ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!

How well prepared is Team India for the World T20?

ಬೆಂಗಳೂರು, ಡಿಸೆಂಬರ್ 5: ಮುಂದಿನ ವರ್ಷ ಅಕ್ಟೋಬರ್ ವೇಳೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿಶ್ವದ ಬಲಿಷ್ಠ 16 ತಂಡಗಳು ಸೆಣಸಾಡಲಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಟೀಮ್ ಇಂಡಿಯಾಕ್ಕೂ ಈ ಟೂರ್ನಿಯಲ್ಲಿ ಗೆಲುವು ಪ್ರತಿಷ್ಠೆಯದ್ದು.

ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!

ಈಗಾಗಲೇ ವಿರಾಟ್ ಕೊಹ್ಲಿ ಪಡೆದ 2020ರ ವಿಶ್ವ ಟಿ20 ಗಮನದಲ್ಲಿಟ್ಟುಕೊಂಡು ಅದರತ್ತ ತಯಾರಿ ನಡೆಸುತ್ತಿದೆ. ಡಿಸೆಂಬರ್ 6ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ವಿಶ್ವಕಪ್‌ ತಯಾರಿ ನಿಟ್ಟಿನಲ್ಲಿ ದೇಸಿ ತಂಡಕ್ಕೆ ನೆರವಾಗಲಿದೆ.

ರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟ

ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?, ಟೀಮ್ ಇಂಡಿಯಾದ ಬಲಾಬಲಗಳೇನು?, ತಂತ್ರಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಕುತೂಹಲಕಾರಿ ಅಂಶಗಳಿವೆ.

ವಿಶ್ವಕಪ್‌ಗೂ ಮುನ್ನ ಕೇವಲ 11 ಪಂದ್ಯಗಳು

ವಿಶ್ವಕಪ್‌ಗೂ ಮುನ್ನ ಕೇವಲ 11 ಪಂದ್ಯಗಳು

2020ರ ವಿಶ್ವಕಪ್‌ಗೂ ಮುನ್ನ ಭಾರತ ಕೇವಲ 11 ಟಿ20ಐ ಪಂದ್ಯಗಳನ್ನು ಆಡಲಿದೆ. ಅಂದರೆ, ಭಾರತಕ್ಕೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 3 ಪಂದ್ಯಗಳು, ಭಾರತಕ್ಕೆ ಶ್ರೀಲಂಕಾ ಪ್ರವಾಸದಲ್ಲಿ 3 ಪಂದ್ಯಗಳು ಮತ್ತು ನ್ಯೂಜಿಲೆಂಡ್‌ಗೆ ಭಾರತದ ಪ್ರವಾಸ ಸರಣಿಯಲ್ಲಿ 5 ಪಂದ್ಯಗಳು. ಹೀಗೆ ಇನ್ನುಳಿದ 11 ಪಂದ್ಯಗಳನ್ನು ಆಧರಿಸಿ ಭಾರತ, ವಿಶ್ವಕಪ್‌ಗಾಗಿ ಬಲಿಷ್ಠ ತಂಡವನ್ನು ನಿರ್ಧರಿಸಬೇಕಿದೆ, ತಯಾರಿ ಮುಗಿಸಬೇಕಿದೆ.

ಬ್ಯಾಟಿಂಗ್ ಒಳ್ಳೆದಾ? ಬೌಲಿಂಗ್ ಒಳ್ಳೆದಾ?

ಬ್ಯಾಟಿಂಗ್ ಒಳ್ಳೆದಾ? ಬೌಲಿಂಗ್ ಒಳ್ಳೆದಾ?

ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತ ಚೇಸಿಂಗ್‌ನಲ್ಲಿ ಗೆಲುವು ದಾಖಲಿಸಿದ್ದು ಹೆಚ್ಚು. 2017ರ ಆರಂಭದಲ್ಲಿ ಎಂಎಸ್ ಧೋನಿ ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ, ಭಾರತ ಒಟ್ಟು 45 ಟಿ20ಐ ಪಂದ್ಯಗಳನ್ನಾಡಿದೆ. ಇದರಲ್ಲಿ 30ರಲ್ಲಿ ಗೆಲುವು, 14ರಲ್ಲಿ ಸೋಲು ಕಂಡಿದೆ. ಸೋಲು ಕಂಡ 14 ಪಂದ್ಯಗಳಲ್ಲಿ 10ರಲ್ಲಿ ಸೋತಿದ್ದು ಮೊದಲು ಬ್ಯಾಟಿಂಗ್ ಮಾಡಿದ್ದರಲ್ಲಿ. ಅಂದರೆ ಭಾರತ ಈ ಬಾರಿ ಮೊದಲು ಬ್ಯಾಟಿಂಗ್ ಮಾಡಬೇಕಾಗಿ ಬಂದರೆ ಎದುರಾಳಿಗೆ ಸವಾಲಿನ ರನ್ ಗುರಿ ನೀಡಲೇಬೇಕು.

