ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬಿಸಿಸಿಐಯಿಂದ ನನಗೆ ಬೆದರಿಕೆ ಬರುತ್ತಿದೆ': ದೂರಿತ್ತ ಹರ್ಷೆಲ್ ಗಿಬ್ಸ್

Herschelle Gibbs says BCCI Threatening Him Over Kashmir Premier League

ನವದೆಹಲಿ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ದಂತಕತೆ ಹರ್ಷೆಲ್ ಗಿಬ್ಸ್ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿರುದ್ಧ ಒಂದು ಗಂಭೀರ ಆರೋಪ ಹೊರಿಸಿದ್ದಾರೆ. ಕಾಶ್ಮೀರ್ ಪ್ರೀಮಿಯರ್ ಲೀಗ್ (ಕೆಪಿಎಲ್‌) ನಿಂದ ದೂರ ಉಳಿಯುವಂತೆ ಬಿಸಿಸಿಐ ತನಗೆ ಬೆದರಿಕೆಯೊಡ್ಡುತ್ತಿದೆ. ಕೆಪಿಎಲ್‌ನಿಂದ ನಾನು ದೂರ ಉಳಿಯಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದೆ ಎಂದು ಹರ್ಷೆಲ್ ಗಿಬ್ಸ್ ಭಾರತೀಯ ಕ್ರಿಕೆಟ್ ಬೋರ್ಡ್ ವಿರುದ್ಧ ಆರೋಪ ಹೊರಿಸಿದ್ದಾರೆ.

ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!

ಟ್ವೀಟ್ ಮಾಡಿರುವ ಹರ್ಷೆಲ್ ಗಿಬ್ಸ್ ಆ ಮೂಲಕ ಬಿಸಿಸಿಐ ವಿರುದ್ಧ ತನ್ನ ಅಸಮಾಧಾನ ಹೊರ ಹಾಕಿದ್ದಾರೆ. ಪಾಕಿಸ್ತಾನ ವಿಚಾರ ಮುಂದಿಟ್ಟುಕೊಂಡು ಬಿಸಿಸಿಐ ಸಂಪೂರ್ಣ ಅನಗತ್ಯವಾಗಿ ತನ್ನ ರಾಜಕೀಯ ಅಂಜೆಂಡಾವನ್ನು ಕಾಶ್ಮೀರ್ ಪ್ರೀಮಿಯರ್ ಲೀಗ್‌ ನಲ್ಲಿ ತುರುಕಿಸುತ್ತಿದೆ. ತನಗೆ ಭೀತಿಯೂ ಒಡ್ಡುತ್ತಿದೆ ಎಂದು ಗಿಬ್ಸ್ ದೂರಿದ್ದಾರೆ.

ಏನಿದೆ ಗಿಬ್ಸ್ ಟ್ವೀಟ್‌ನಲ್ಲಿ?

'ಅನಗತ್ಯವಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಲ್ಲೂ ಪಾಕಿಸ್ತಾನದ ಬಗೆಗಿನ ತನ್ನ ರಾಜಕೀಯ ಅಜೆಂಡಾವನ್ನು ಕಾಶ್ಮೀರ್ ಪ್ರೀಮಿಯರ್ ಲೀಗ್‌ನಲ್ಲಿ ತರುತ್ತಿದೆ. ಕೆಪಿಎಲ್‌ನಲ್ಲಿ ನಾನು ಪಾಲ್ಗೊಳ್ಳದಂತೆ ತಡೆಯುತ್ತಿದೆ. ಅಷ್ಟೇ ಅಲ್ಲ, ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ವಿಚಾರಕ್ಕೂ ನಾನು ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧಿಸುವುದಾಗಿ ಬಿಸಿಸಿಐ ತನಗೆ ಬೆದರಿಕೆ ಕೂಡ ಒಡ್ಡುತ್ತಿದೆ' ಎಂದು ಗಿಬ್ಸ್ ಮಾಡಿರುವ ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಜುಲೈ 31ರಂದು ಗಿಬ್ಸ್ ಈ ಟ್ವೀಟ್ ಮಾಡಿದ್ದಾರೆ.

ರಶೀದ್ ಲತೀಫ್ ಕೂಡ ದೂರು

ರಶೀದ್ ಲತೀಫ್ ಕೂಡ ದೂರು

ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟರ್ ರಶೀದ್ ಲತೀಶ್ ಕೂಡ ಇದೇ ರೀತಿಯ ಆರೋಪ ಮಾಡಿದ್ದರು. 'ಯಾವುದೇ ಕ್ರಿಕೆಟ್ ಬೋರ್ಡ್‌ಗಳು ತನ್ನ ಮಾಜಿ ಆಟಗಾರರು ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರೆ ಅವರಿಗೆ ಭಾರತದಲ್ಲಿ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಅಥವಾ ಯಾವುದೇ ಮಟ್ಟದಲ್ಲಿ ಅಥವಾ ಯಾವುದೇ ಸಾಮರ್ಥ್ಯದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ಹರ್ಷೆಲ್ ಗಿಬ್ಸ್, ತಿಲಕರತ್ನೆ ದಿಲ್ಶನ್, ಮಾಂಟಿ ಪನೇಸರ್ ಮತ್ತು ಇನ್ನೂ ಹಲವಾರು ಆಟಗಾರರು ಕೆಪಿಎಲ್‌ಗೆ ಆಯ್ಕೆಯಾಗಿದ್ದಾರೆ' ಎಂದು ಲತೀಫ್‌ ಕೂಡ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಆರು ತಂಡಗಳ ಟೂರ್ನಿ ಕೆಪಿಎಲ್

