ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ: ಪುರುಷರ 'ಟಿ20 ವಿಶ್ವಕಪ್‌' ಬಗ್ಗೆ ನಿರ್ಧಾರ ಪ್ರಕಟಿಸಿದ ಆಸ್ಟ್ರೇಲಿಯಾ

Hopeful of holding Mens T20 World Cup as per schedule: Cricket Australia

ಮೆಲ್ಬರ್ನ್, ಮಾರ್ಚ್ 17: ಮಾರಕ ಕೊರೊನಾ ವೈರಸ್‌ನಿಂದಾಗಿ ಕ್ರೀಡಾ ರಂಗಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ನಿಗದಿಯಾಗಿರುವ ದಿನಾಂಕಗಳಂತೆ ಯಾವುದೇ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿಲ್ಲ. ವಿಶ್ವದಾದ್ಯಂತ ಕ್ರೀಡಾಕೂಟಗಳೆಲ್ಲ ರದ್ದಾಗಿವೆ, ರದ್ದಾಗುತ್ತಿವೆ. ಕೆಲವು ಕ್ರೀಡಾ ಸ್ಪರ್ಧೆಗಳು ಮುಂದೂಡಲ್ಪಡುತ್ತಿವೆ. ಹಾಗಾದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಕತೆಯೇನಾಗಲಿದೆ?

ಭಾರತೀಯ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್ಭಾರತೀಯ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್

ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡಿತು. ಪುರುಷರ ವಿಭಾಗದ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನೂ ಕಾಂಗರೂಗಳ ದೇಶವೇ ವಹಿಸಿಕೊಂಡಿದೆ. ಅಕ್ಟೋಬರ್ 18ರಿಂದ ಪ್ರತಿಷ್ಠಿತ ಟೂರ್ನಿ ಆರಂಭವಾಗುವುದರಲ್ಲಿದೆ.

ಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗಕೊಹ್ಲಿ ತರದ ನಾಯಕನೇ ನಮಗೆ ಬೇಕು ಎಂದ ಮಾಜಿ ಕ್ರಿಕೆಟಿಗ

ಆದರೆ ಕೊರೊನಾ ವೈರಸ್‌ನಿಂದಾಗಿ ಕ್ರೀಡಾ ವೇಳಾಪಟ್ಟಿಗಳು ಬದಲಾಗುತ್ತಿರುವಾಗ, ಟಿ20 ವಿಶ್ವಕಪ್‌ ವೇಳಾಪಟ್ಟಿಯೂ ಬದಲಾಗಲಿದೆಯಾ ಎಂಬ ಸುದ್ದಿಗಾರ ಪ್ರಶ್ನೆಗಳಿಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಉತ್ತರಿಸಿದೆ.

ಐಪಿಎಲ್, ವಿದೇಶಿ ಟೂರ್ನಿಗಳೆಲ್ಲ ರದ್ದು

ಐಪಿಎಲ್, ವಿದೇಶಿ ಟೂರ್ನಿಗಳೆಲ್ಲ ರದ್ದು

ನೋವೆಲ್ ಕೊರೊನಾ ವೈರಸ್‌ನಿಂದಾಗಿ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಐಪಿಎಲ್ ಸದ್ಯಕ್ಕೆ ರದ್ದಾಗಿದೆ. ಐಪಿಎಲ್ ಅನ್ನು ಏಪ್ರಿಲ್ 15ರ ಬಳಿಕ ನಡೆಸಲು ಬಿಸಿಸಿಐ ನಿರ್ಧರಿಸಿದೆ. ವೇಳಾಪಟ್ಟಿಯ ಪ್ರಕಾರ ನಡೆಸಲು ಸಿದ್ಧವಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳೂ ರದ್ದಾಗಿವೆ, ಮುಂದೂಡಲ್ಪಟ್ಟಿವೆ. ಬಹು ನಿರೀಕ್ಷಿತ ಟಿ20 ವಿಶ್ವಕಪ್ ಕೂಡ ರದ್ದಾಗಲಿದೆಯ? ಮುಂದೂಡಲ್ಪಡಲಿದೆಯಾ?

