ರೋಹಿತ್ ಯಶಸ್ವಿ ಕ್ಯಾಪ್ಟನ್ ಆಗಿರಲು ಏನು ಕಾರಣ ? ಸಚಿನ್ ತೆಂಡೂಲ್ಕರ್ ಉತ್ತರ

ಟೀಂ ಇಂಡಿಯಾ ನೂತನ ಟಿ20 ಫಾರ್ಮೆಟ್ ನಾಯಕ ರೋಹಿತ್ ಶರ್ಮಾ, ಚೊಚ್ಚಲ ಫುಲ್ ಟೈಮ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನ ಗೆದ್ದು ತೋರಿಸಿದ್ದನ್ನ ನೀವೆಲ್ಲಾ ನೋಡಿದ್ದೀರಿ. ಇವರು ಟೀಂ ಇಂಡಿಯಾ ನಾಯಕತ್ವ ಪಡೆಯುವ ಮುನ್ನವೇ ಎಷ್ಟರ ಮಟ್ಟಿಗೆ ಐಪಿಎಲ್‌ನಲ್ಲಿ ಯಶಸ್ವಿಯಾಗಿ ತಂಡವಾಗಿ ಮುನ್ನಡೆಸಿದ್ದನ್ನ ಕಂಡಿದ್ದೀರಿ.

ರೋಹಿತ್ ಶರ್ಮಾ ನಾಯಕತ್ವಕ್ಕೆ ಕನ್ನಡಿಯಾಗಿರುವುದು ಐದು ಬಾರಿ ಟಿ20 ಟ್ರೋಫಿಗಳನ್ನು ಗೆದ್ದಿರುವುದಾಗಿದೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಸಿರುವ ರೋಹಿತ್ 2013, 2015, 2017, 2019, 2020ರಲ್ಲಿ ತಂಡವನ್ನ ಚಾಂಪಿಯನ್ ಆಗಿಸಿದ್ದಾರೆ.

ಇಷ್ಟು ದೊಡ್ಡ ಮಟ್ಟಿಗೆ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುವುದು ಸಾಮಾನ್ಯ ಮಾತಲ್ಲ. ತಾಳ್ಮೆಯ ಜೊತೆಗೆ ಚಾಣಾಕ್ಯತೆಯು ಅಗತ್ಯವಾಗಿದೆ. ಆದ್ರೆ ನಾಯಕತ್ವ ಎನ್ನುವುದು ರೋಹಿತ್‌ ಜೊತೆಯಲ್ಲಿಯೇ ಬಂದುಬಿಟ್ಟಿದೆ. 2013ರಲ್ಲಿ ಐಪಿಎಲ್ ಚೊಚ್ಚಲ ನಾಯತ್ವದಲ್ಲೇ ರೋಹಿತ್ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ರೋಹಿತ್ ನಾಯಕತ್ವ ಕುರಿತು ಹೊಗಳಿದ ಸಚಿನ್ ತೆಂಡೂಲ್ಕರ್

ರೋಹಿತ್ ನಾಯಕತ್ವ ಕುರಿತು ಹೊಗಳಿದ ಸಚಿನ್ ತೆಂಡೂಲ್ಕರ್

ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ರೋಹಿತ್ ಶರ್ಮಾ ಅವರನ್ನು ಸಾಕಷ್ಟು ದಕ್ಷತೆಯಿಂದ ತಂಡಗಳನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ 2013ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ನಾಯಕನಾಗಿ ರಿಕಿ ಪಾಂಟಿಂಗ್‌ನಿಂದ ಅಧಿಕಾರ ವಹಿಸಿಕೊಂಡಾಗ ರೋಹಿತ್ ಅವರ ಕ್ರಿಕೆಟ್ ಅದೃಷ್ಟ ಬದಲಾಯಿತು. ಅದೇ ವರ್ಷ ಅವರು ಟೀಮ್ ಇಂಡಿಯಾ ಪರ ಟಾಪ್ ಆರ್ಡರ್‌ ಬ್ಯಾಟಿಂಗ್ ಆರಂಭಿಸಿದರು.

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

8 ವರ್ಷಗಳಲ್ಲಿ ಹಿಟ್‌ಮ್ಯಾನ್‌ಗೆ ಹಲವು ಸಾಧನೆ ಹೇಗೆ ಸಾಧ್ಯವಾಯ್ತು?

8 ವರ್ಷಗಳಲ್ಲಿ ಹಿಟ್‌ಮ್ಯಾನ್‌ಗೆ ಹಲವು ಸಾಧನೆ ಹೇಗೆ ಸಾಧ್ಯವಾಯ್ತು?

ಐಪಿಎಲ್‌ ನಾಯಕತ್ವ ವಹಿಸಿಕೊಂಡು ಎಂಟು ವರ್ಷಗಳ ನಂತರ, ನಾಗ್ಪುರ ಮೂಲದ ರೋಹಿತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಐದು ಬಾರಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಆದಾಗ್ಯೂ ಮುಂಬೈ ಇಂಡಿಯನ್ಸ್‌ ಕಳೆದ ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲರಾದರು.

