ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಭವಿಷ್ಯ ನುಡಿದ ಸೌರವ್ ಗಂಗೂಲಿ! ಆತ ಬಿಗ್ ಮ್ಯಾಚ್ ಪ್ಲೇಯರ್ ಎಂದ ದಾದಾ

Virat kohli

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ರನ್‌ಗಳಿಸಲು ಪರದಾಡುತ್ತಿರುವ ವಿರಾಟ್‌ ಕೊಹ್ಲಿ ಯಾವಾಗ ಫಾರ್ಮ್‌ಗೆ ಮರಳಬಹುದು ಎಂದು ಅಂದಾಜಿಸಿದ್ದಾರೆ.

ಮಾರ್ಡನ್ ಕ್ರಿಕೆಟ್‌ನ ಲೆಜೆಂಡ್ ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್ ಕುರಿತಾಗಿ ಬೆಂಬಲಿಸಿರುವ ಸೌರವ್‌ ಗಂಗೂಲಿ, ವಿರಾಟ್ ಎದುರಿಸುತ್ತಿರುವ ಕಷ್ಟದ ದಿನಗಳನ್ನ ಅರಿತು ಮಾತನಾಡಿದ್ದಾರೆ.

2019ರಿಂದ ಒಂದೇ ಒಂದು ಅಂತರಾಷ್ಟ್ರೀಯ ಶತಕ ದಾಖಲಿಸಲು ವಿಫಲಗೊಂಡಿರುವ ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸಲು ಸಾಧ್ಯವಾಗಿಲ್ಲ. ವಿರಾಟ್ ಕೊನೆಯದಾಗಿ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್‌ನಲ್ಲಿ ಮತ್ತೆ ವಿಫಲರಾದರು.

ಇಂಗ್ಲೆಂಡ್ ವಿರುದ್ಧ ಕೊಹ್ಲಿ ಫ್ಲಾಪ್ ಶೋ

ಇಂಗ್ಲೆಂಡ್ ವಿರುದ್ಧ ಕೊಹ್ಲಿ ಫ್ಲಾಪ್ ಶೋ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಯದಾಗಿ ಆಡಿದ್ದ ಇಂಗ್ಲೆಂಡ್ ವಿರುದ್ಧ ಮೂರು ಫಾರ್ಮೆಟ್‌ ಪಂದ್ಯಗಳಲ್ಲಿ ಒಂದು ಅರ್ಧಶತಕ ಸಹ ದಾಖಲಿಸಲಿಲ್ಲ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 11 ಮತ್ತು 20 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ನಡೆದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿರಾಟ್ 1 ಮತ್ತು 11 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ನಡೆದ ಏಕದಿನ ಸರಣಿಯಲ್ಲೂ ಕೊಹ್ಲಿ ಫ್ಲಾಪ್ ಶೋ ಮುಂದುವರೆದು 16 ಮತ್ತು 17 ರನ್‌ಗಳಿಸಿ ಔಟಾಗಿದ್ದಾರೆ.

ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಸೌರವ್‌ ಗಂಗೂಲಿ

ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಸೌರವ್‌ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಕುರಿತಾಗಿ ಮಹತ್ವದ ಹೇಳಿಕೆಯನ್ನ ನೀಡಿದ್ದು, ಕೊಹ್ಲಿ ಬಿಗ್ ಮ್ಯಾಚ್ ಪ್ಲೇಯರ್ ಆತ ಖಂಡಿತವಾಗಿಯೂ ಫಾರ್ಮ್‌ಗೆ ಮರಳಲಿದ್ದಾರೆ ಎಂದಿದ್ದಾರೆ.

