ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ: ವಿಶ್ವ ನಂ.1 ಡಾವಿಡ್ ಮಲನ್

I am committed to play in IPL UAE leg, says Dawid Malan

ಲಂಡನ್: ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಡಾವಿಡ್ ಮಲನ್ ತಾನು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡಲು ಬದ್ದನಾಗಿರುವುದಾಗಿ ಹೇಳಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದಲ್ಲಿರುವ ಮಲನ್ ಮುಂಬರಲಿರುವ ಐಪಿಎಲ್ 2021ರ ದ್ವಿತೀಯ ಹಂತದ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್‌ 15ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಶುರುವಾಗಲಿವೆ.

ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಸರಿದೂಗಿಸಿದ ಜೋ ರೂಟ್ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಸರಿದೂಗಿಸಿದ ಜೋ ರೂಟ್

ಐಪಿಎಲ್ 2021ರ ದ್ವಿತೀಯ ಹಂತದಲ್ಲಿ ಮೊದಲು ಪಾಲ್ಗೊಳ್ಳುತ್ತೇನೆ. ಆ ಬಳಿಕ ಟಿ20 ವಿಶ್ವಕಪ್‌ ಮತ್ತು ಆ್ಯಷಸ್ ಬಗ್ಗೆ ಯೋಚಿಸುತ್ತೇನೆ ಎಂದು ಡಾವಿಡ್ ಮಲನ್ ತಿಳಿಸಿದ್ದಾರೆ. ಸದ್ಯ ಐಸಿಸಿ ಟಿ20ಐ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಮಲನ್, ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಅರ್ಧ ಶತಕ ಬಾರಿಸಿದ್ದರು.

ಈ ಕ್ಷಣದಲ್ಲಿ ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ

ಈ ಕ್ಷಣದಲ್ಲಿ ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ

"ಈ ಸಂದರ್ಭದಲ್ಲಿ ನಾವು ಗ್ಯಾರಂಟಿ ಕೊಡಬಹುದಾದ ಟೂರ್ನಿಯೆಂದರೆ ಅದು ಐಪಿಎಲ್. ನಾವು ವಿಶ್ವಕಪ್‌ಗೆ ಹೋಗುತ್ತೇವಾ ಅಥವಾ ನಾವು ಆ್ಯಷಸ್‌ನಲ್ಲಿ ಆಡ್ತೇವಾ ಅನ್ನೋದು ಗೊತ್ತಿಲ್ಲ. ಆದರೆ ಈ ಸಂದರ್ಭ ನಮ್ಮನ್ನು ಈ ಕಠಿಣ ಸಂದರ್ಭದತ್ತ ತಳ್ಳಿದೆ. ಎಲ್ಲಾ ಟೂರ್ನಿಗಳಲ್ಲೂ ಆಡೋದು ಸಾಧ್ಯವಾಗಬಹುದು. ಆದರೆ ನಾನು ಈ ಕ್ಷಣದಲ್ಲಿ ಐಪಿಎಲ್‌ನಲ್ಲಿ ಆಡಲು ಬದ್ದನಾಗಿದ್ದೇನೆ. ಹೌದು ಈ ಕ್ಷಣದಲ್ಲಿ ಈ ಒಂದೇ ಯೋಚನೆ ನನ್ನ ತಲೆಯಲ್ಲಿದೆ. ಸದ್ಯಕ್ಕಂತೂ ಈ ನಿರ್ಧಾರದಲ್ಲಿ ಬೇರೆ ಬದಲಾವಣೆಯಿಲ್ಲ. ಆದರೆ ಮುಂದೆ ಬಹುಶಃ ಈ ಬಗ್ಗೆ ಮರುಯೋಚಿಸಬೇಕಾಗಬಹುದು," ಎಂದು ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್‌ ಪಂದ್ಯ ದ್ವಿತೀಯ ದಿನದಾಟದ ವೇಳೆ ಸುದ್ದಿಗಾರರನ್ನುದ್ದೇಶಿಸಿ ಡಾವಿಡ್ ಮಲನ್ ಹೇಳಿದ್ದಾರೆ.

ಟಿ20ಐ ಕ್ರಿಕೆಟ್‌ನಲ್ಲಿ ಅದ್ಭುತ ಸ್ಟ್ರೈಕ್ ರೇಟ್

ಟಿ20ಐ ಕ್ರಿಕೆಟ್‌ನಲ್ಲಿ ಅದ್ಭುತ ಸ್ಟ್ರೈಕ್ ರೇಟ್

ಸದ್ಯದ ಟಿ20ಐ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಡಾವಿಡ್ ಮಲನ್ ಅಗ್ರ ಶ್ರೇಯಾಂಕದಲ್ಲಿದ್ದಾರೆ. 841 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮಲನ್ ಮೊದಲ ಸ್ಥಾನ ಆವರಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಝಾಮ್ (819 ಪಾಯಿಂಟ್ಸ್), ತೃತೀಯ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ (774), ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಐದನೇ ಸ್ಥಾನದಲ್ಲಿ ಭಾರತದ ವಿರಾಟ್ ಕೊಹ್ಲಿ ಇದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ 33ರ ಹರೆಯದ ಮಲನ್ 16 ಟೆಸ್ಟ್‌ ಪಂದ್ಯಗಳಲ್ಲಿ 794 ರನ್, 6 ಏಕದಿನ ಪಂದ್ಯಗಳಲ್ಲಿ 158 ರನ್, 30 ಟಿ20ಐ ಪಂದ್ಯಗಳಲ್ಲಿ 1123 ರನ್, 1 ಐಪಿಎಲ್ ಪಂದ್ಯದಲ್ಲಿ 26 ರನ್ ಗಳಿಸಿದ್ದಾರೆ. ಟಿ20ಐನಲ್ಲಿ 1 ಶತಕ, 11 ಅರ್ಧ ಶತಕಗಳ ಬಾರಿಸಿರುವ ಮಲನ್ 43.19ರ ಸರಾಸರಿಯಲ್ಲಿ 139.33 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಆತಿಥೇಯ ಇಂಗ್ಲೆಂಡ್‌ಗೆ ಭರ್ಜರಿ ಮುನ್ನಡೆ

