ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಲಾರ್ಡ್ಸ್'ನಲ್ಲಿನ ಭಾರತ v ಇಂಗ್ಲೆಂಡ್ ಕುತೂಹಲಕಾರಿ ಹೆಜ್ಜೆ ಗುರುತುಗಳು!

History against Virat Kohli and co. at Lord’s

ಲಂಡನ್, ಆಗಸ್ಟ್ 9: ಇಂಗ್ಲೆಂಡ್ ಎದುರು ಭಾರತ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ದ್ವಿತೀಯ ಟೆಸ್ಟ್ ಸವಾಲು ಸ್ವೀಕರಿಸುವುದರಲ್ಲಿದೆ. ಭಾರತ ಮತ್ತು ಇಂಗ್ಲೆಂಡ್ ಎರಡಕ್ಕೂ ಇದು ಪ್ರತಿಷ್ಠೆಯ ಪಂದ್ಯ. ಯಾಕೆಂದರೆ ಲಾರ್ಡ್ಸ್ ಮೈದಾನ ಭಾರತ v ಇಂಗ್ಲೆಂಡ್ ಮುಖಾಮುಖಿಯ ರೋಚಕ ಕ್ಷಣಗಳನ್ನು ತನ್ನೊಳಗೆ ಅವಿತಿಟ್ಟುಕೊಂಡಿದೆ.

ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ 'ವೇಷಭೂಷಣ' ಚಾಲೆಂಜ್!ಟೀಂ ಇಂಡಿಯಾ ನಾಯಕ ಕೊಹ್ಲಿಯಿಂದ 'ವೇಷಭೂಷಣ' ಚಾಲೆಂಜ್!

ಕಪಿಲ್ ದೇವ್ ಸಾರಥ್ಯದಲ್ಲಿ ಭಾರತ ವಿಶ್ವಕಪ್ ಜಯಿಸಿದ ಹೆಮ್ಮೆಯಿಂದ ಹಿಡಿದು ಕಡೆಯ ಬಾರಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಟೆಸ್ಟ್ ಸರಣಿ ಸೋತಲ್ಲಿಯವರೆಗಿನ ಅನೇಕ ಕುತೂಹಲಕಾರಿ ದಾಖಲೆಗಳು ಲಾರ್ಡ್ಸ್ ಸ್ಟೇಡಿಯಂ ಬಗಲಲ್ಲಿದೆ. ಮೊದಲ ಟೆಸ್ಟ್ ಪಂದ್ಯ ಸೋತು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಹಿನ್ನಡೆಯಲ್ಲಿರುವ ಕೊಹ್ಲಿ ಬಳಗ ದ್ವಿತೀಯ ಟೆಸ್ಟ್ ನಲ್ಲಿ ಗೆದ್ದರೆ (ಯಾ ಸೋತರೆ) ಮತ್ತೆ ದಾಖಲೆ ಸೃಷ್ಟಿಯಾಗಲಿದೆ.

ಭಾರತ ತಂಡ ಇಂಗ್ಲೆಂಡ್ ಎದುರು ಲಾರ್ಡ್ಸ್ ನಲ್ಲಿ ಈವರೆಗೆ ಒಟ್ಟು 17 ಸಾರಿ ಟೆಸ್ಟ್ ಸವಾಲು ಸ್ವೀಕರಿಸಿದೆ. ಅದರಲ್ಲಿ ಗೆದ್ದಿದ್ದು ಬರೀ ಎರಡು ಬಾರಿ ಮಾತ್ರ. ಕಪಿಲ್ ದೇವ್ ದಿನಗಳಿಂದ ಕೊಹ್ಲಿಯ ದಿನಗಳವರೆಗೆ ಲಾರ್ಡ್ಸ್ ನಲ್ಲಿ ಭಾರತದ ಏಳು-ಬೀಳುಗಳೆಡೆಗೊಂಡು ಪುಟಾಣಿ ರೌಂಡು ಹೊಡೆಯೋಣ ಬನ್ನಿ..

ಕಪಿಲ್ ಬಳಗಕ್ಕೆ ವಿಶ್ವಕಪ್ ಹಿರಿಮೆ

ಕಪಿಲ್ ಬಳಗಕ್ಕೆ ವಿಶ್ವಕಪ್ ಹಿರಿಮೆ

ಬೌಲಿಂಗ್ ಗೆ ಪೂರಕವಾಗಿರುವ ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ಗೆಲ್ಲೋದಂದ್ರೆ ಅದೊಂಥರಾ ಹಿರಿಮೆಯೇ ಸರಿ. ಇದೇ ನೆಲದಲ್ಲಿ ಭಾರತ ವಿಶ್ವಕಪ್ ಗೆದ್ದಿರುವ ಹೆಜ್ಜೆ ಗುರುತಿದೆ. 1983ರ ಜೂನ್ 25ರಂದು ಭಾರತ ಲಾರ್ಡ್ಸ್ ಸ್ಟೇಡಿಯಂನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಜಯಿಸಿತ್ತು.

