ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

70 ಶತಕ ಸಿಡಿಸಿದ ಆಟಗಾರನ ಕೌಶಲ್ಯ ಪ್ರಶ್ನಿಸ್ತೀರಾ?: ಕೊಹ್ಲಿ ಬೆನ್ನಿಗೆ ನಿಂತ ಹಕ್

How Can You Question His Technique? Inzamam Slams Virat Kohli’s Critics

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಸೋತ ಟೀಮ್ ಇಂಡಿಯಾ ಭಾರಿ ನಿರಾಶೆಗೆ ಒಳಗಾಗಿದೆ. ಟೀಮ್ ಇಂಡಿಯಾ ನಾಯಕನ ಸಹಿತ ಎಲ್ಲಾ ಪ್ರಮುಖ ಆಟಗಾರರು ಈ ಸರಣಿಯಲ್ಲಿ ವೈಫಲ್ಯವನ್ನು ಅನುಭವಿಸಿದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಟೀಮ್ ಇಂಡಿಯಾದ ಮಾಜಿ ಆಟಗಾರರು ಸೇರಿದಂತೆ ಅನೇಕ ವಿಮರ್ಶಕರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಟೀಕೆಯನ್ನು ಮಾಡುತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ಆಟಗಾರನ ಪರವಾಗಿ ಪಾಕಿಸ್ತಾನದ ಮಾಜಿ ನಾಯಕ ಉತ್ತಮ ಮಾತುಗಳನ್ನಾಡಿದ್ದಾರೆ

ಕೊಹ್ಲಿ ವೈಫಲ್ಯವೇ ದೊಡ್ಡ ಸಮಸ್ಯೆ ಎಂದು ಹೇಳಿಕೆ ನೀಡಿದ ವಿವಿಎಸ್ ಲಕ್ಷ್ಮಣ್ಕೊಹ್ಲಿ ವೈಫಲ್ಯವೇ ದೊಡ್ಡ ಸಮಸ್ಯೆ ಎಂದು ಹೇಳಿಕೆ ನೀಡಿದ ವಿವಿಎಸ್ ಲಕ್ಷ್ಮಣ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರವಾಗಿ ಮಾತನಾಡಿದ ಪಾಕ್ ಮಾಜಿ ಆಟಗಾರ ಬೇರೆ ಯಾರು ಅಲ್ಲ. ಅದು ಪಾಕಿಸ್ತಾನ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್.

ಇನ್ಜಮಾಮ್ ಕೆಂಡ

ಇನ್ಜಮಾಮ್ ಕೆಂಡ

ಕಳೆದ ಕೆಲ ಸರಣಿಗಳಿಂದ ಉತ್ತಮ ಪ್ರದರ್ಶನವನ್ನು ನೀಡದ ವಿರಾಟ್ ಕೊಹ್ಲಿ ಆಟದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದೆ. ಅಭಿಮಾನಿಗಳು ಕೂಡ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೊಹ್ಲಿಯ ಆಟದ ವೈಖರಿಯನ್ನು ಪ್ರಶ್ನಿಸುತ್ತಿರುವರ ವಿರುದ್ಧ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಕೆಂಡಕಾರಿದ್ದಾರೆ.

ವಿರಾಟ್ ಬಗೆಗಿನ ಮಾತು ಆಶ್ಚರ್ಯವೆನಿಸುತ್ತಿದೆ

ವಿರಾಟ್ ಬಗೆಗಿನ ಮಾತು ಆಶ್ಚರ್ಯವೆನಿಸುತ್ತಿದೆ

ಇನ್ಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ಪರವಹಿಸಿ ಮಾತನಾಡಿದ್ದಾರೆ. ಹಲವಾರು ಮಂದಿ ವಿರಾಟ್ ಕೊಹ್ಲಿಯ ಆಟದ ಕೌಶಲ್ಯದ ಬಗ್ಗೆ ಪ್ರಶ್ನೆಯನ್ನು ಮಾಡುತ್ತಿರುವುದನ್ನು ಗಮನಿಸುತ್ತಿದ್ದೇನೆ. ಅವರೆಲ್ಲರ ಮಾತು್ಗಳನ್ನು ಕೇಳಿ ನನಗೆ ಆಶ್ಚರ್ಯವೆನಿಸುತ್ತಿದೆ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

