ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾವು ತಿರುಗಿ ಬೀಳುವ ಭಾರತಕ್ಕೆ ತಯಾರಿ ನಡೆಸುತ್ತಿದ್ದೇವೆ': ಪೌಲ್ ಕಾಲಿಂಗ್‌ವುಡ್

I am sure we are certainly preparing ourselves for an Indian bounce back, says Paul Collingwood
ಟೀಮ್ ಇಂಡಿಯಾವನ್ನ ಹೇಗೆ ಕಟ್ಟಿಹಾಕ್ಬೇಕು ಅಂತ ನಮ್ಗೆ ಚನ್ನಾಗಿ ಗೊತ್ತು | Oneindia Kannada

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಸಹಿತ 76 ರನ್ ಸೋಲನುಭವಿಸಿದೆ. ಸೋಲಿನ ಮುಖಭಂಗದಲ್ಲಿರುವ ವಿರಾಟ್ ಕೊಹ್ಲಿ ಪಡೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಆಂಗ್ಲರಿಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಆದರೆ ಭಾರತ ಎದುರಿಸಲು ನಾವೂ ತಯಾರಿ ನಡೆಸುತ್ತಿದ್ದೇವೆ ಎಂದು ಇಂಗ್ಲೆಂಡ್ ಸಹ ಕೋಚ್ ಪೌಲ್ ಕಾಲಿಂಗ್‌ವುಡ್ ಹೇಳಿದ್ದಾರೆ.

ಪಿಕೆಎಲ್ 2021: ಹರಾಜಾದ ಎಲ್ಲಾ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿಪಿಕೆಎಲ್ 2021: ಹರಾಜಾದ ಎಲ್ಲಾ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ ತಂಡ ಅಲ್ಲೂ ಒಂದು ಪಂದ್ಯದಲ್ಲಿ ಹೀನಾಯ ಸೋಲನುಭವಿಸಿತ್ತು. ಆಗ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, 'ಭಾರತೀಯರನ್ನು ಯಾವತ್ತಿಗೂ ಹಗುರವಾಗಿ ಭಾವಿಸಬೇಡಿ' ಎಂದಿದ್ದರು. ಲ್ಯಾಂಗರ್ ಈ ಮಾತಿನ ಬೆನ್ನಲ್ಲೇ ಭಾರತೀಯ ತಂಡ ಗಬ್ಬಾದಲ್ಲಿನ ಟೆಸ್ಟ್‌ ಪಂದ್ಯ ಗೆದ್ದು ಟೆಸ್ಟ್‌ ಸರಣಿಯನ್ನು 2-1ರಿಂದ ಗೆದ್ದು ಲ್ಯಾಂಗರ್ ಮಾತು ನಿಜವಾಗಿಸಿತ್ತು.

ಭಾರತ ತಂಡ ಒಂದು ಪಂದ್ಯ ಸೋತರೆ ಮರು ಪಂದ್ಯದಲ್ಲಿ ತಿರುಗಿ ಬೀಳಲು ಸರ್ವ ಪ್ರಯತ್ನ ನಡೆಸುತ್ತದೆ ಅನ್ನೋ ಸತ್ಯ ಸಂಗತಿ ಇಂಗ್ಲೆಂಡ್‌ ತಂಡಕ್ಕೂ ಗೊತ್ತು. ಆಂಗ್ಲ ಕೋಚ್ ಪೌಲ್ ಕಾಲಿಂಗ್‌ವುಡ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಭಾರತ ತಿರುಗಿ ಬೀಳುವುದಕ್ಕೂ ನಾವು ಸಿದ್ಧವಾಗಿದ್ದೇವೆ. ತಿರುಗಿ ಬೀಳುವ ಭಾರತ ಕಟ್ಟಿ ಹಾಕಲು ನಾವು ತಯಾರಿ ನಡೆಸಿಕೊಳ್ಳುತ್ತಿದ್ದೇವೆ ಎಂದು ಕಾಲಿಂಗ್‌ವುಡ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಸುಮ್ಮನಿರಿಸಿದರೆ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ: ಜೋ ರೂಟ್ವಿರಾಟ್ ಕೊಹ್ಲಿಯನ್ನು ಸುಮ್ಮನಿರಿಸಿದರೆ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ: ಜೋ ರೂಟ್

"ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌಲ್, "ಭಾರತ ತಂಡ ತಿರುಗಿ ಬೀಳುತ್ತಾ? ತಿರುಗಿ ಬೀಳುವ ಭಾರತವನ್ನು ಎದುರಿಸಲು ನಾವು ಸರಿಯಾಗಿ ತಯಾರಿ ನಡೆಸುತ್ತಿದ್ದೇವೆ ಅಂತ ನನಗೆ ಭರವಸೆಯಿದೆ. ನಮಗೆ ಗೊತ್ತು ಅತ್ಯುತ್ತಮ ಗುಣಮಟ್ಟದ ಭಾರತ ತಂಡ ತಿರುಗಿಬೀಳಲು ಕಂಡಿತಾ ಎದುರು ನೋಡುತ್ತಿರುತ್ತದೆಯೆಂದು. ನಾವೂ ಮುಂದಿನ ಯುದ್ಧಕ್ಕೆ 100 ಶೇ. ಸಿದ್ಧರಾಗಿದ್ದೇವೆ ಎನ್ನೋದನ್ನು ಖಚಿತಪಡಿಸಿಕೊಂಡಿದ್ದೇವೆ," ಎಂದು 45ರ ಹರೆಯದ ಕಾಲಿಂಗ್‌ವುಡ್ ಹೇಳಿದ್ದಾರೆ.

Story first published: Tuesday, August 31, 2021, 22:59 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X