ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ಬೌಲರ್‌ಗಳಿಗೆ ಸರಿಸಾಟಿ ಆಗದ ರಾಜಸ್ಥಾನಕ್ಕೆ ಸೋಲು

Hyderabad won by 11 runs against Rajasthan team

ಜೈಪುರ, ಏಪ್ರಿಲ್ 29: ಕಡಿಮೆ ಮೊತ್ತ ಸ್ಕೋರ್‌ಬೋರ್ಡ್‌ ಮೇಲಿದ್ದರೂ ಸಹ ತಮ್ಮ ತಂಡವನ್ನು ಹೇಗೆ ಗೆಲ್ಲಿಸಿಕೊಳ್ಳ ಬೇಕು ಎಂಬ ಕಲೆ ಹೈದರಾಬಾದ್ ಬೌಲರ್‌ಗಳಿಗೆ ಚೆನ್ನಾಗಿ ಅರಿವಿರುವಂತಿದೆ. ಮೊನ್ನೆಯಷ್ಟೆ 117 ರನ್‌ಗಳ ಕಡಿಮೆ ಮೊತ್ತವನ್ನೂ ಕಾಯ್ದುಕೊಂಡು 87 ರನ್‌ಗಳಿಗೆ ಎದುರಾಳಿ ತಂಡವನ್ನು ಆಲ್‌ಔಟ್ ಮಾಡಿದ ಹೈದರಾಬಾದ್ ತಂಡ ಇಂದು ಸಹ ಅದನ್ನೇ ಪುನರಾವರ್ತಿಸಿದೆ.

ಸಾಧಾರಣ ಎನ್ನಬಹುದಾದ 152 ರನ್‌ಗಳನ್ನು ಚೇಸ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ಸ್‌ ತಂಡವನ್ನು 20 ಓವರ್‌ಗಳಲ್ಲಿ 140 ರನ್‌ಗಳಿಗೆ ಕಟ್ಟಿಹಾಕಿದ ಹೈದರಾಬಾದ್ ತಂಡ 11 ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ.

ರಾಜಸ್ಥಾನ ಪರ ಕೊನೆಯ ವರೆಗೂ ಹೋರಾಟ ನಡೆಸಿದರೂ ತಂಡದ ನಾಯಕ ಅಜಿಂಕ್ಯಾ ರಹಾನೆ (65) ತಂಡವನನ್ನು ಗೆಲ್ಲಿಸಲಾಗಲಿಲ್ಲ. ಸಮತೋಲಿತವಾಗಿ ಬೌಲಿಂಗ್ ಮಾಡಿದ ಹೈದರಾಬಾದ್ ತಂಡದ ಬೌಲರ್‌ಗಳು ರಾಜಸ್ಥಾನ ತಂಡದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕಾಲ ಸ್ಕ್ರೀಜ್‌ನಲ್ಲಿ ಉಳಿಯದಂತೆ ನೋಡಿಕೊಂಡರು.

ಹೈದರಾಬಾದ್ ಪರ ಸಿದ್ದಾರ್ಥ್‌ ಕೌಲ್ 2 ವಿಕೆಟ್, ಸಂದೀಪ್ ಶರ್ಮಾ, ಬಸಿಲ್ ತಂಪಿ, ರಶೀದ್ ಖಾನ್, ಯೂಸಫ್ ಪಠಾಣ್ ಅವರುಗಳು ತಲಾ ಒಂದು ವಿಕೆಟ್ ಪಡೆದರು. ಸಂದೀಪ್ ಶರ್ಮಾ ನಾಲ್ಕು ಓವರ್‌ನಲ್ಲಿ ನೀಡಿದ್ದು 15 ರನ್ ಮಾತ್ರ.

Story first published: Sunday, April 29, 2018, 19:53 [IST]
Other articles published on Apr 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X