ಆರ್‌ಸಿಬಿಗೆ ಆರೋನ್ ಫಿಂಚ್: ಕೊಹ್ಲಿ ನಾಯಕತ್ವದಲ್ಲಿ ಆಡುವ ಬಗ್ಗೆ ಫಿಂಚ್ ಮಾತು

ಐಪಿಎಲ್‌ಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಆಟಗಾರರು ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳು ಕಾತುರದಿಂದ ಕಾಯುತ್ತಿದ್ದಾರೆ. ಈ ರೋಚಕ ಸೆಣೆಸಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳೂ ಉತ್ಸುಕರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಬಾರಿ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕ ಆರೋನ್ ಫಿಂಚ್ ಸೇರಿಕೊಂಡಿರುವುದು ಅಭಿಮಾನಿಗಳ ಹುಮ್ಮಸ್ಸು ಮತ್ತಷ್ಟು ಹೆಚ್ಚಿಸಿದೆ.

ಇದೇ ಕಾತುರತೆ ಸ್ವತಃ ಆರೋನ್ ಫಿಂಚ್‌ಗೂ ಇದೆ. ಈ ಬಗ್ಗೆ ಸ್ವತಃ ಆರೋನ್ ಫಿಂಚ್ ಮಾತನಾಡಿದ್ದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಆರ್‌ಸಿಬಿ ತಂಡದಲ್ಲಿ ಆಡಲಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಫಿಂಚ್ 4.4ಕೋಟಿಗೆ ಆರ್‌ಸಿಬಿಗೆ ಹರಾಜಾಗಿದ್ದರು.

ಸಿಪಿಎಲ್ 2020: ಕೆರಿಬಿಯನ್ ನಾಡಿನ ಟಿ20 ದಿಗ್ಗಜ ಈ ಬಾರಿಯ ಟೂರ್ನಿಗೆ ಅಲಭ್ಯ

ಉತ್ಸಾಹ ಹೆಚ್ಚಿಸಿದೆ

ಉತ್ಸಾಹ ಹೆಚ್ಚಿಸಿದೆ

ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ನಾನು ಮೊದಲ ಬಾರಿಗೆ ಆಡುತ್ತಿರುವುದು ನನ್ನ ಉತ್ಸಾಹವನ್ನು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಎದುರಾಳಿಯಾಗಿ ಕಣಕ್ಕಿಳಿದು ಈಗ ಒಂದೇ ತಂಡದಲ್ಲಿ ಆಡುತ್ತಿದ್ದೇವೆ. ಈ ಮೂಲಕ ಕೊಹ್ಲಿಯೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಭರವಸೆಯಿದೆ ಎಂದು ಫಿಂಚ್ ಹೇಳಿದ್ದಾರೆ.

ನಾಯಕನಿಗೆ ನೆರವಾಗುತ್ತೇನೆ

ನಾಯಕನಿಗೆ ನೆರವಾಗುತ್ತೇನೆ

ನನ್ನ ಅನುಭವದ ಕಾರಣದಿಂದಾಗಿ ಐಪಿಎಲ್‌ನಲ್ಲಿ ನನ್ನಿಂದಾಗುವ ಸಹಾಯದ ಅಗತ್ಯವಿದ್ದಾಗ ಖಂಡಿತಾ ನೆರವಾಗುತ್ತೇನೆ. ನಾಯಕ ವಿರಾಟ್ ಕೊಹ್ಲಿಯ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿರುವ ನೆರವನ್ನು ನಾನು ನೀಡಲು ಸಿದ್ದನಿದ್ದೇನೆ. ನನ್ನಿಂದಾಗುವ ಎಲ್ಲಾ ನೆರವನ್ನು ನಾನು ನಾಯಕ ಹಾಗೂ ತಂಡಕ್ಕೆ ನೀಡುತ್ತೇನೆ ಎಂದು ಆರೋನ್ ಫಿಂಚ್ ಹೇಳಿದ್ದಾರೆ.

ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿರುವ ತಂಡ

ವಿಶ್ವ ಶ್ರೇಷ್ಠ ಆಟಗಾರರನ್ನು ಹೊಂದಿರುವ ತಂಡ

ವಿಶ್ವದ ಶ್ರೇಷ್ಠ ಆಟಗಾರರನ್ನು ಹೊಂದಿರುವ ತಂಡಕ್ಕಾಗಿ ಆಡುವುದು ನಿಜಕ್ಕೂ ಖುಷಿಯ ಸಂಗತಿ. ಚಿನ್ನಸ್ವಾಮಿಯಲ್ಲಿ ತವರು ಪ್ರೇಕ್ಷಕರ ಮುಂದೆ ಆಡುವುದು ಸಂಭ್ರಮದ ವಿಚಾರವಾಗಿತ್ತು. ಆದರೆ ಈ ಬಾರಿ ಯುಎಇನಲ್ಲಿ ನಡೆಯುತ್ತಿದೆ. ಇದು ನನ್ನ ಪಾಲಿಗೆ ದೊಡ್ಡ ಸಂಗತಿಯಾಗಿದೆ ಎಂದು ಆರೋನ್ ಫಿಂಚ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, August 7, 2020, 11:06 [IST]
Other articles published on Aug 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X