ಗೊಂದಲಕ್ಕೆ ತೆರೆ ಎಳೆದ ಆಸ್ಟ್ರೇಲಿಯಾ

ಗೊಂದಲಕ್ಕೆ ತೆರೆ ಎಳೆದ ಆಸ್ಟ್ರೇಲಿಯಾ

ಪುರುಷರ ಟಿ20 ವಿಶ್ವಕಪ್ ಬಗೆಗೆ ಕ್ರಿಕೆಟ್ ಅಭಿಮಾನಿಗಳಲ್ಲಿದ್ದ ಗೊಂದಲಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ತೆರೆ ಎಳೆದಿದೆ. ಕೊವಿಡ್‌19 ಭೀತಿಯಿದ್ದರೂ ಪುರುಷರ ಟಿ20 ವಿಶ್ವಕಪ್ ಅನ್ನು ಈಗಿನ ವೇಳಾಪಟ್ಟಿಯಂತೆಯೇ ನಡೆಸುವ ಭರವಸೆಯಲ್ಲಿದ್ದೇವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿದೆ.

ಎಲ್ಲಾ ಕ್ರೀಡಾಸ್ಪರ್ಧೆಗಳೂ ಮತ್ತೆ ಚಾಲೂ

ಎಲ್ಲಾ ಕ್ರೀಡಾಸ್ಪರ್ಧೆಗಳೂ ಮತ್ತೆ ಚಾಲೂ

'ಕೆಲವೇ ವಾರಗಳು ಅಥವಾ ತಿಂಗಳುಗಳಲ್ಲಿ ಎಲ್ಲಾ ಕ್ರೀಡಾಸ್ಪರ್ಧೆಗಳು ಮತ್ತೆ ನಡೆಸಲ್ಪಡುತ್ತವೆ ಎಂಬ ಭರವಸೆ ನಮಗಿದೆ. ಇಂಥ ಸಂದರ್ಭದಲ್ಲಿ ಹೀಗೆಂದೇ ಹೇಳೋಕೆ ಇಲ್ಲಿ ನಾವ್ಯಾರೂ ಪ್ರವೀಣರಲ್ಲ. ಆದರೆ ಅಕ್ಟೋಬರ್ ಮತ್ತು ನವೆಂಬರ್ ವೇಳೆಗೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸ ನಮ್ಮದು,' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆವಿನ್ ರೋಬರ್ಟ್ಸ್ ಹೇಳಿದ್ದಾರೆ.

ಎಂಸಿಜಿ ಭರ್ತಿಯಾಗಲಿದೆ

ಎಂಸಿಜಿ ಭರ್ತಿಯಾಗಲಿದೆ

ಮಾತು ಮುಂದುವರೆಸಿದ ರೋಬರ್ಟ್ಸ್‌, 'ಅಕ್ಟೋಬರ್ ವೇಳೆಗೆ ಪರಿಸ್ಥಿತಿ ಸುಧಾರಿಸುವುದರಿಂದ ಆ ವೇಳೆ ಎಣಿಕೆಯಂತೆ ಪುರುಷರ ಟಿ20 ವಿಶ್ವಕಪ್ ನಡೆಯಲಿದೆ. ನವೆಂಬರ್ 15ರ ಹೊತ್ತಿಗೆ ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ (ಎಂಸಿಜಿ) ಕ್ರಿಕೆಟ್‌ ಅಭಿಮಾನಿಗಳಿಂದ ತುಂಬಿರಲಿದೆ,' ಎಂದು ಭರವಸೆ ವ್ಯಕ್ತಪಡಿಸಿದವರು. ಈಗಿನ ವೇಳಾಪಟ್ಟಿಯಂತೆ ಟಿ20 ವಿಶ್ವಕಪ್ ನಡೆದರೆ, ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಐರ್ಲೆಂಡ್ ಸೆಣಸಾಡಲಿದೆ.

Story first published: Tuesday, March 17, 2020, 14:33 [IST]
Other articles published on Mar 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X