ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ 18 ತಿಂಗಳಲ್ಲಿ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಪ್ರದರ್ಶನ ಹೇಗಿದೆ ಗೊತ್ತಾ?!

Here is the picture of the last 18 months Team Indias middle order lineup Performance

ನ್ಯಾಟಿಂಗ್‌ಹ್ಯಾಮ್: ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡ ಅಲ್ಲಿ ಒಟ್ಟು ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ವಿಶೇಷವೆಂದರೆ ಇಂಗ್ಲೆಂಡ್ ನೆಲದಲ್ಲಿ ಭಾರತೀಯ ತಂಡ ಗೆದ್ದು ಬಹಳ ದಿನಗಳಾಗಿವೆ. ದಿನಗಳೇನು ವರ್ಷಗಳೇ ಆಗಿವೆ. ಈ ಬಾರಿ ಭಾರತ ಸರಣಿ ಗೆದ್ದು ದಾಖಲೆ ಬರೆಯಲಿದೆ ಎನಿಸಿದರೂ ತಂಡದ ಪ್ರದರ್ಶನವೇಕೋ ಸಂಪೂರ್ಣ ಒಪ್ಪಿಗೆಯಾಗುವಾಗೆ ಅನ್ನಿಸುತ್ತಿಲ್ಲ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ ಆಡದ ಟೀಮ್ ಇಂಡಿಯಾದ 8 ಸಕ್ರಿಯ ಕ್ರಿಕೆಟರ್‌ಗಳು ಇವರು!ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ ಆಡದ ಟೀಮ್ ಇಂಡಿಯಾದ 8 ಸಕ್ರಿಯ ಕ್ರಿಕೆಟರ್‌ಗಳು ಇವರು!

ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಏನೋ ಸಮಸ್ಯೆ ಇದ್ದಂತಿದೆ. ಯಾಕೆಂದರೆ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರದರ್ಶನ ಚಿಂತೆಗೀಡು ಮಾಡುವಂತಿದೆ. ಭಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಇವರಿಂದಲೇ ಕಡಿಮೆ ರನ್ ಬಂದಿದೆ. ಕೊಹ್ಲಿಯಂತೂ ಡಕ್‌ ಔಟ್ ಆಗಿದ್ದಾರೆ.

ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಡ್ರಾಪ್ ಆಗ್ತಾರಾ?

ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಡ್ರಾಪ್ ಆಗ್ತಾರಾ?

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡದಲ್ಲಿ ಹೆಚ್ಚಾಗಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಬರುತ್ತಿದ್ದಾರೆ. ಆದರೆ ಈ ಮೂರೂ ಜನ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 4, 0, 5 ರನ್ ಬಾರಿಸಿ ನಿರ್ಗಮಿಸಿದದ್ದಾರೆ. ಇದೊಂದೇ ಪಂದ್ಯವೆಂದಲ್ಲ. ಹಿಂದಿನ ಅನೇಕ ಪಂದ್ಯಗಳಲ್ಲೂ ಈ ಮೂವರಿಂದ ಉತ್ತಮ ಅಥವಾ ಗಮನಾರ್ಹ ಪ್ರದರ್ಶನ ಬಂದಿಲ್ಲ. ಮೂರೂ ಆಟಗಾರರು 10ರಷ್ಟು ಪಂದ್ಯಗಳನ್ನಾಡಿದ್ದರೂ ಒಬ್ಬೊಬ್ಬರ ಒಟ್ಟು ರನ್ 550 ರನ್ ದಾಟಿಲ್ಲ. ಮುಖ್ಯವಾಗಿ ರನ್ ಸರಾಸರಿ ಗಮನಿಸಿದರೆ ಚಿಂತಾಜನಕವಾಗಿದೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈ ಬಿಡಬೇಕು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಕೊಹ್ಲಿ ತಂಡದ ನಾಯಕರಾಗಿರುವುದರಿಂದ ಅವರನ್ನು ತಂಡದಿಂದ ಕೈಬಿಡುವಂತೆ ಇಲ್ಲ. ಮುಂದಿನ ದಿನಗಳಲ್ಲಿ ಈ ಅನುಭವಿಗಳನ್ನು ಬದಿಗಿಟ್ಟು ಯುವ ಆಟಗಾರರಿಗೆ ಅವಕಾಶ ನೀಡದರೂ ಅಚ್ಚರಿಯಿಲ್ಲ.

