ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್

His action attract injuries : Kapil Dev on Jasprit Bumrah
‘His action attracts injuries’ - Kapil Dev speaks about Jasprit Bumrah

ನವದೆಹಲಿ, ನವೆಂಬರ್ 28: ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಜಸ್‌ಪ್ರೀತ್ ಬೂಮ್ರಾ ಯಶಸ್ವಿ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಬೌಲಿಂಗ್ ಮಾಡುವ ಬೂಮ್ರಾ ಅವರನ್ನು ಎದುರಿಸೋದು ಬ್ಯಾಟ್ಸ್‌ಮನ್‌ಗಳಿಗೆ ಸುಲಭವಿಲ್ಲ. ಆದರೆ ಅವರ ಬೌಲಿಂಗ್ ಆ್ಯಕ್ಷನ್ ಬೇಗನೆ ಗಾಯಗಳನ್ನು ಆಕರ್ಷಿಸುತ್ತೆ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !ಸೌರವ್ ಗಂಗೂಲಿ ಜೊತೆಗೆ ಕೊಹ್ಲಿಗೂ ಜೈ ಎಂದ ಗೌತಮ್ ಗಂಭೀರ್ !

ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳ ಕೌಶಲಗಳು ಹೇಗೆ ಅವರ ವೃತ್ತಿ ಬದುಕಿನಲ್ಲಿ ಗಣನೀಯ ಪತ್ರ ವಹಿಸುತ್ತದೆ ಎಂದು ವಿವರಿಸಿ ಸ್ಪೋರ್ಟ್ಸ್‌ಸ್ಟಾರ್ ಜೊತೆ ಮಾತನಾಡಿದ ಕಪಿಲ್ ದೇವ್, ವೇಗಿ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಶೈಲಿ ಮತ್ತು ಅದರಿಂದ ಗಾಯಕ್ಕೀಡಾಗುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ.

ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ-ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿಸುದ್ದಿ!ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ-ಸಿಎಸ್‌ಕೆ ಅಭಿಮಾನಿಗಳಿಗೆ ಸಿಹಿಸುದ್ದಿ!

'ವಿಶಾನ್ ಬೇಡಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಆತನೊಬ್ಬ ಬಾಡಿ ಬೌಲರ್ ಹೊರತು ಹೆಚ್ಚಿನ ಸ್ಪಿನ್ನರ್ ಅಥವಾ ರಿಸ್ಟ್ ಸ್ಪಿನ್ನರ್‌ಗಳಂತೆ ಆರ್ಮ್ ಬೌಲರ್ ಅಲ್ಲ. ಆತ ತನ್ನ ದೇಹದ ಸಹಾಯದಿಂದ ಬೌಲಿಂಗ್ ಮಾಡುತ್ತಿದ್ದರಿಂದ ಆತ ತಾಂತ್ರಿಕವಾಗಿ ಬೆಸ್ಟ್ ಬೌಲರ್,' ಎಂದು ದೇವ್ ಹೇಳಿದರು.

ಕ್ರಿಕೆಟ್ ಲೋಕದ ಕರಾಳ ದಿನಕ್ಕೆ ಐದು ವರ್ಷಕ್ರಿಕೆಟ್ ಲೋಕದ ಕರಾಳ ದಿನಕ್ಕೆ ಐದು ವರ್ಷ

'ಇನ್ನು ಬ್ಯಾಟ್ಸ್‌ಮನ್ ಆಗಿ (ಸುನಿಲ್) ಗವಾಸ್ಕರ್‌ನನ್ನು ನೋಡಿ. 70ರ ಹರೆಯದವರಾಗಿದ್ದರೂ ಈಗಲೂ ಅವರು ಕೌಶಲ ಬಳಸಿ ಆಡಬಲ್ಲರು. ಆದರೆ ಬ್ಯಾಟ್ಸ್‌ಮನ್ ಒಬ್ಬ 'ಐ ಪ್ಲೇಯರ್' ಆಗಿದ್ದರೆ ಇನ್ನೂ ನೋಡಲು ಚಂದ. ವೀರೇಂದ್ರ ಸೆಹ್ವಾಗ್, ಜಿಆರ್ ವಿಶ್ವನಾಥ್, ಸಚಿನ್ ತೆಂಡೂಲ್ಕರ್ ಇವರೆಲ್ಲ ಆ ಸಾಲಿನ ಬ್ಯಾಟ್ಸ್‌ಮನ್‌ಗಳು,' ಎಂದು ಕಪಿಲ್ ವಿವರಿಸಿದರು.

ಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ಸಮನ್ಸ್‌ ನೀಡಲು ಮುಂದಾದ ಸಿಸಿಬಿ

ಮಾತು ಮುಂದುವರೆಸಿದ ದೇವ್, 'ನಿಮ್ಮ ಬೌಲಿಂಗ್ ಆ್ಯಕ್ಷನ್ ತಾಂತ್ರಿಕ ರೀತಿಯಲ್ಲಿದ್ದರೆ ಹೆಚ್ಚಿನ ಪ್ರಭಾವ ಬೀರಲಿದೆ. ಬೂಮ್ರಾಗೆ ಏನಾಗಿದೆ ನೋಡಿ, ಆತನ ಆ್ಯಕ್ಷನ್ ಗಾಯಗಳನ್ನು ಬೇಗನೆ ಆಕರ್ಷಿಸುತ್ತದೆ. ಆತ ತನ್ನ ಕೈಯನ್ನು ದೇಹಕ್ಕಿಂತಲೂ ಹೆಚ್ಚಾಗಿ ಬಳಸುತ್ತಾನೆ. ಇದು ಸಮಸ್ಯೆಯಾಗಲಿದೆ. ದೇಹವನ್ನು ಬಳಸುವ ಭುವನೇಶ್ವರ್ ಕುಮಾರ್‌ನಂತ ಬೌಲರ್‌ ಹೆಚ್ಚು ಕಾಲ ಉಳಿಯುತ್ತಾರೆ,' ಎಂದರು.

Story first published: Thursday, November 28, 2019, 16:21 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X