ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CWC Super League ಟೇಬಲ್‌ನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?!

How does CWC Super League points table looks after Bangladeshs historic series win?

ನವದೆಹಲಿ: ಕ್ರಿಕೆಟ್ ವರ್ಲ್ಡ್‌ಕಪ್ ಸೂಪರ್ ಲೀಗ್ ಭಾಗವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ನಡೆದಿತ್ತು. ಮೇ 28ರ ಶುಕ್ರವಾರ ಮುಗಿದ ಈ ಸರಣಿಯಲ್ಲಿ ಬಾಂಗ್ಲಾ 2-1ರ ಜಯ ದಾಖಲಿಸಿದೆ. ವಿಶೇಷವೆಂದರೆ ಬಾಂಗ್ಲಾ ತಂಡ ಶ್ರೀಲಂಕಾದಲ್ಲಿ ಏಕದಿನ ಸರಣಿ ಗೆದ್ದಿದ್ದು ಇದೇ ಮೊದಲ ಬಾರಿ. ಈ ಜಯದೊಂದಿಗೆ ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಬಾಂಗ್ಲಾದೇಶ ಮೊದಲ ಸ್ಥಾನಕ್ಕೇರಿದೆ. ಆಡಿರುವ 9 ಪಂದ್ಯಗಳಲ್ಲಿ ಬಾಂಗ್ಲಾ 5 ಪಂದ್ಯಗಳನ್ನು ಗೆದ್ದಿದೆ.

ಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆ

ಬಾಂಗ್ಲಾದೇಶ 5 ಪಂದ್ಯಗಳನ್ನು ಗೆದ್ದು ಒಟ್ಟು 50 ಅಂಕಗಳನ್ನು ಕಲೆ ಹಾಕಿದೆ. +0.096 ನೆಟ್‌ ರನ್‌ರೇಟನ್ನು ಬಾಂಗ್ಲಾ ಹೊಂದಿದ್ದು ಸದ್ಯಕ್ಕೆ ಬಾಂಗ್ಲಾಕ್ಕೆ ಮತ್ತೆ ಪಂದ್ಯಗಳಿಲ್ಲ. ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 40 ಪಾಯಿಂಟ್ಸ್‌ ಗಳಿಸಿದೆ.

ಏನಿದು ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್?

ಏನಿದು ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್?

2023ರಲ್ಲಿ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ಗೆ ಅರ್ಹತೆ ಪ್ರಕ್ರಿಯೆಗಾಗಿ ಐಸಿಸಿ ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್ ಎನ್ನುವ ವಿನೂತನ ಲೀಗ್‌ ಆರಂಭಿಸಿದೆ. 2020ರಲ್ಲಿ ಆರಂಭವಾಗಿರುವ ಈ ಲೀಗ್ 2023ರ ವರೆಗೆ ನಡೆಯಲಿದೆ. ಏಕದಿನ ಕ್ರಿಕೆಟ್‌ ಲೀಗ್‌ ಇದು. ಸದ್ಯ ನಡೆಯುತ್ತಿರೋದು ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಉದ್ಘಾಟನಾ ಲೀಗ್ ಆಗಿದೆ.

CWC Super League ಅಂಕ ವಿತರಣೆ ಹೇಗೆ?

CWC Super League ಅಂಕ ವಿತರಣೆ ಹೇಗೆ?

ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್ ಅಂಕ ವಿತರಣೆ ಹೇಗಿರುತ್ತದೆಯೆಂದರೆ ಗೆಲ್ಲುವ ಪ್ರತೀ ಪಂದ್ಯಕ್ಕೂ 10 ಅಂಕ, ಪಂದ್ಯ ರದ್ದಾದರೆ, ಟೈ ಆದರೆ, ಫಲಿತಾಂಶ ಇಲ್ಲವೆಂದು ಘೋಷಿಸಲ್ಪಟ್ಟರೆ 5 ಅಂಕ, ಸೋತರೆ ಅಂಕವಿಲ್ಲ. ಸ್ಲೋ ಓವರ್‌ ರೇಟ್‌ ಗಾಗಿ ದಂಡ ವಿಧಿಸಲಾಗುವ ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ 1 ಅಂಕ ಕಳೆದುಕೊಳ್ಳುತ್ತದೆ. ಲೀಗ್‌ನಲ್ಲಿ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ 12 ತಂಡಗಳು + ನೆದರ್ಲ್ಯಾಂಡ್ಸ್ ಸೇರಿ ಒಟ್ಟು 13 ತಂಡಗಳು ಲೀಗ್‌ನಲ್ಲಿ ಪಾಲ್ಗೊಳ್ಳುತ್ತವೆ.

ಅರ್ಹತೆ ಹೇಗೆ ನಿರ್ಧರಿಸಲಾಗುತ್ತದೆ?

ಅರ್ಹತೆ ಹೇಗೆ ನಿರ್ಧರಿಸಲಾಗುತ್ತದೆ?

ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ನಲ್ಲಿ ಗೆಲುವಿನ ಅಂಕಗಳನ್ನು ಒಟ್ಟು ಸೇರಿಸಿ 2023ರ ವಿಶ್ವಕಪ್‌ಗೆ ತಂಡಗಳ ಅರ್ಹತೆ ನಿರ್ಧರಿಸಲಾಗುತ್ತದೆ. ನೇರವಾಗಿ ಅರ್ಹತೆ ಗಿಟ್ಟಿಕೊಳ್ಳಲಾಗದ ತಂಡಗಳಿಗೆ 2023ರ ಜೂನ್ ಮತ್ತು ಜುಲೈನಲ್ಲಿ ಮತ್ತೆ ಕ್ವಾಲಿಫೈಯರ್ ಪಂದ್ಯಗಳನ್ನು ನಡೆಸಲಾಗುತ್ತದೆ.

ಭಾರತ ಯಾವ ಸ್ಥಾನದಲ್ಲಿದೆ?

ಭಾರತ ಯಾವ ಸ್ಥಾನದಲ್ಲಿದೆ?

ಈವರೆಗಿನ ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಪಾಯಿಂಟ್ಸ್‌ ಟೇಬಲ್‌ನಲ್ಲಿ ಭಾರತ 8ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 29 ಅಂಕ ಕಲೆ ಹಾಕಿದೆ. ಸ್ಲೋ ಓವರ್‌ ರೇಟ್‌ಗಾಗಿ ಭಾರತ 1 ಅಂಕ ಕಳೆದುಕೊಂಡಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಸದ್ಯ ಬಾಂಗ್ಲಾ (50), ಇಂಗ್ಲೆಂಡ್ (40), ಪಾಕಿಸ್ತಾನ್ (40), ಆಸ್ಟ್ರೇಲಿಯಾ (40), ನ್ಯೂಜಿಲೆಂಡ್ (30), ಅಫ್ಘಾನಿಸ್ತಾನ (30), ವೆಸ್ಟ್ ಇಂಡೀಸ್ (30), ಭಾರತ (30) ಕ್ರಮವಾಗಿ 1ರಿಂದ 8ನೇ ಸ್ಥಾನ ಪಡೆದುಕೊಂಡಿವೆ.

Story first published: Saturday, May 29, 2021, 19:04 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X