ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರು(ODI)

Shikhar Dhawan

ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇಂಗ್ಲೆಂಡ್‌ನಲ್ಲಿ ಟಿ20 ಹಾಗೂ ಏಕದಿನ ಸರಣಿಯನ್ನ ಗೆದ್ದ ಭಾರತ, ಕೆರಿಬಿಯನ್ ನಾಡಲ್ಲೂ ಗೆಲುವಿನ ಓಟ ಮುಂದುವರಿಸಿದೆ. ಮೂರನೇ ಏಕದಿನ ಪಂದ್ಯಕ್ಕೂ ಮೊದಲೇ ಸರಣಿಯನ್ನ ಗೆಲುವು ಸಾಧಿಸಿದೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶಿಖರ್ ಧವನ್ ಐಸಿಸಿ ರ್ಯಾಂಕಿಂಗ್‌ನಲ್ಲೂ ಏರಿಕೆ ಕಂಡಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲೂ ಅರ್ಧಶತಕದ ಗಡಿದಾಟಿದ ಧವನ್ ತಮ್ಮ ಕೆರಿಯರ್‌ನ 37ನೇ ಅರ್ಧಶತಕ ದಾಖಲಿಸಿದ್ರು. ಅಲ್ಲದೆ ಏಕದಿನ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನವನ್ನು ತಲುಪಿದ್ದಾರೆ.

ನಾಯಕತ್ವದ ಜವಾಬ್ದಾರಿ ಜೊತೆಗೆ ಶಿಖರ್ ಧವನ್ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಈ ಮೂಲಕ ವಿಶೇಷ ದಾಖಲೆ ಪಟ್ಟಿಗೆ ಗಬ್ಬರ್ ಸೇರ್ಪಡೆಯಾಗಿದ್ದಾರೆ. ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಭಾರತೀಯ ನಾಯಕರ ಸಾಲಿನಲ್ಲಿ ಶಿಖರ್ ಸ್ಥಾನ ಪಡೆದಿದ್ದು, ಲೆಜೆಂಡ್ ಮಹೇಂದ್ರ ಸಿಂಗ್ ಧೋನಿಯನ್ನೇ ಹಿಂದಿಕ್ಕಿದ್ದಾರೆ. ಹಾಗಿದ್ರೆ ಯಾವ ಟೀಂ ಇಂಡಿಯಾ ನಾಯಕರು ಏಕದಿನ ಕ್ರಿಕೆಟ್‌ನಲ್ಲಿ ಎಷ್ಟು ಬ್ಯಾಟಿಂಗ್ ಸರಾಸರಿ ಹೊಂದಿದ್ದರು ಎಂಬುದನ್ನ ಈ ಕೆಳಗೆ ಕಾಣಬಹುದು.

ಎಂ.ಎಸ್ ಧೋನಿ

ಎಂ.ಎಸ್ ಧೋನಿ

ಟೀಂ ಇಂಡಿಯಾ ನಾಯಕನಾಗಿ ಯಾರೂ ಮಾಡದ ಸಾಧನೆಯನ್ನ ಮಹೇಂದ್ರ ಸಿಂಗ್ ಧೋನಿ ಮಾಡಿದ್ದಾರೆ. ವಿಶ್ವದ ಯಾವೊಬ್ಬ ನಾಯಕ ಗೆಲ್ಲದ ಮೂರು ಐಸಿಸಿ ಟ್ರೋಫಿಗಳ ಸರದಾರ ಈತ. ಮಾಹಿ ನಾಯಕತ್ವದಲ್ಲಿ ಟೀಂ ಇಂಡಿಯಾ ಬಹು ಯಶಸ್ವಿ ತಂಡವಾಗಿ ಹೊರಹೊಮ್ಮಿತು. ನಾಯಕನಾಗಿ ಬ್ಯಾಟಿಂಗ್‌ನಲ್ಲೂ ಧೋನಿ ಹಿಂದೆ ಬಿದ್ದಿರಲಿಲ್ಲ.

ಧೋನಿ ನಾಯಕನಾಗಿ 53.55 ಸರಾಸರಿಯಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 10,773 ರನ್ ದಾಖಲಿಸಿರುವ ಧೋನಿ ನಾಯಕನಾಗಿ ಬಹುಮಟ್ಟಿನ ಯಶಸ್ಸು ಕಂಡಿದ್ದಾರೆ. ಇವರ ಹೆಸರಿನಲ್ಲಿ 10 ಶತಕ ಮತ್ತು 73 ಅರ್ಧಶತಕ ಒಳಗೊಂಡಿವೆ.

ಶಿಖರ್ ಧವನ್

ಶಿಖರ್ ಧವನ್

ಕೆರಿಬಿಯನ್ ಅಂಗಳದಲ್ಲಿ ನಾಯಕತ್ವದ ಜೊತೆಗೆ ಬೊಂಬಾಟ್ ಬ್ಯಾಟಿಂಗ್ ಮಾಡುತ್ತಿರುವ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದರೆ. ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಮೂರು ರನ್‌ಗಳಲ್ಲಿ ಶತಕವಂಚಿತ ಧವನ್ 97ರನ್‌ಗಳಿಸಿ ಔಟಾದ್ರೆ, ಮೂರನೇ ಏಕದಿನ ಪಂದ್ಯದಲ್ಲಿ 74 ಎಸೆತಗಳಲ್ಲಿ 58 ರನ್ ದಾಖಲಿಸಿದ್ರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು.