70 ಶತಕ ಗಳಿಸಿರುವ ಆಟಗಾರ

70 ಶತಕ ಗಳಿಸಿರುವ ಆಟಗಾರ

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 70 ಶತಕಗಳನ್ನು ಬಾರಿಸಿರುವ ಆಟಗಾರ. ಅಂತಾ ಆಟಗಾರನ ಕೌಶಲ್ಯವನ್ನು ಈಗ ಪ್ರಶ್ನಿಸುತ್ತಿದ್ದೀರಾ ಎಂದು ಇನ್ಜಮಾಮ್ ಉಲ್ ಹಕ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಪ್ರತಿ ಆಟಗಾರನಿಗೂ ಕೆಟ್ಟ ಸಂದರ್ಭಗಳಿರುತ್ತದೆ

ಪ್ರತಿ ಆಟಗಾರನಿಗೂ ಕೆಟ್ಟ ಸಂದರ್ಭಗಳಿರುತ್ತದೆ

ಪ್ರತಿ ಆಟಗಾರನೂ ಕೆಟ್ಟ ಸಂದರ್ಭಗಳನ್ನು ಕಾಣುತ್ತಾರೆ. ಆದರೆ ಅದು ಆತನ ಪ್ರಯತನ್ ದ ಕೊರತೆ ಎಂದು ಅರ್ಥವಲ್ಲ ಎಂಬ ಮಾತನ್ನು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವೀಡಿಯೋದಲ್ಲಿ ಮಾತನಾಡಿದ ಇನ್ಜಮಾಮ್ ಉಲ್ ಹಕ್ ವಿರಾಟ್ ಕೊಹ್ಲಿ ಪರವಹಿಸಿ ಹೇಳಿಕೆಯನ್ನು ನೀಡಿದ್ದಾರೆ.

ಸಲಹೆ ನೀಡಿದ ಹಕ್

ಸಲಹೆ ನೀಡಿದ ಹಕ್

ಪಾಕಿಸ್ತಾನದ ಮಾಜಿ ನಾಯಕ ವಿರಾಟ್ ಕೊಹ್ಲಿ ಪರವಾಗಿ ಮಾತನಾಡಿದ್ದು ಮಾತ್ರವಲ್ಲದೆ ವಿರಾಟ್ ಕೊಹ್ಲಿಗೆ ಇನ್ಜಮಾಮ್ ಉಲ್ ಹಕ್ ಧೈರ್ಯ ತುಂಬುವ ಮಾತುಗಳನ್ನೂ ಆಡಿದ್ದಾರೆ. ವಿರಾಟ್‌ಗೆ ನಾನೇನಾದರು ಸಲಹೆಯನ್ನು ನೀಡಬೇಕೆಂದಿದ್ದರೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳು ಅಗತ್ಯವೂ ಇಲ್ಲ ಎಂದಿದ್ದಾರೆ.

ಮತ್ತಷ್ಟು ಬಲಿಷ್ಠನಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ

ಮತ್ತಷ್ಟು ಬಲಿಷ್ಠನಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ

ವಿರಾಟ್ ಕೊಹ್ಲಿಯಂತಾ ಆಟಗಾರರು ಸ್ಟ್ರಾಂಗ್ ಮೈಂಡ್ ಹೊಂದಿರುತ್ತಾರೆ. ಇದು ಅವಚರ ಆಟಕ್ಕೆ ಯಾವುದೇ ಧಕ್ಕೆಯನ್ನು ತರುವುದಿಲ್ಲ. ಅವರು ಮತ್ತಷ್ಟು ಬಲಿಷ್ಠನಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಮಾತನ್ನು ಇನ್ಜಮಾಮ್ ಉಲ್ ಹಕ್

Story first published: Tuesday, March 3, 2020, 12:45 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X