ಕಳೆದ 18 ತಿಂಗಳುಗಳಲ್ಲಿ ಮಧ್ಯಮ ಕ್ರಮಾಂಕದ ಪ್ರದರ್ಶನ

ಕಳೆದ 18 ತಿಂಗಳುಗಳಲ್ಲಿ ಮಧ್ಯಮ ಕ್ರಮಾಂಕದ ಪ್ರದರ್ಶನ

ಕಳೆದ 18 ತಿಂಗಳುಗಳಲ್ಲಿ ಅಂದರೆ 2020ರಿಂದ ಈವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಂಕಿ-ಅಂಶ ತೆಗೆದರೆ, 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ಚೇತೇಶ್ವರ ಪೂಜಾರ 12 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. 531 ಒಟ್ಟು ರನ್ ಗಳಿಸಿದ್ದಾರೆ. 25.28 ರನ್ ಸರಾಸರಿ ಹೊಂದಿದ್ದಾರೆ ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ನಾಯಕ ವಿರಾಟ್ ಕೊಹ್ಲಿ 9 ಟೆಸ್ಟ್ ಪಂದ್ಯಗಳಲ್ಲಿ 345 ರನ್, 23.00 ಸರಾಸರಿ, 3 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ಅಜಿಂಕ್ಯ ರಹಾನೆ 12 ಟೆಸ್ಟ್‌ ಪಂದ್ಯಗಳಲ್ಲಿ 540 ರನ್, 27.00 ಸರಾಸರಿ ಮತ್ತು 1 ಶತಕ 1 ಅರ್ಧ ಶತಕದ ದಾಖಲೆ ಹೊಂದಿದ್ದಾರೆ. ಇಲ್ಲಿ ಈ ಮೂವರ ಸರಾಸರಿ ಗಮನಿಸಿದರೆ ಇವರ್ಯಾರೂ ಕಳೆದ ಕೆಲವಾರು ಪಂದ್ಯಗಳಿಂದ ಅತ್ಯುತ್ತಮ ಅನ್ನುವಂತ ಪ್ರದರ್ಶನವೇನೂ ನೀಡುತ್ತಿಲ್ಲ ಅನ್ನೋದು ನಿಮಗೆ ಅಂದಾಜಾಗುತ್ತದೆ.

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲದೆ ಭಾರತ 14 ವರ್ಷ ಕಳೆದಿದೆ

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲದೆ ಭಾರತ 14 ವರ್ಷ ಕಳೆದಿದೆ

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಆದರೆ ಬ್ಯಾಟ್ಸ್‌ಮನ್‌ಗಳ ಪರದಾಟ ತಂಡವನ್ನು ಚಿಂತೆಗೀಡು ಮಾಡಿದೆ. ಆರಂಭಿಕ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 65.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 183 ರನ್ ಗಳಿಸಿತ್ತು.

ಕೆಎಲ್ ರಾಹುಲ್ ಏಕಾಂಗಿ ಹೋರಾಟ
ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಭಾರತೀಯ ಬ್ಯಾಟ್ಸ್‌ಮನ್‌ಗಳಾದರೂ ಉತ್ತಮ ಪ್ರದರ್ಶನ ನೀಡಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳೂ ಯಾರೂ ಮಿಂಚಲಿಲ್ಲ. ಕ್ರೀಸಿಗಂಟಿನಿಂತು ಗಮನ ಸೆಳೆದವರು ಒಬ್ಬರೇ, ಅದು ಕೆಎಲ್ ರಾಹುಲ್. ರಾಹುಲ್ ಮೊದಲ ಇನ್ನಿಂಗ್ಸ್‌ನಲ್ಲಿ 75+ ರನ್ ಕೊಡುಗೆ ನೀಡಿದ್ದಾರೆ. ಇನ್ನು ರೋಹಿತ್ ಶರ್ಮಾ 36, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 0, ಅಜಿಂಕ್ಯ ರಹಾನೆ 5, ರಿಷಭ್ ಪಂತ್ 25, ರವೀಂದ್ರ ಜಡೇಜಾ 27+ ರನ್ ಬಾರಿಸಿದ್ದರು. 66 ಓವರ್‌ ಮುಕ್ತಾಯದ ವೇಳೆಗೆ ಭಾರತ 5 ವಿಕೆಟ್ ಕಳೆದು 191 ರನ್ ಗಳಿಸಿ 8 ರನ್ ಮುನ್ನಡೆಯಲ್ಲಿತ್ತು.

ಇತ್ತಂಡಗಳ ಪ್ಲೇಯಿಂಗ್ XI
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾವ್ಲಿ, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಜೋಸ್ ಬಟ್ಲರ್ (wk), ಸ್ಯಾಮ್ ಕುರ್ರನ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.
ಬೆಂಚ್: ಮಾರ್ಕ್ ವುಡ್, ಕ್ರೇಗ್ ಓವರ್ಟನ್, ಜ್ಯಾಕ್ ಲೀಚ್, ಡೊಮಿನಿಕ್ ಬೆಸ್, ಒಲ್ಲಿ ಪೋಪ್, ಹಸೀಬ್ ಹಮೀದ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ.
ಬೆಂಚ್: ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಅಕ್ಸರ್ ಪಟೇಲ್, ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಹನುಮ ವಿಹಾರಿ, ಅಭಿಮನ್ಯು ಈಶ್ವರನ್.

Story first published: Friday, August 6, 2021, 19:02 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X