ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಯಾನ್ ಮಾರ್ಗನ್ ನಿವೃತ್ತಿ: ಇಲ್ಲಿವೆ ಮಾರ್ಗನ್ ಹೆಸರಿನಲ್ಲಿರುವ ಕ್ರಿಕೆಟ್ ದಾಖಲೆಗಳ ಪಟ್ಟಿ

Here is the list of records created by Eoin Morgan in international cricket

ಕಳೆದೆರಡು ದಿನಗಳಿಂದ ಇಂಗ್ಲೆಂಡ್ ಸೀಮಿತ ಓವರ್ ನಾಯಕ ಇಯಾನ್ ಮಾರ್ಗನ್ ನಾಯಕತ್ವ ತ್ಯಜಿಸಲಿದ್ದಾರೆ ಎಂಬ ಸುದ್ದಿ ದೊಡ್ಡಮಟ್ಟದಲ್ಲಿ ಹರಿದಾಡಿತ್ತು. ಅದರಂತೆ ಇಂದು ( ಜೂನ್ 28 ) ಇಯಾನ್ ಮಾರ್ಗನ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್; ವೈರಲ್ ಆದ್ವು ಫೋಟೋಸ್!ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್; ವೈರಲ್ ಆದ್ವು ಫೋಟೋಸ್!

ಇನ್ನು ಇಯಾನ್ ಮಾರ್ಗನ್ ಈ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇತ್ತು. ಆದರೆ, ಇಯಾನ್ ಮಾರ್ಗನ್ ಕಳೆದ ಹಲವು ತಿಂಗಳುಗಳಿಂದ ಆಟಗಾರನಾಗಿ ನೆಲಕಚ್ಚಿದ್ದು ಕಳಪೆ ಫಾರ್ಮ್ ಹೊಂದಿದ್ದಾರೆ. ಹೀಗಾಗಿಯೇ ಇಯಾನ್ ಮಾರ್ಗನ್ ನಿವೃತ್ತಿ ಘೋಷಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ; ನಂ.1 ಯಾರು?ಇಂಗ್ಲೆಂಡ್‌ನಲ್ಲಿ ಅತಿಹೆಚ್ಚು ಏಕದಿನ ರನ್ ಬಾರಿಸಿರುವ ಭಾರತೀಯ ಆಟಗಾರರ ಟಾಪ್ 5 ಪಟ್ಟಿ; ನಂ.1 ಯಾರು?

ಕಳೆದ 2019ರಲ್ಲಿ ತವರಿನಲ್ಲಿ ನಡೆದಿದ್ದ ಐಸಿಸಿ ಏಕದಿನ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಟ್ರೋಫಿ ಎತ್ತಿ ಹಿಡಿದಿದ್ದ ಇಯಾನ್ ಮಾರ್ಗನ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳ ಪಟ್ಟಿ ಮುಂದೆ ಇದೆ ಓದಿ.

ಇಯಾನ್ ಮಾರ್ಗನ್ ಅಂತರರಾಷ್ಟ್ರೀಯ ಕ್ರಿಕೆಟ್ ದಾಖಲೆಗಳು

ಇಯಾನ್ ಮಾರ್ಗನ್ ಅಂತರರಾಷ್ಟ್ರೀಯ ಕ್ರಿಕೆಟ್ ದಾಖಲೆಗಳು

ಇಯಾನ್ ಮಾರ್ಗನ್ ಹೆಸರಿನಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ದಾಖಲೆಗಳ ಪಟ್ಟಿ ಕೆಳಕಂಡಂತಿದೆ.


• ಏಕದಿನ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಇಯಾನ್ ಮಾರ್ಗನ್ ನಿರ್ಮಿಸಿದ್ದಾರೆ. 2019ರ ವಿಶ್ವಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಯಾನ್ ಮಾರ್ಗನ್ 17 ಸಿಕ್ಸರ್ ಚಚ್ಚಿದ್ದರು.


• ಇಯಾನ್ ಮಾರ್ಗನ್ ಒಟ್ಟು 6957 ಏಕದಿನ ರನ್ ಕಲೆಹಾಕಿದ್ದು, ಇಂಗ್ಲೆಂಡ್ ಪರ ಅತಿ ಹೆಚ್ಚು ಏಕದಿನ ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.


• 72 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ನಾಯಕತ್ವವನ್ನು ನಿಭಾಯಿಸಿರುವ ಇಯಾನ್ ಮಾರ್ಗನ್ ಅತಿಹೆಚ್ಚು ಟಿ20 ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ ನಾಯಕ ಎಂಬ ದಾಖಲೆಯನ್ನು ಎಂಎಸ್ ಧೋನಿ ಜೊತೆ ಹಂಚಿಕೊಂಡಿದ್ದಾರೆ. ಎಂಎಸ್ ಧೋನಿ ಕೂಡ 72 ಟಿ 20 ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದಾರೆ.


