ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ಗೂ ಬಂದ 'ಹೌದು ಹುಲಿಯಾ', 'ಮಿಣಿಮಿಣಿ ಪೌಡರ್': ವೀಡಿಯೋ

Houdu huliya and Mini mini powder entered to New Zealand

ಆಕ್ಲೆಂಡ್‌, ಜನವರಿ 26: ಕರ್ನಾಟಕದಲ್ಲಿ ಸಕ್ಕತ್ ಟ್ರೆಂಡ್‌ ಆಗಿರುವ 'ಹೌದು ಹುಲಿಯಾ' ಮತ್ತು 'ಮಿಣಿ ಮಿಣಿ ಪೌಂಡರ್' ಡೈಲಾಗ್‌ ನ್ಯೂಜಿಲೆಂಡ್‌ಗೂ ಎಂಟ್ರಿ ಕೊಟ್ಟಿದೆ. ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಟಿ20 ಪಂದ್ಯದ ವೇಳೆ ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳಿಬ್ಬರು ಈ ಟ್ರೆಂಡಿಂಗ್ ಡೈಲಾಗ್‌ ಹೊಡೆಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಎಬಿಡಿ, ಫಿಂಚ್‌, ಫಿಲಿಪ್ ಅಬ್ಬರದಾಟ-ಬಿಬಿಎಲ್‌ನಲ್ಲಿ 'ಆರ್‌ಸಿಬಿ' ಡೇ: ವೀಡಿಯೋಎಬಿಡಿ, ಫಿಂಚ್‌, ಫಿಲಿಪ್ ಅಬ್ಬರದಾಟ-ಬಿಬಿಎಲ್‌ನಲ್ಲಿ 'ಆರ್‌ಸಿಬಿ' ಡೇ: ವೀಡಿಯೋ

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಭಾನುವಾರ (ಜನವರಿ 26) ನಡೆದ ಭಾರತ-ನ್ಯೂಜಿಲೆಂಡ್‌ ದ್ವಿತೀಯ ಟಿ20 ಪಂದ್ಯದ ವೇಳೆ ಒಬ್ಬ ಅಭಿಮಾನಿ ಹೌದು 'ಹುಲಿಯಾ ಡೈಲಾಗ್' ಹೊಡೆದು ಅದನ್ನೇ ಬರೆದಿರುವ ಬೋರ್ಡ್ ಪ್ರದರ್ಶಿಸಿದರೆ, ಆಚೆ ಬದಿಯಲ್ಲಿದ್ದ ಇನ್ನೊಬ್ಬ 'ಮಿಣಿ ಮಿಣಿ ಪೌಡರ್' ಎಂದು ಕೂಗಿ ಬೋರ್ಡ್ ತೋರಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!

ಬೆಳಗಾವಿಯ ಕಾಗೇವಾಡದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಅಭಿಮಾನಿಯೊಬ್ಬರು 'ಹೌದು ಹುಲಿಯಾ' ಎಂದು ಕೂಗಿದ್ದರು. ಇತ್ತೀಚೆಗೆ ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣದ ವೇಳೆ ಸುದ್ದಿ ಗೋಷ್ಠಿ ನಡೆಸುತ್ತಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ 'ಮಿಣಿ ಮಿಣಿ ಪೌಡರ್' ಉಲ್ಲೇಖಿಸಿ ಟ್ರೋಲ್‌ಗೆ ಗುರಿಯಾಗಿದ್ದರು.

ಕರ್ನಾಟಕದಲ್ಲಿ ಹೌದು ಹುಲಿಯಾ ಮತ್ತು ಮಿಣಿ ಮಿಣಿ ಪೌಡರ್ ಡೈಲಾಗು ಇಂದಿಗೂ ಅಲ್ಲಲ್ಲಿ ಸದ್ದಾಗುತ್ತಲೇಯಿದೆ. ನ್ಯೂಜಿಲೆಂಡ್‌ನಲ್ಲಿ ಪಂದ್ಯ ನೋಡಲು ಹೋಗಿದ್ದ ಕನ್ನಡಿಗರು ಅಲ್ಲೂ ಈ ಎರಡೂ ಡೈಲಾಗ್‌ಗಳನ್ನು ನೆನಪಿಸಿ ಗಮನ ಸೆಳೆಯೋ ಪ್ರಯತ್ನ ಮಾಡಿದ್ದರು. ಅಂದ್ಹಾಗೆ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳ ಸುಲಭ ಗೆಲುವನ್ನಾಚರಿಸಿದೆ.

Story first published: Sunday, January 26, 2020, 18:28 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X