ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ವೇಗಿಗಳ ಪರಾಕ್ರಮ: ಈ ವರ್ಷದಲ್ಲಿ ವೇಗಿಗಳ ಸಾಧನೆ ಹೇಗಿದೆ!

How good have Indias fast bowlers been in Tests in 2019?

ಇತಿಹಾಸವನ್ನು ಗಮನಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಬೌಲಿಂಗ್ ವಿಭಾಗದಲ್ಲಿ ವೇಗಿಗಳನ್ನು ನೆಚ್ಚಿಕೊಂಡಿದ್ದೇ ಇಲ್ಲ. ವೇಗಿಗಳು ಸ್ಪಿನ್ ವಿಭಾಗಕ್ಕೆ ಸಹಾಯಕವಾಗುವ ರೀತಿಯಲ್ಲಷ್ಟೇ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ಉ ಭಾರತದ ಸ್ಪಿನ್‌ ವಿಭಾಗವೂ ಅಷ್ಟೇ ಗುಣಮಟ್ಟದ್ದಾಗಿತ್ತು. 60-70 ದಶಕದಿಂದಲೂ ಸ್ಪಿನ್ ಮಾಂತ್ರಿಕರೇ ಭಾರತ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು.

ಮಣಿಂದರ್ ಸಿಂಗ್, ನರೇಂದ್ರ ಹಿರ್ವಾನಿಯಿಂದ ಆರಂಭವಾಗಿ ಬಿಷನ್ ಸಿಂಗ್ ಬೇಡಿ ಇವರೆಲ್ಲಾ ಭಾರತೀಯ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದವರು. ಬಳಿಕ ಈ ಇದನ್ನು ಅನಿಲ್ ಕುಂಬ್ಳೆ ಮತ್ತೊಂದು ಸ್ಥರಕ್ಕೆ ಮುಟ್ಟಿಸಿದರು. ಕುಂಬ್ಳೆ ಸಾಧನೆ ಹರ್ಭಜನ್ ಸಿಂಗ್‌ರಂತಾ ಪ್ರತಿಭಾನ್ವಿತರು ತಂಡಕ್ಕೆ ಸೇರ್ಪಡೆಯಾಗಲು ಪ್ರೇರಣೆಯಾಯಿತು. ಇವರಿಬ್ಬರು ಸೇರಿ ಅಕ್ಷರಶಃ ಭಾರತೀಯ ಬೌಲಿಂಗ್ ವಿಭಾಗವನ್ನು ಆಳಿದ್ದರು.

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್

ಇನ್ನೂ ಎರಡ್ಮೂರು ಸೀಸನ್ ಹಿಂದೆಯೂ ಕೂಡ ಭಾರತೀಯ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರೇ ಟಿಸ್ಟ್‌ ಪಂದ್ಯಗಳಲ್ಲಿ ಮಿಂಚುತ್ತಿದ್ದರು. ಆದರಲ್ಲೂ ಭಾರತೀಯ ಸಂಪೂರ್ಣ ಹಿಡಿತವನ್ನು ಸಾಧಿಸುತ್ತಿದ್ದರು. ಆದರೆ ಈಗ ತಂಡದ ಬೌಲಿಂಗ್ ವಿಭಾಗದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಭಾರತೀಯ ವೇಗಿಗಳು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ ಇನ್ನಿಂಗ್ಸ್ನಲ್ಲಿ ಒಂದು ಎರಡು ವಿಕೆಟ್‌ಗಳು ಸ್ಪಿನ್ ವಿಭಾಗಕ್ಕೆ ಉರುಳಿದರೆ ಹೆಚ್ಚು ಅನ್ನುವಷ್ಟು.

ಹಾಗಾದರೆ ಭಾರತೀಯ ವೇಗಿಗಳು ಟೆಸ್ಟ್‌ನಲ್ಲಿ ಕಳೆದೊಂದು ವರ್ಷದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ ಅನ್ನೋದನ್ನು ಅಂಕಿಅಂಶಗಳ ಮೂಲಕ ನೋಡೋಣ..

ಇಶಾಂತ್ ಶರ್ಮಾ

ಇಶಾಂತ್ ಶರ್ಮಾ

ಇಶಾಂತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟು ಒಂದು ದಶಕವೇ ಆಗಿದೆ. ಜಹೀರ್ ಖಾನ್ ನಿವೃತ್ತಿಯ ಬಳಿಕ ವೇಗದ ವಿಭಾಗವನ್ನು ಮುನ್ನಡೆಸುವ ನಿರೀಕ್ಷೆಯಿತ್ತು. ಆದರೆ ತನಗೆ ತಕ್ಕುದಾದ ಜೊತೆಗಾರ ಸಿಗದೆ ತನ್ನ ಲಯವನ್ನೇ ಕಳೆದುಕೊಂಡು ಬಿಟ್ಟರು ಇಶಾಂತ್ ಶರ್ಮಾ. ಆದರೆ ಕಳೆದ 2018ರಲ್ಲಿ ಟೀಮ್ ಇಂಡಿಯಾಗೆ ವೇಗಿ ಜಸ್ಫ್ರೀತ್ ಬೂಮ್ರಾ ಕಾಲಿಟ್ಟರು. ಅದಾದ ಬಳಿಕ ಇಶಾಂತ್ ಲಕ್ ಬದಲಾಗಿ ಬಿಟ್ಟಿತು. ಈ ವರ್ಷವಂತೂ ಇಶಾಂತ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಈ ವರ್ಷದಲ್ಲಿ 6ಪಂದ್ಯಗಳನ್ನು ಆಡಿರುವ ಶರ್ಮಾ 25 ವಿಕೆಟ್ ಪಡೆದಿದ್ದಾರೆ. 15.56 ಸರಾಸರಿಯಲ್ಲಿ ವಿಕೆಟ್ ಕಿತ್ತಿರುವ ಈ ವೇಗಿ ಈ ವರ್ಷ 5/ ವಿಕೆಟ್‌ಗಳ ಎರಡುಗೊಂಚಲನ್ನು ತನ್ನಖಾತೆಗೆ ಹಾಕಿಕೊಂಡಿದ್ದಾರೆ.

