಾ ತಂಡಗಳಿಗೂ ಮೊದಲೇ ಕಠಿಣ ಅಭ್ಯಾಸವನ್ನು ಆರಂಭಿಸುವುದರ ಮೂಲಕ ಚೆನ್ನೈ ತಂಡವನ್ನು ಮತ್ತೆ ಯಶಸ್ಸಿನ ಹಾದಿಗೆ ಕರೆತಂದಿದ್ದಾರೆ. ಆದರೆ ಪ್ರಸ್ತುತ ಟೂರ್ನಿಯಲ್ಲಿ ಹೆಚ್ಚೇನೂ ಬ್ಯಾಟಿಂಗ್ ಆಡದ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ತಮ್ಮದೇ ಆದ ವಿಶೇಷ ದಾಖಲೆಯೊಂದನ್ನು ಹೊಂದಿದ್ದಾರೆ.

ಪ್ರಸಿದ್ಧ್ ಕೃಷ್ಣ, ಅಮಿತ್ ಮಿಶ್ರಾ ಕೋವಿಡ್-19ನಿಂದ ಚೇತರಿಕೆಪ್ರಸಿದ್ಧ್ ಕೃಷ್ಣ, ಅಮಿತ್ ಮಿಶ್ರಾ ಕೋವಿಡ್-19ನಿಂದ ಚೇತರಿಕೆ

ಹೌದು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಅಜೇಯನಾಗಿ ಉಳಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದೆ. ಒಟ್ಟು 70 ಐಪಿಎಲ್ ಪಂದ್ಯಗಳಲ್ಲಿ ಎಂಎಸ್ ಧೋನಿ ಅಜೇಯನಾಗಿ ಉಳಿದಿದ್ದರೆ, ಧೋನಿಯನ್ನು ಹೊರತುಪಡಿಸಿ ರವೀಂದ್ರ ಜಡೇಜಾ 59 ಪಂದ್ಯಗಳಲ್ಲಿ ಮತ್ತು ಕೀರನ್ ಪೊಲಾರ್ಡ್ 50 ಐಪಿಎಲ್ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.

Story first published: Wednesday, May 19, 2021, 13:49 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X