ಆದ್ರೂ ರೋಹಿತ್ ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ದು ಹೇಗೆ ಎಂಬುದಕಕ್ಕೆ ಸಚಿನ್ ಉತ್ತರಿಸಿದ್ದು, ರೋಹಿತ್ ಅವರು ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ತಂಡವನ್ನ ಮುನ್ನಡೆಸುವ ಸಾಮರ್ಥ್ಯವು ಅವರನ್ನು ಉಳಿದ ನಾಯಕರಿಗಿಂತ ವಿಭಿನ್ನರಾಗಿ ಕಾಣಿಸುತ್ತದೆ ಎಂದಿದ್ದಾರೆ.

"ರೋಹಿತ್ ಜೊತೆಗಿನ ನನ್ನ ಸಂವಹನ ಏನೇ ಇರಲಿ, ಅವರು ತುಂಬಾ ಚುರುಕಾದ ಕ್ರಿಕೆಟ್ ಮೆದುಳನ್ನು ಹೊಂದಿದ್ದಾರೆ. ಅವನು ಪ್ಯಾನಿಕ್ ಆಗುವುದಿಲ್ಲ. ನಾನು ನೋಡಿದಂತೆ ಒತ್ತಡವನ್ನು ಹಿಡಿದಿಟ್ಟುಕೊಳ್ಳಲು ಅವನು ಸಮರ್ಥನಾಗಿದ್ದಾನೆ. ನೀವು ತಂಡವನ್ನು ಮುನ್ನಡೆಸುವಾಗ ಅದು ಮುಖ್ಯವಾಗಿದೆ, "ಎಂದು ತೆಂಡೂಲ್ಕರ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ

ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ

ರೋಹಿತ್ ತಮ್ಮ ಮುಂಬೈ ಮೂಲದ ಫ್ರಾಂಚೈಸಿಯೊಂದಿಗೆ ಸರಿಯಾದ ಕ್ಷಣಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಸಚಿನ್ ಹೇಳಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಮುಂಬೈ ಇಂಡಿಯನ್ಸ್‌ ತನ್ನ ನಾಲ್ಕು ಆಟಗಾರರಲ್ಲಿ ಒಬ್ಬನಾಗಿ ಶರ್ಮಾ ಅವರನ್ನು ಉಳಿಸಿಕೊಂಡಿದೆ. ಆತ ಇಲ್ಲಿಯವರೆಗೂ ಫ್ರಾಂಚೈಸಿಯನ್ನ ನಿರಾಸೆಗೊಳಿಸಿಲ್ಲ ಎಂಬುದು ಗಮನಾರ್ಹ

"ನಾಯಕನು ಕಾಳಜಿ ವಹಿಸಬೇಕಾದ ಹಲವಾರು ವಿಷಯಗಳಿವೆ. ತಂಡವು ಆತನತ್ತ ನೋಡುತ್ತಿರುವ ಪರಿಸ್ಥಿತಿಯಲ್ಲಿ ತನ್ನ ಅಗ್ರೆಷನ್ ಅನ್ನು ತುಂಬಾ ಅದುಮಿ ಇಟ್ಟುಕೊಟ್ಟಬೇಕು. ಜೊತೆಗೆ ತಾಳ್ಮೆಯಿಂದ ಕೂಲ್ ಆಗಿ ಕೆಲಸ ಮಾಡುವುದು ಮುಖ್ಯ, ನಾವು ಮುಂಬೈ ಇಂಡಿಯನ್ಸ್‌ನಲ್ಲಿ ಕಳೆದ ಸಮಯದಲ್ಲಿ ರೋಹಿತ್‌ನಲ್ಲಿ ಇದನ್ನ ನಾನು ಗಮನಿಸಿದ್ದೇನೆ, "ಎಂದು ಸಚಿನ್ ಹೇಳಿದ್ದಾರೆ.

ಒಮಿಕ್ರೋನ್ ವೈರಸ್ ಭೀತಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಒಂಭತ್ತು ದಿನ ಮುಂದೂಡಿಕೆ

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada
ರೋಹಿತ್ ಪೂರ್ಣಾವಧಿ ಟಿ20 ನಾಯಕ

ರೋಹಿತ್ ಪೂರ್ಣಾವಧಿ ಟಿ20 ನಾಯಕ

2021ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ, ರೋಹಿತ್ ಟೀಮ್ ಇಂಡಿಯಾದ ಟಿ20 ತಂಡದ ಪೂರ್ಣ ಸಮಯದ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಅವರ ಮೊದಲ ಸರಣಿಯಲ್ಲೇ ಮೆನ್ ಇನ್ ಬ್ಲೂ 3-0 ಯಿಂದ ನ್ಯೂಜಿಲೆಂಡ್ ತಂಡವನ್ನ ವೈಟ್‌ವಾಶ್ ಮಾಡಿತು.

ರೋಹಿತ್ ಇದಕ್ಕೂ ಮೊದಲು ಕೊಹ್ಲಿ ನಾಯಕತ್ವದಲ್ಲಿ ಉಪನಾಯಕರಾಗಿ ಆಟವಾಡಿದ್ರು, ಕೊಹ್ಲಿ ಅನುಪಸ್ಥಿತಿಯ ಸರಣಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, December 5, 2021, 16:46 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X