ಆರು ತಂಡಗಳ ಟೂರ್ನಿ ಕೆಪಿಎಲ್

ಕಾಶ್ಮೀರ್ ಪ್ರೀಮಿಯರ್ ಲೀಗ್ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿದ್ದು ಇದನ್ನು ಪಾಕಿಸ್ತಾನದ ರಾಜಕಾರಣಿ ಶೆಹರ್ಯಾರ್ ಖಾನ್ ಅಫ್ರಿದಿ ಶುರು ಮಾಡಿದ್ದರು. ಈ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತವೆ. ಅವುಗಳೆಂದರೆ ಓವರ್‌ಸೀಸ್ ವಾರಿಯರ್ಸ್, ಮುಜಾಫರಾಬಾದ್ ಟೈಗರ್ಸ್, ರಾವಲಕೋಟ್ ಹಾಕ್ಸ್, ಬಾಗ್ ಸ್ಟಾಲಿಯನ್ಸ್, ಮಿರ್ಪುರ್ ರಾಯಲ್ಸ್ ಮತ್ತು ಕೊಟ್ಲಿ ಲಯನ್ಸ್. ಇಮಾದ್ ವಾಸಿಂ, ಪಾಕ್ ಪಾಕಿಸ್ತಾನ ಕ್ರಿಕೆಟ್ ತಂಡ ಅನುಭವಿ ಆಟಗಾರರಾದ ಮೊಹಮ್ಮದ್ ಹಫೀಜ್, ಶಾಹಿದ್ ಅಫ್ರಿದಿ, ಶದಬ್ ಖಾನ್, ಶೋಯೆಬ್ ಮಲಿಕ್ ಮತ್ತು ಕಮ್ರನ್ ಅಕ್ಮಲ್ ಈ ಆರು ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ.

ನೀವು ಏನ್ ಮಾಡಿದ್ರೂ ಅಷ್ಟೆ ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ | Oneindia Kannada
ಆಟದಲ್ಲಿ ರಾಜಕೀಯ ಬೇಕಾ?

ಆಟದಲ್ಲಿ ರಾಜಕೀಯ ಬೇಕಾ?

ನಿಜವಾದ ಕ್ರೀಡಾಪಟು ಅಥವಾ ಕ್ರೀಡಾ ಪ್ರೇಮಿ ಯಾವತ್ತಿಗೂ ಕ್ರೀಡೆಯಲ್ಲಿ ರಾಜಕೀಯ ಅಡ್ಡಗಾಲು ಹಾಕೋದನ್ನು ಇಷ್ಟಪಡೋದಿಲ್ಲ. ರಾಜಕೀಯ ವಿಚಾರಕ್ಕೂ ಕ್ರೀಡೆಗೂ ಸಂಬಂಧವಿಲ್ಲ. ಕ್ರಿಕೆಟ್ ಅಥವಾ ಕ್ರೀಡೆ ಅನ್ನೋದು ದ್ವೇಶ, ಗಡಿ ಬೇಧ, ತಾರತಮ್ಯ, ಅಹಂಕಾರ, ಕೋಮುವಾದ ಎಲ್ಲವನ್ನೂ ಬಡಿಗಿಟ್ಟು ಜೊತೆಯಾಗಿ ಆಡಿ ಸಂಭ್ರಮಿಸಲು ಇರುವ ಒಂದು ಚಂದದ ನೆಪ. ಕ್ರೀಡೆಯಲ್ಲಿ ಖಂಡಿತಾ ರಾಜಕೀಯ ಬೇಡ. ರಾಜಕೀಯ ಮನಸ್ತಾಪ ಏನಿದ್ದರೂ ರಾಜಕೀಯವಾಗೇ ಬಗೆಹರಿಯಲಿ ಹೊರತು ಕ್ರೀಡೆಗೆ ಅಡ್ಡಿಪಡಿಸೋದು ಸರಿಯಲ್ಲ ಎಂದು ಬಹುತೇಕ ಕ್ರೀಡಾಪ್ರೇಮಿಗಳು ಅಭಿಪ್ರಾಯಿಸುತ್ತಿದ್ದಾರೆ. ಇನ್ನು ಕೆಲವರು ಗಿಬ್ಸ್ ಅವರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

Story first published: Saturday, July 31, 2021, 20:43 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X