ಶಿಖರ್ ಧವನ್ ಏಕದಿನ ಫಾರ್ಮೆಟ್‌ನಲ್ಲಿ ಇದುವರೆಗೂ 155 ಪಂದ್ಯಗಳನ್ನಾಡಿದ್ದು, 6493 ರನ್ ಗಳಿಸಿದ್ದಾರೆ. 17 ಶತಕ ಮತ್ತು 37 ಅರ್ಧಶತಕ ಇವರ ಹೆಸರಿನಲ್ಲಿದೆ. ನಾಯಕನಾಗಿ ಶಿಖರ್ ಧವನ್ 59.20* ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಗಬ್ಬರ್ ಅಬ್ಬರ: ಐಸಿಸಿ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಏರಿಕೆ, ಕೊಹ್ಲಿ ಹಾಗೂ ರೋಹಿತ್ ಸ್ಥಾನ ಕುಸಿತ

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಕೆಲವೇ ತಿಂಗಳ ಹಿಂದೆ ಟೀಂ ಇಂಡಿಯಾ ಎಲ್ಲಾ ಮಾದರಿಯ ಫುಲ್ ಟೈಂ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ ನಾಯಕನಾಗಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ರೋಹಿತ್ ನಾಯಕನಾಗಿ 59.50ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, ಇದುವರೆಗೆ 233 ಏಕದಿನ ಪಂದ್ಯಗಳನ್ನಾಡಿದ್ದಾರೆ. 9376 ರನ್ ಕಲೆಹಾಕಿರುವ ರೋಹಿತ್ 29 ಶತಕ 3 ದ್ವಿಶತಕ ಹಾಗೂ 45 ಅರ್ಧಶತಕಗಳ ಸರದಾರನಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಯಾರು ಹತ್ತಿರಕ್ಕೂ ಸುಳಿಯದಷ್ಟು ವೈಯಕ್ತಿಕ ಗರಿಷ್ಠ 264ರನ್‌ ಇವರ ಮಹೋನ್ನತ ಸಾಧನೆಯಾಗಿದೆ.

ವರ್ಷಕ್ಕೆ ಎರಡು ಐಪಿಎಲ್ ಪಂದ್ಯಾವಳಿಗಳನ್ನು ಆಯೋಜಿಸಿ; ಟೀಂ ಇಂಡಿಯಾ ಮಾಜಿ ಕೋಚ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಫಾರ್ಮ್‌ನಲ್ಲಿ ಇಲ್ಲದೇ ಇರಬಹುದು. ಆದ್ರೆ ಮೂರು ಫಾರ್ಮೆಟ್‌ನಲ್ಲಿ ವಿರಾಟ್ ಕೊಹ್ಲಿ ನಂಬರ್ ಒನ್ ಬ್ಯಾಟರ್ ಅನ್ನೋದನ್ನ ಅಲ್ಲಗೆಳೆಯುವಂತಿಲ್ಲ. ಸಹಸ್ರಾರು ದಾಖಲೆಗಳ ಒಡೆಯನಾದ ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದ ಏಕೈಕ ಪ್ಲೇಯರ್ ಆಗಿದ್ದರು.

ಇನ್ನು ನಾಯಕನಾಗಿಯು ವಿರಾಟ್ ಸಾಧನೆ ಅದ್ಭುತವಾಗಿದೆ. ಜೊತೆಗೆ ನಾಯಕನಾಗಿ 72.65 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ. ಇದುವರೆಗೆ 262 ಏಕದಿನ ಪಂದ್ಯವನ್ನಾಡಿರುವ ವಿರಾಟ್ 12334 ರನ್‌ ಕಲೆಹಾಕಿದ್ದು 43 ಶತಕ ಮತ್ತು 64 ಅರ್ಧಶತಕಗಳ ಸರದಾರನಾಗಿದ್ದಾನೆ.

ಗೌತಮ್ ಗಂಭೀರ್

ಗೌತಮ್ ಗಂಭೀರ್

ಟೀಂ ಇಂಡಿಯಾದ ಫುಲ್ ಟೈಂ ಕ್ಯಾಪ್ಟನ್ ಆಗದಿದ್ರೂ, ಅವಕಾಶ ಸಿಕ್ಕಾಗಲೆಲ್ಲಾ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಕೀರ್ತಿ ಗೌತಮ್ ಗಂಭೀರ್‌ಗಿದೆ. ಏಕದಿನ ಫಾರ್ಮೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕ ಇವರಾಗಿದ್ದಾರೆ. ಬರೋಬ್ಬರಿ 90.00ರ ಸರಾಸರಿ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಗಂಭೀರ್ ನಾಯಕನಾಗಿ ಅವಕಾಶ ಸಿಕ್ಕಾಗಲೆಲ್ಲಾ ಬೊಂಬಾಟ್ ಆಟವಾಡಿದ್ದಾರೆ.

147 ಏಕದಿನ ಪಂದ್ಯಗಳನ್ನಾಡಿರುವ ಗೌತಿ 5238 ರನ್ ಕಲೆಹಾಕಿದ್ದು, 11 ಶತಕ ಮತ್ತು 34 ಅರ್ಧಶತಕ ದಾಖಲಿಸಿದ್ದಾರೆ. ಜೊತೆಗೆ 85.25ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವುದು ವಿಶೇಷ.

Story first published: Wednesday, July 27, 2022, 23:10 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X