ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಧೋನಿಯ ಅಭಿಮಾನಿ ಎಂದ ಬಾಂಗ್ಲಾದೇಶದ ಟಿ20 ನಾಯಕ

I Am A Huge Fan Of Ms Dhoni, Want To Control Games Like Him: Mahmudullah

ಬಾಂಗ್ಲಾದೇಶದ ಆಲ್‌ರೌಂಡರ್ ಮಹ್ಮುದುಲ್ಲಾ ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ತನ್ನ ಫೇವರೀಟ್ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಧೋನಿಯ ಆಟವೆಂದರೆ ನನಗೆ ತುಂಬಾ ಇಷ್ಟ, ಆತನ ರೀತಿಯಲ್ಲಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಧೋನಿಯ ದೊಡ್ಡ ಅಭಿಮಾನಿ ನಾನು ಎಂದು ಎಂದು ಮಹ್ಮುದುಲ್ಲಾ ಹೇಳಿದ್ದಾರೆ. ಆಟದಲ್ಲಿ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುವ ರೀತಿಯನ್ನು ಧೋನಿಯಿಂದ ಕಲಿಯುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಮಹ್ಮುದುಲ್ಲಾ ಹೇಳಿದ್ದಾರೆ.

ಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿಎಂಜಲಿನ ಬಳಕೆ ನಿಷೇಧ ಸಾಧ್ಯತೆ: ಪಾಲನೆ ಕಷ್ಟ ಸಾಧ್ಯ ಎಂದ ಆಸಿಸ್ ಮಾಜಿ ವೇಗಿ

ಇದೇ ಸಂದರ್ಭದಲ್ಲಿ ಮಹ್ಮುದುಲ್ಲಾ ಧೋನಿ ತನ್ನ ಆಟದ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 90ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ನೊಂದಿಗೆ 50ಲ್ಲಿಂತ ಹೆಚ್ಚಿನ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುವುದು ಸುಲಭದ ಮಾತಲ್ಲ ಎಂದು ಇದೇ ಸಂದರ್ಭದಲ್ಲಿ ಧೋನಿ ಬ್ಯಾಟಿಂಗ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ನಾನೂ ಕೂಡ ಧೋನಿ ರೀತಿಯಲ್ಲೇ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತೇನೆ. ಹಾಗಾಗಿ ಧೋನಿ ಆಟದ ಮೇಲೆ ನಿಯಂತ್ರಣ ಸಾಧಿಸುವ ರೀತಿ ಮತ್ತು ಕೊನಿಯವರೆಗೂ ಆಟದಲ್ಲಿ ಹಿಡಿತ ಮುಂದುವರಿಸುವ ರೀತಿಯನ್ನು ಕಲಿಯುತ್ತೇನೆ ಎಂದು ಮಹ್ಮುದುಲ್ಲಾ ಹೇಳಿದ್ದಾರೆ. ಜೊತೆಗೆ ಧೋನಿ ನನ್ನ ಕ್ರಿಕೆಟ್ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದ್ದಾರೆ ಎಂದಿದ್ದಾರೆ.

ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?

ಬಾಂಗ್ಲಾದೇಶ ತಂಡವನ್ನು ಮಹ್ಮುದುಲ್ಲಾ ಚುಟುಕು ಮಾದರಿಯಲ್ಲಿ ಮುನ್ನಡೆಸುತ್ತಿದ್ದಾರೆ. ಶಕಿಬ್ ಅಲ್ ಹಸನ್ ನಿಷೇಧಕ್ಕೆ ಒಳಪಟ್ಟ ನಂತರ ಮಹ್ಮುದುಲ್ಲಾ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿದ ಮೊದಲ ಬಾಂಗ್ಲಾದೇಶ ನಾಯಕ ಎಂಬ ಹೆಗ್ಗಳಿಕೆಗೆ ಮಹಮ್ಮದುಲ್ಲಾ ಪಾತ್ರರಾಗಿದ್ದಾರೆ.

Story first published: Sunday, May 24, 2020, 17:25 [IST]
Other articles published on May 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X