ಮೊಹಮದ್ ಶಮಿ

ಮೊಹಮದ್ ಶಮಿ

ವೈಯಕ್ತಿಕ ಜೀವನದ ಬಗ್ಗೆ ಪತ್ನಿ ಮಾಡಿದ ಗಂಭೀರ ಆರೋಪಗಳಿಂದ ಮೊಹಮದ್ ಶಮಿ ಎಂಬ ಪ್ರತಿಭಾನ್ವಿತ ಆಟಗಾರನ ಕ್ರೀಡಾ ಬದುಕು ಮುಗಿದೇ ಹೋಗುತ್ತಾ ಎಂಬ ಆತಂಕ ಅಭಿಮಾನಿಗಳಿಗಿತ್ತು. ಆದರೆ ಈ ಆರೋಪಗಳಿಂದ ಹೊರಬಂದು ಅದ್ಭುತ ಪ್ರದರ್ಶನ ನೀಡಿ ಕಮಾಲ್ ಮಾಡತೊಡಗಿದ್ದಾರೆ. ಬೌಲಿಂಗ್ ದಂತಕತೆ ಡೇಲ್ ಸ್ಟೇಯ್ನ್ ಅವರೇ ಅತ್ಯುತ್ತಮ ವೇಗದ ಬೌಲರ್ ಎಂದು ಹಾಡಿಹೊಗಳಿದ್ದಾರೆ.

ಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆ

ಈ ವರ್ಷದಲ್ಲಿ 8 ಪಂದ್ಯಗಳನ್ನಾಡಿರುವ ಮೊಹಮ್ಮದ್ ಶಮಿ 16.66 ಸರಾಸರಿಯಲ್ಲಿ 33 ವಿಕೆಟ್ ಪಡೆದುಕೊಂಡಿದ್ದಾರೆ. ಕಳೆದ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದ ಸಂದರ್ಭದಲ್ಲಿ 5ವಿಕೆಟ್‌ಗಳಲ್ಲಿ 4 ಕ್ಲೀನ್ ಬೌಲ್ಡ್‌ ಆಗಿತ್ತು. ಇದು ಶಮಿ ಬೌಲಿಂಗ್ ನಿಖರತೆಗೆ ಸಾಕ್ಷಿಯಾಗಿದೆ .

ಉಮೇಶ್ ಯಾದವ್

ಉಮೇಶ್ ಯಾದವ್

ಬೂಮ್ರಾ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ. ಈ ವರ್ಷ 4 ಪಂದ್ಯಗಳನ್ನು ಆಡಿರುವ ಉಮೇಶ್ ಯಾದವ್ 23 ವಿಕೆಟ್ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ನಲ್ಲಿ ತಲಾ ಮೂರು ವಿಕೆಟ್ ಕಿತ್ತು ಮಿಂಚಿದ್ದರು. ಅದರಲ್ಲೂ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಕಿತ್ತು ಆಫ್ರಿಕನ್ನರ ಹೆಡೆಮುರಿಕಟ್ಟಿದ್ದರು. ಇನ್ನು ಈ ವರ್ಷಾಂತ್ಯವನ್ನು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಪಡೆಯುವುದರ ಮೂಲಕ ಸ್ಮರಣೀಯವಾಗಿಸಿಕೊಂಡಿದ್ದಾರೆ.

ಜಸ್ಫ್ರೀತ್ ಬೂಮ್ರಾ

ಜಸ್ಫ್ರೀತ್ ಬೂಮ್ರಾ

ಗಾಯದ ಸಮಸ್ಯೆಗೆ ತುತ್ತಾಗಿರುವ ಜಸ್ಪ್ರೀತ್ ಬೂಮ್ರಾ ಈ ವರ್ಷ ಅಂಗಳದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಕೇವಲ ಮೂರು ಟೆಸ್ಟ್‌ಗಳನ್ನು ಆಡಿರುವ ಈ ವೇಗಿ 13.14ರ ಸರಾಸರಿಯಲ್ಲಿ 14 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಹ್ಯಾಟ್ರಿಕ್ ಸೇರಿದಂತೆ 7 ರನ್‌ಗೆ 6 ವಿಕೆಟ್ ಹಾಗೂ 27 ರನ್‌ನೀಡಿ 6 ವಿಕೆಟ್‌ ಕಿತ್ತು ಅದ್ಭುತ ಪ್ರದರ್ಶನ ನೀಡಿದ್ದರು. ಗಾಯದ ಸಮಸ್ಯೆಯಿಂದಾಗಿ ಹೆಚ್ಚಿನ ಪಂದ್ಯವನ್ನು ಆಡದಿದ್ದರೂ ಭಾರತೀಯ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಹುರುಪು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Thursday, November 28, 2019, 18:12 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X