ಮೊದಲ ಟೆಸ್ಟ್ ನಲ್ಲಿ ಸೋಲು

ಮೊದಲ ಟೆಸ್ಟ್ ನಲ್ಲಿ ಸೋಲು

1932ರಂದು ಭಾರತ ಇಂಗ್ಲೆಂಡ್ ಎದುರು ಮೊದಲ ಬಾರಿಗೆ ನಾಟ್ವರ್ಸಿಂಹಜಿ ಭಾವ್ಸಿಂಜಿ ನಾಯಕತ್ವದಲ್ಲಿ ಲಾರ್ಡ್ಸ್ ನಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಎದುರು 158 ರನ್ ಗಳಿಂದ ಶರಣಾಗಿತ್ತು. ಅದಾಗಿ 1936, 1946, 1952, 1959, 1967, 1974, 1982ರ ವರೆಗೂ ಭಾರತ ಸಾಲು ಸಾಲಾಗಿ ಸೋತಿತ್ತು. ಈ ಮಧ್ಯೆ ಎರಡು ಪಂದ್ಯಗಳು (1971, 1979) ಡ್ರಾಗೊಂಡಿದ್ದವು.

ಲಾರ್ಡ್ಸ್ ನಲ್ಲಿ ಮೊದಲ ಗೆಲುವು

ಲಾರ್ಡ್ಸ್ ನಲ್ಲಿ ಮೊದಲ ಗೆಲುವು

ಲಾರ್ಡ್ಸ್ ನಲ್ಲಿ ಭಾರತ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಗೆದ್ದಿದ್ದು 1986ರಲ್ಲಿ. ಅದೂ ಕಪಿಲ್ ಬಳಗದಲ್ಲೇ ಅನ್ನೋದು ವಿಶೇಷ. 1986ರ ಜೂನ್ 5ರಿಂದ 10ರವರೆಗೆ ನಡೆದಿದ್ದ ಪಂದ್ಯದಲ್ಲಿ ಭಾರತ ಆಂಗ್ಲರೆದುರು 5 ವಿಕೆಟ್ ಗೆಲುವು ಸಾಧಿಸಿತ್ತು.

2014ರಲ್ಲಿ ಮತ್ತೆ ಜಯ

2014ರಲ್ಲಿ ಮತ್ತೆ ಜಯ

1986ರಲ್ಲಿ ಪಂದ್ಯ ಗೆದ್ದ 28 ವರ್ಷಗಳ ಬಳಿಕ (ಐದು ಟೆಸ್ಟ್ ಗಳಲ್ಲಿ 3 ಸೋಲು, 2 ಡ್ರಾ) ಅಂದರೆ 2014ರಲ್ಲಿ ಭಾರತ ಲಾರ್ಡ್ಸ್ ನಲ್ಲಿ ಎರಡನೇ ಬಾರಿಗೆ ಟೆಸ್ಟ್ ಪಂದ್ಯ ಗೆದ್ದಿತ್ತು. ಧೋನಿ ನಾಯಕತ್ವದ ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಉತ್ತಮ ಆಟವಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ವೆಂಗ್ ಸರ್ಕಾರ್ ಬರೋಬ್ಬರಿ ಮೂರು ಶತಕ

ವೆಂಗ್ ಸರ್ಕಾರ್ ಬರೋಬ್ಬರಿ ಮೂರು ಶತಕ

ಲಾರ್ಡ್ಸ್ ನಲ್ಲಿ ಶತಕ ಸಿಡಿಸಿದರೆ ಹೊಸ ದಾಖಲೆ ಬರೆದಂತೆ. ಕ್ರಿಕೆಟ್ ಕಾಶಿ ಖ್ಯಾತಿಯ ಈ ಮೈದಾನದಲ್ಲಿ ಈವರೆಗೆ ಭಾರತದ 9 ಮಂದಿಯಿಂದ 11 ಶತಕಗಳು ದಾಖಲಾಗಿವೆ. ಭಾರತದ ದಿಲೀಪ್ ವೆಂಗ್ ಸರ್ಕಾರ್ ಬರೋಬ್ಬರಿ 3 ಶತಕ (103, 157, ಅಜೇಯ 126) ಗಳನ್ನು ಸಿಡಿಸಿದ್ದಾರೆ.

ಸಚಿನ್ ಗೆ ಶತಕ ನೀಡದ ಮೈದಾನ!

ಸಚಿನ್ ಗೆ ಶತಕ ನೀಡದ ಮೈದಾನ!

ವೆಂಗ್ ಸರ್ಕಾರ್ ಬಿಟ್ಟರೆ ವಿನೂ ಮಂಕದ್ (184- ಭಾರತ ಪರ ಅತ್ಯಧಿಕ ರನ್), ಗುಂಡಪ್ಪ ವಿಶ್ವನಾಥ್ (113), ರವಿ ಶಾಸ್ತ್ರಿ (100), ಮೊಹಮ್ಮದ್ ಅಜರುದ್ದೀನ್ (121), ಸೌರವ್ ಗಂಗೂಲಿ (131), ಅಜಿತ್ ಅಗರ್ಕರ್ (ಅಜೇಯ 109), ರಾಹುಲ್ ದ್ರಾವಿಡ್ (ಅಜೇಯ 103), ಅಜಿಂಕ್ಯ ರಹಾನೆ (103) ಲಾರ್ಡ್ಸ್ ನಲ್ಲಿ ಶತಕ ಸಾಧನೆ ಹೊಂದಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೆ ಈ ಮೈದಾನದಲ್ಲಿ ಶತಕ ಬಾರಿಸಲಾಗಿಲ್ಲ.

Story first published: Thursday, August 9, 2018, 19:27 [IST]
Other articles published on Aug 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X