• ಇಯಾನ್ ಮಾರ್ಗನ್ ನಾಯಕನಾಗಿ ಅತಿ ಹೆಚ್ಚು ಟಿ ಟ್ವೆಂಟಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಮಾರ್ಗನ್ ಒಟ್ಟು 44 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನು ನಾಯಕನಾಗಿ ಗೆಲ್ಲಿಸಿದ್ದಾರೆ.

• ಇಯಾನ್ ಮಾರ್ಗನ್ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 2458 ರನ್ ಬಾರಿಸಿದ್ದು, ಇಂಗ್ಲೆಂಡ್ ಪರ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.


• ಇಂಗ್ಲೆಂಡ್ ಪರ ಅತಿಹೆಚ್ಚು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಟಗಾರ ಎಂಬ ದಾಖಲೆಯನ್ನು ಕೂಡ ಮಾರ್ಗನ್ ನಿರ್ಮಿಸಿದ್ದಾರೆ. ಮಾರ್ಗನ್ ಇಂಗ್ಲೆಂಡ್ ಪರ ಒಟ್ಟು 225 ಏಕದಿನ ಪಂದ್ಯಗಳನ್ನಾಡಿದ್ದಾರೆ.


• ಇಂಗ್ಲೆಂಡ್ ಪರ ಅತಿಹೆಚ್ಚು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಆಟಗಾರ ಎಂಬ ದಾಖಲೆಯನ್ನು ಕೂಡ ಮಾರ್ಗನ್ ನಿರ್ಮಿಸಿದ್ದಾರೆ. ಮಾರ್ಗನ್ ಇಂಗ್ಲೆಂಡ್ ಪರ ಒಟ್ಟು 115 ಟಿ20 ಪಂದ್ಯಗಳನ್ನಾಡಿದ್ದಾರೆ.


• ಇಯಾನ್ ಮಾರ್ಗನ್ ಇಂಗ್ಲೆಂಡ್ ಪರ ಅತಿ ಹೆಚ್ಚು ಏಕದಿನ ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ. ಮಾರ್ಗನ್ ಇಂಗ್ಲೆಂಡ್ ಪರ ಒಟ್ಟು 202 ಏಕದಿನ ಸಿಕ್ಸರ್ ಬಾರಿಸಿದ್ದಾರೆ.


• ಇಯಾನ್ ಮಾರ್ಗನ್ ಇಂಗ್ಲೆಂಡ್ ಪರ ಅತಿ ಹೆಚ್ಚು ಟಿ20 ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಕೂಡ ಹೊಂದಿದ್ದಾರೆ. ಮಾರ್ಗನ್ ಇಂಗ್ಲೆಂಡ್ ಪರ ಒಟ್ಟು 120 ಟಿ 20 ಸಿಕ್ಸರ್ ಬಾರಿಸಿದ್ದಾರೆ.

• ಇಯಾನ್ ಮಾರ್ಗನ್ ಇಂಗ್ಲೆಂಡ್ ಪರ ಅತಿ ಹೆಚ್ಚು ಏಕದಿನ ಅರ್ಧಶತಕಗಳನ್ನು ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಮಾರ್ಗನ್ ಒಟ್ಟು 42 ಏಕದಿನ ಅರ್ಧಶತಕಗಳನ್ನು ಇಂಗ್ಲೆಂಡ್ ಪರ ಬಾರಿಸಿದ್ದಾರೆ.

ಇಯಾನ್ ಮಾರ್ಗನ್ ಏಕದಿನ ಹಾಗೂ ಟಿ20 ಅಂಕಿಅಂಶ

ಇಯಾನ್ ಮಾರ್ಗನ್ ಏಕದಿನ ಹಾಗೂ ಟಿ20 ಅಂಕಿಅಂಶ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎರಡೂ ತಂಡಗಳ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಇಯಾನ್ ಮಾರ್ಗನ್ ಒಟ್ಟು 248 ಏಕದಿನ ಪಂದ್ಯಗಳನ್ನಾಡಿದ್ದು, 7701 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ ಇಯಾನ್ ಮಾರ್ಗನ್ 14 ಶತಕ ಹಾಗೂ 47 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಒಟ್ಟು 115 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಇಯಾನ್ ಮಾರ್ಗನ್ 2458 ರನ್ ಕಲೆಹಾಕಿದ್ದಾರೆ. ಮಾರ್ಗನ್ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 14 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇಯಾನ್ ಮಾರ್ಗನ್ ಟೆಸ್ಟ್ ಅಂಕಿ ಅಂಶ

ಇಯಾನ್ ಮಾರ್ಗನ್ ಟೆಸ್ಟ್ ಅಂಕಿ ಅಂಶ

ಒಟ್ಟು 16 ಟೆಸ್ಟ್ ಪಂದ್ಯಗಳನ್ನಾಡಿರುವ ಇಯಾನ್ ಮಾರ್ಗನ್ 24 ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದು 700 ರನ್ ಕಲೆಹಾಕಿದ್ದಾರೆ. ಮಾರ್ಗನ್ ಟೆಸ್ಟ್ ಕ್ರಿಕೆಟ್‍ನಲ್ಲಿ 2 ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿದ್ದಾರೆ.

Story first published: Wednesday, June 29, 2022, 10:08 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X