ಸ್ಟ್ರಾಂಗ್-ವೀಕ್ ಪಾಯಿಂಟ್ಸ್

ಸ್ಟ್ರಾಂಗ್-ವೀಕ್ ಪಾಯಿಂಟ್ಸ್

ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮ್ಯಾಚ್ ವಿನ್ನರ್ ಆಗಬಲ್ಲರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ಟಿ20 ವಿಚಾರದಲ್ಲಿ ಧವನ್ ತೆಗೆದುಕೊಂಡರೆ, ಗಬ್ಬರ್ ಸಿಂಗ್ ಅವರು ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿಯಷ್ಟು ಪ್ರಭಾವಶಾಲಿಯಲ್ಲ. ಹೀಗಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕೆಎಲ್ ರಾಹುಲ್‌ಗೆ ಹೆಚ್ಚು ಅವಕಾಶವಿದೆ. ಅವಕಾಶವನ್ನು ರಾಹುಲ್ ಹೇಗೆ ಬಳಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ನಂ.4ಕ್ಕೆ ದಿಟ್ಟ ಬ್ಯಾಟ್ಸ್‌ಮನ್ ಯಾರು?

ನಂ.4ಕ್ಕೆ ದಿಟ್ಟ ಬ್ಯಾಟ್ಸ್‌ಮನ್ ಯಾರು?

ಏಕದಿನದಲ್ಲಿ 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತ ಯಾರೆಂದು ಕಂಡುಹುಡುಕುವಲ್ಲಿ ಭಾರತ ಎಡವಿತ್ತು. ಕೆಎಲ್ ರಾಹುಲ್, ರಿಷಬ್ ಪಂತ್, ವಿಜಯ್ ಶಂಕರ್ ಇವರೆಲ್ಲ ಈ ಬ್ಯಾಟಿಂಗ್ ಆರ್ಡರ್‌ನಲ್ಲಿ ಅದೃಷ್ಟ ಪರೀಕ್ಷಿಸಿದ್ದಾಗಿದೆ. ಆದರೆ ಟಿ20ಯಲ್ಲಿ 4ನೇ ಕ್ರಮಾಂಕಕ್ಕೆ ಯಾರು ಹೆಚ್ಚು ಸೂಕ್ತ? ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ಐಯ್ಯರ್ ಅಥವಾ ಮನೀಷ್ ಪಾಂಡೆ ಈ ಪ್ರಭಾವಶಾಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಸೂಕ್ತರೆನಿಸುತ್ತಾರೆ.

ಬೌಲಿಂಗ್‌ನಲ್ಲಿ ಭಾರತದ ಬಲಾಬಲ

ಬೌಲಿಂಗ್‌ನಲ್ಲಿ ಭಾರತದ ಬಲಾಬಲ

ನಾಗ್ಪುರ್‌ನಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಟಿ20ಯಲ್ಲಿ ದೀಪಕ್ ಚಹಾರ್ ವಿಶ್ವ ದಾಖಲೆಗಾಗಿ ಗಮನ ಸೆಳೆದಿದ್ದರು. ಅಂದು ನಾಯಕರಾಗಿದ್ದ ರೋಹಿತ್ ಶರ್ಮಾ, ಚಹಾರ್ ಅವರ ಸಾಮರ್ಥ್ಯವನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಚಹಾರ್ ಅಂದಿನ ಪಂದ್ಯದಲ್ಲಿ 7 ರನ್‌ಗೆ 6 ವಿಕೆಟ್ ಮುರಿದು ಬಾಂಗ್ಲಾ ಟೈಗರ್ಸ್ ಕಾಡಿದ್ದರು. ಇನ್ನು ಭಾರತ ತಂಡದಲ್ಲಿರುವ ಚೈನಾಮನ್ ಕುಲದೀಪ್ ಯಾದವ್, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಮತ್ತು ವೇಗಿ ಜಸ್‌ಪ್ರೀತ್‌ ಬೂಮ್ರಾ ಕೂಡ ಬೌಲಿಂಗ್ ವಿಭಾಗದಲ್ಲಿ ತಂಡಕ್ಕೆ ಬಲವಾಗಬಲ್ಲರು.

Story first published: Thursday, December 5, 2019, 13:25 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X