ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರ್‌ಸಿಬಿ, ದ.ಆಫ್ರಿಕಾ ಸೇರುವ ದೊಡ್ಡ ಸುಳಿವು ನೀಡಿದ ಎಬಿಡಿ; ಈ ಆಸೆಗೆ ಇವೆ ಅಡೆತಡೆಗಳು!

I believe I have a role to play in SA and RCB says Ab De Villiers

ಅಂತಾರರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಎಬಿ ಡಿವಿಲಿಯರ್ಸ್ 2017ರಲ್ಲಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು ಮತ್ತು 2018ರ ಮೇ ತಿಂಗಳಿನಲ್ಲಿ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಹೀಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ 3 ವರ್ಷಗಳ ಹಿಂದೆಯೇ ನಿವೃತ್ತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದರು. ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿ ಡಿವಿಲಿಯರ್ಸ್ ಹಲವಾರು ವರ್ಷಗಳಿಂದ ಬೆಂಗಳೂರು ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದರು.

ಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿಕುಂತಲ್ಲಿ ಕೂರಂಗಿಲ್ಲ! ಡ್ರೆಸ್ಸಿಂಗ್ ರೂಂನಲ್ಲಿ ಬುಮ್ರಾ ಬೌಲಿಂಗ್ ಅಣಕಿಸಿದ ಕೊಹ್ಲಿ

ಹೀಗೆ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಾ ಬಂದಿದ್ದ ಎಬಿ ಡಿ ವಿಲಿಯರ್ಸ್ ಕಳೆದ ವರ್ಷ ನಡೆದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ನಂತರ ಐಪಿಎಲ್ ಟೂರ್ನಿಗಳಿಂದಲೂ ಸಹ ಹೊರನಡೆಯುವ ತೀರ್ಮಾನವನ್ನು ಕೈಗೊಂಡರು. ಹೌದು, ಕಳೆದ ನವೆಂಬರ್ 17ರಂದು ಸಾಮಾಜಿಕ ಜಾಲತಾಣದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿಯನ್ನು ಘೋಷಿಸುತ್ತಿರುವುದಾಗಿ ಎಬಿ ಡಿವಿಲಿಯರ್ಸ್ ಪ್ರಕಟಿಸಿದ್ದರು.

ನ್ಯೂಜಿಲೆಂಡ್ ನೆಲದಲ್ಲಿ ಐತಿಹಾಸಿಕ ಸಾಧನೆಗೆ ಸಜ್ಜಾದ ಬಾಂಗ್ಲಾ: ಅಂತಿಮ ದಿನ ಪಂದ್ಯ ರಕ್ಷಿಸಿಕೊಳ್ಳುತ್ತಾ ಕಿವೀಸ್ ಪಡೆ!ನ್ಯೂಜಿಲೆಂಡ್ ನೆಲದಲ್ಲಿ ಐತಿಹಾಸಿಕ ಸಾಧನೆಗೆ ಸಜ್ಜಾದ ಬಾಂಗ್ಲಾ: ಅಂತಿಮ ದಿನ ಪಂದ್ಯ ರಕ್ಷಿಸಿಕೊಳ್ಳುತ್ತಾ ಕಿವೀಸ್ ಪಡೆ!

ಹೀಗೆ ಎಬಿ ಡಿವಿಲಿಯರ್ಸ್ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ ನಿವೃತ್ತಿ ಪಡೆದುಕೊಂಡದ್ದು ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರಾಸೆಯನ್ನು ಉಂಟು ಮಾಡಿತ್ತು. ತಾವು ಬೆಂಬಲಿಸುವ ತಂಡದ ಪ್ರಮುಖ ಆಟಗಾರ ಇನ್ನು ಮುಂದೆ ತಮ್ಮ ತಂಡದ ಪರ ಆಡುವುದಿಲ್ಲ ಎಂಬ ನೋವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪಾಲಿಗಿತ್ತು. ಹೇಗಾದರೂ ಸರಿ ಎಬಿ ಡಿವಿಲಿಯರ್ಸ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿ ಅಥವಾ ಕೋಚ್ ಆಗಿಯಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿ ಎಂದು ಅಭಿಮಾನಿಗಳು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆ ಕುರಿತಾಗಿಯೇ ಇದೀಗ ಎಬಿಡಿ ವಿಲಿಯರ್ಸ್ ಮಾತನಾಡಿದ್ದು ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಸೇರುವ ಸುಳಿವನ್ನು ಈ ಕೆಳಕಂಡಂತೆ ನೀಡಿದ್ದಾರೆ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸೇರುವ ಇಚ್ಛೆ ವ್ಯಕ್ತಪಡಿಸಿದ ಎಬಿಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸೇರುವ ಇಚ್ಛೆ ವ್ಯಕ್ತಪಡಿಸಿದ ಎಬಿಡಿ

ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್ ಇನ್ನೂ ಕೂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪಾತ್ರವೊಂದನ್ನು ನಿರ್ವಹಿಸುವ ನಂಬಿಕೆ ನನ್ನಲ್ಲಿದೆ ಎಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಿರುವ ಅನುಭವವನ್ನು ಹೊಂದಿರುವ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳಿಗೆ ಮೆಂಟರ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಎಬಿ ಡಿವಿಲಿಯರ್ಸ್ ಆಸೆಗಳಿಗೆ ಇವೆ ಅಡೆತಡೆ

ಎಬಿ ಡಿವಿಲಿಯರ್ಸ್ ಆಸೆಗಳಿಗೆ ಇವೆ ಅಡೆತಡೆ

ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಮೆಂಟರ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಎಬಿಡಿ ವಿಲಿಯರ್ಸ್ ಅವರ ಈ ಕನಸು ನನಸಾಗುವುದು ಸುಲಭವಲ್ಲ. ಈ ಹಿಂದೆ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಸಮಯದಲ್ಲಿ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರಲಿಲ್ಲ ಎಂಬುದು ತಿಳಿದಿರುವ ವಿಷಯವೇ. ಹೀಗಾಗಿ ಎಬಿ ಡಿವಿಲಿಯರ್ಸ್ ಅವರಿಗೆ ಮೆಂಟರ್ ಸ್ಥಾನವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ನೀಡಲಿದೆಯಾ ಎಂಬ ದೊಡ್ಡ ಪ್ರಶ್ನೆ ಇದೀಗ ಮೂಡಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಬಿ ಡಿವಿಲಿಯರ್ಸ್ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ ಎಬಿ ಡಿವಿಲಿಯರ್ಸ್ ಮೆಂಟರ್ ಆಗಿ ತಂಡಕ್ಕೆ ಬೇಕು ಎಂಬ ಅನಿವಾರ್ಯತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಇದ್ದರೆ ಮುಂಬರುವ ಐಪಿಎಲ್ ಆವೃತ್ತಿಗೆ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಎಬಿ ಡಿವಿಲಿಯರ್ಸ್ ಮುಂಬರುವ ದಿನಗಳಲ್ಲಿ ಮೆಂಟರ್ ಆಗಿ ಕಣಕ್ಕಿಳಿಯುತ್ತಾರಾ ಎಂಬ ಅನುಮಾನ ಮೂಡದೇ ಇರದು.

ಕ್ರಿಕೆಟರ್ ಆಗಿ ಎಬಿಡಿ

ಕ್ರಿಕೆಟರ್ ಆಗಿ ಎಬಿಡಿ

ಎಬಿ ಡಿವಿಲಿಯರ್ಸ್ ಓರ್ವ ಆಟಗಾರನಾಗಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ, ಶತಕ ಹಾಗೂ 150 ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿರುವ ಎಬಿ ಡಿವಿಲಿಯರ್ಸ್ 114 ಟೆಸ್ಟ್, 228 ಏಕದಿನ ಹಾಗೂ 78 ಅಂತರರಾಷ್ಟ್ರೀಯ ಟ್ವೆಂಟಿ ಪಂದ್ಯಗಳನ್ನಾಡಿದ್ದು ಒಟ್ಟು 20017 ಅಂತರರಾಷ್ಟ್ರೀಯ ರನ್ ಕಲೆ ಹಾಕಿದ್ದಾರೆ.

Story first published: Tuesday, January 4, 2022, 17:15 [IST]
Other articles published on Jan 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X