ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಚಾನಕ್ ಆಗಿ ಕ್ರಿಕೆಟರ್ ಆದೆ, ಕನಸಿನಲ್ಲಿ ಬದುಕುತ್ತಿದ್ದೇನೆ: ಆರ್ ಅಶ್ವಿನ್

I Accidentally Became A Cricketer, Living My Dream: Ashwin

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನಿಡುವ ಮೂಲಕ ವಿಶೇಷ ಮೈಲಿಗಲ್ಲನ್ನು ದಾಟಿದ್ದಾರೆ. ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಮೈಲಿಗಲ್ಲನ್ನು ಅತ್ಯಂತ ವೇಗವಾಗಿ ತಲುಪಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ. ಈ ವಿಶೇಷ ಸಾಧನೆಯನ್ನು ಮಾಡಿದ ಸಂತಸದಲ್ಲಿರುವ ಆರ್ ಅಶ್ವಿನ್ ತಾನು ಅಚಾನಕ್ ಆಗಿ ವೃತ್ತಿಪರ ಕ್ರಿಕೆಟಿಗನಾದೆ ಎಂದಿದ್ದಾರೆ.

"ನಾನು ಅಚಾನಕ್ ಆಗಿ ಕ್ರಿಕೆಟಿಗನಾಗಿ ಬದಲಾದ ಕ್ರಿಕೆಟ್ ಪ್ರೇಮಿಯಾಗಿದ್ದೇನೆ. ನಾನೀಗ ನನ್ನ ಕನಸಿನ ಲೋಕದಲ್ಲಿ ಜೀವಿಸುತ್ತಿದ್ದೇನೆ ಎಂದು ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ. ನಾನು ಟೀಮ್ ಇಂಡಿಯಾದ ಜರ್ಸಿಯನ್ನು ತೊಡಲಿದ್ದೇನೆ ಮತ್ತು ಭಾರತದ ಪರವಾಗಿ ಆಡಲಿದ್ದೇನೆ ಎಂದು ಊಹಿಸಿಯೂ ಇರಲಿಲ್ಲ" ಎಂದಿದ್ದಾರೆ.

ಟೀಮ್ ಇಂಡಿಯಾದ ಆಲ್‌ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆಟೀಮ್ ಇಂಡಿಯಾದ ಆಲ್‌ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆ

"ಪ್ರತಿ ಬಾರಿ ತಂಡದ ಪರವಾಗಿ ಉತ್ತಮ ಪ್ರದರ್ಶನವನ್ನು ನೀಡಿದ ಬಳಿಕ ನಾನು ನನಗೆ ಆರ್ಶಿದಿಸಲಾಗುತ್ತಿದೆ ಎಂದು ಭಾವಿಸುತ್ತಿದ್ದೆ. ಆದರೆ ಕೊರೊನಾ ವೈರಸ್‌ನ ಸಮಯದಲ್ಲಿ ನಾನು ಭಾರತದ ಪರವಾಗಿ ಆಡಲು ಎಷ್ಟು ಅದೃಷ್ಟವಂತ ಎಂದು ಅನುಭವವಾಯಿತು" ಎಂದು ಆರ್ ಅಶ್ವಿನ್ ಹೇಳಿದ್ದಾರೆ.

"ಐಪಿಎಲ್‌ನ ಬಳಿಕವೂ ನಾನು ಆಸ್ಟ್ರೇಲಿಯಾದಲ್ಲಿ ಆಡಬಹುದು ಎಂದು ಭಾವಿಸಿರಲಿಲ್ಲ. ಅದಕ್ಕಾಗಿಯೇ ನಾನು ಹೇಳಿದ್ದು ಎಲ್ಲವೂ ನನಗೆ ಉಡುಗೊರೆಯ ರೂಪದಲ್ಲಿ ಬಂದಿತ್ತು. ನಾನು ಇಷ್ಟಪಡುವ ಆಟವನ್ನು ಆಡುವ ಮೂಲಕ ನನಗೆ ಸಾಕಷ್ಟು ಪ್ರಶಸ್ತಿಗಳು ದೊರೆಯುವಂತಾಗಿದೆ" ಎಂದು ಆರ್ ಅಶ್ವಿನ್ ಹೇಳಿದ್ದಾರೆ.

ಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿ

ಹಳೆಯ ಸಾಕಷ್ಟು ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಆಟವನ್ನು ಹೆಚ್ಚಿನ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ವೈಯ್ಯಕ್ತಿಕ ಶ್ರೇಷ್ಠ ಪ್ರದರ್ಶನಗಳ ಸಾಕಷ್ಟು ವಿಡಿಯೋಗಳನ್ನು ನಾನು ಲಾಕ್‌ಡೌನ್ ಸಂದರ್ಭದಲ್ಲಿ ನೋಡಿರುವುದು ಹೆಚ್ಚಿನ ಲಾಭವಾಯಿತು ಎಂದು ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ

Story first published: Friday, February 26, 2021, 21:53 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X