ಆತಿಥೇಯ ಇಂಗ್ಲೆಂಡ್‌ಗೆ ಭರ್ಜರಿ ಮುನ್ನಡೆ

ಆರಂಭಿಕ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್ ಭರ್ಜರಿ ಮುನ್ನಡೆ ಗಳಿಸಿದೆ. ಗುರುವಾರ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 129 ಓವರ್‌ಗೆ 8 ವಿಕೆಟ್ ಕಳೆದು 423 ರನ್ ಗಳಿಸಿ 345 ರನ್ ಮುನ್ನಡೆಯಲ್ಲಿತ್ತು. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 24 ರನ್‌ ಬಾರಿಸಿದ್ದರು. ಓವರ್‌ಟನ್ ಮತ್ತು ರಾಬಿನ್ಸನ್ ಕ್ರೀಸ್‌ನಲ್ಲಿದ್ದರು. ಇಂಗ್ಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ 1, ಮೊಹಮ್ಮದ್ ಶಮಿ 3, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ 2 ವಿಕೆಟ್ ಪಡೆದಿದ್ದರು. ಐದು ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ ಭಾರತ ಈಗಾಗಲೇ 1-0ಯ ಮುನ್ನಡೆಯಲ್ಲಿದೆ. ಆರಂಭಿಕ ಟೆಸ್ಟ್‌ ಡ್ರಾ ಆಗಿದ್ದರೆ, ದ್ವಿತೀಯ ಟೆಸ್ಟ್‌ನಲ್ಲಿ ಭಾರತ 151 ರನ್ ಜಯ ಗಳಿಸಿತ್ತು. ಆರಂಭಿಕ ಇನ್ನಿಂಗ್ಸ್‌ನಲ್ಲಿ ಆಂಗ್ಲರು ಮೇಲುಗೈ ಸಾಧಿಸಿರುವುದರಿಂದ ತೃತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.

ಸಿರಾಜ್ ಹಾಗು ಕೊಹ್ಲಿ ಸೇರಿ ಪಂತ್ ಮಾತಿಗೆ ವಿರುದ್ಧವಾಗಿ ನಡೆದಾಗ | Oneindia Kannada
ಐಪಿಎಲ್ ದ್ವಿತೀಯ ಹಂತದ ಪ್ರಮುಖ ಮಾಹಿತಿ

ಐಪಿಎಲ್ ದ್ವಿತೀಯ ಹಂತದ ಪ್ರಮುಖ ಮಾಹಿತಿ

ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಭಾರತದಲ್ಲಿ ನಡೆದಿದ್ದ ಆರಂಭಿಕ ಹಂತದ ಐಪಿಎಲ್ ವೇಳೆ ಕೋವಿಡ್ ಭೀತಿ ಹೆಚ್ಚಿದ್ದರಿಂದ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಿರಲಿಲ್ಲ. ಆದರೆ ಯುಎಇ ಟೂರ್ನಿ ವೇಳೆ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಉತ್ತಮ ಸ್ಥಿತಿಯಲ್ಲಿಲ್ಲ. ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ 21ರಂದು ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ಸವಾಲು ಸ್ವೀಕರಿಸಲಿದೆ.

ಯುಎಇ ತಲುಪಿದ ಮುಂಬೈ, ಚೆನ್ನೈ ತಂಡಗಳು
ಮುಂಬರುವ ಐಪಿಎಲ್‌ಗಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಗಳೂ ಯುಎಇ ತಲುಪಿವೆ. ಅದ್ಯ ಎರಡೂ ತಂಡಗಳೂ ಅಭ್ಯಾಸ ನಡೆಸುತ್ತಿವೆ. ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲೂ ತಂಡ ಯುಎಇಗೆ ತಲುಪಿರುವ ಬಗ್ಗೆ ಫೋಟೋಗಳನ್ನು ಹಾಕಿಕೊಳ್ಳಲಾಗಿದೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಾಕಿಕೊಳ್ಳಲಾಗಿದ್ದು, ಇದರಲ್ಲಿ, 'ಮುಂಬೈ ತಂಡ ಯುಎಇಗೆ ತಲುಪಿದೆ' ಎಂದು ಬರೆದುಕೊಳ್ಳಾಗಿದೆ. ಐಪಿಎಲ್ 2ನೇ ಹಂತದ ಪಂದ್ಯಗಳ ವೇಳೆ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿರುವುದರಿಂದ ಸದ್ಯ ಎರಡೂ ತಂಡಗಳು ಯುಎಇಗೆ ತಲುಪಿದೆ. ಸಿಎಸ್‌ಕೆ ಕೂಡ ತಂಡ ಯುಎಇ ತಲುಪಿರುವುದಕ್ಕೆ ಪೋಸ್ಟ್‌ಗಳನ್ನು ಹಾಕಿಕೊಂಡಿದೆ. ತಂಡದ ಪ್ರಮುಖ ಆಲ್ ರೌಂಡರ್ ಸುರೇಶ್ ರೈನಾ ದುಬೈಯಲ್ಲಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದರು.

Story first published: Friday, August 27, 2021, 19:49 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X