''ಆತನಿಗೆ ಅಭ್ಯಾಸ ಮಾಡಲು, ಪಂದ್ಯಗಳನ್ನ ಆಡಲು ಬಿಡಿ. ಆತ ಬಿಗ್ ಮ್ಯಾಚ್ ಪ್ಲೇಯರ್ ಆಗಿದ್ದು, ಈಗಾಗಲೇ ಸಾಕಷ್ಟು ರನ್ ಕಲೆಹಾಕಿದ್ದಾರೆ. ಆತ ಕಂಬ್ಯಾಕ್ ಮಾಡುತ್ತಾನೆ ಎಂದು ನನಗೆ ನಂಬಿಕೆ ಇದೆ. ಆತ ಕೇವಲ ಶತಕ ಹೊಡೆಯಲಷ್ಟೇ ಸಾಧ್ಯವಾಗುತ್ತಿಲ್ಲ ಮತ್ತು ಆತನ ಏಷ್ಯಾ ಕಪ್‌ನಲ್ಲಿ ಫಾರ್ಮ್‌ಗೆ ಮರಳಲಿದ್ದಾರೆ ಎಂದು ನಂಬಿದ್ದೇನೆ'' ಎಂದು ಸೌರವ್‌ ಗಂಗೂಲಿ ಇಂಡಿಯಾ ಟುಡೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲು ಇದನ್ನು ಮಾಡಬೇಕಿದೆ ಎಂದ ಸೌರವ್ ಗಂಗೂಲಿ

ಮುಂದಿನ ಐಸಿಸಿ ಹುದ್ದೆಗೆ ಸೌರವ್ ಗಂಗೂಲಿ ಕಣ್ಣಿಟ್ಟಿದ್ದಾರೆಯೇ?

ಮುಂದಿನ ಐಸಿಸಿ ಹುದ್ದೆಗೆ ಸೌರವ್ ಗಂಗೂಲಿ ಕಣ್ಣಿಟ್ಟಿದ್ದಾರೆಯೇ?

ಐಸಿಸಿ ಮುಂದಿನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ರೇಸ್‌ನಲ್ಲಿದ್ದಾರೆ ಎಂಬ ಸುದ್ದಿಗೆ ಉತ್ತರಿಸಿರುವ ಮಾಜಿ ನಾಯಕ ಇದೆಲ್ಲಾ ಕೇವಲ ವದಂತಿಗಳಷ್ಟೇ ಆಗಿದ್ದು, ಆ ರೀತಿಯಾಗಿ ಯಾವುದೇ ತಯಾರಿ ಇಲ್ಲ ಎಂದಿದ್ದಾರೆ.

''ನೋಡಿ, ಇವೆಲ್ಲಾ ಕೇವಲ ವದಂತಿಗಳಷ್ಟೇ ಆಗಿದೆ. ಈ ರೀತಿಯಾಗಿ ಮಾಡುವುದು ಸರಿಯಲ್ಲ. ಅಷ್ಟು ವೇಗವಾಗಿ ಅವೆಲ್ಲಾ ನಡೆಯುವುದಿಲ್ಲ. ಏಕೆಂದರೆ ಇವೆಲ್ಲವೂ ಬಿಸಿಸಿಐ ಮತ್ತು ಸರ್ಕಾರದ ಕೈನಲ್ಲಿದೆ ಎಂದು ಗಂಗೂಲಿ ಸೇರಿಸಿದ್ದಾರೆ.

ಸೌರವ್ ಗಂಗೂಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ 2022, ಎರಡನೇ ಆವೃತ್ತಿಯಲ್ಲಿ ಇಂಡಿಯಾ ಮಹಾರಾಜಸ್ ತಂಡವನ್ನ ಮುನ್ನಡೆಸಲಿದ್ದು, ಕೇವಲ ಒಂದು ಪಂದ್ಯದಲ್ಲಷ್ಟೇ ಭಾಗಿಯಾಗುವುದಾಗಿ ತಿಳಿಸಿದ್ದಾರೆ.

ಕುಮಾರ ಸಂಗಕ್ಕಾರ ದಾಖಲೆಯನ್ನ ಮುರಿದ ಚೇತೇಶ್ವರ ಪೂಜಾರ: ಗರಿಷ್ಠ ರನ್ ಕಲೆಹಾಕಿದ ಏಷ್ಯಾದ ಕ್ರಿಕೆಟರ್‌

ಏಷ್ಯಾಕಪ್‌ನಲ್ಲಿ ನೇರವಾಗಿ ಭಾಗಿಯಾಗಲಿರುವ ವಿರಾಟ್ ಕೊಹ್ಲಿ

ಏಷ್ಯಾಕಪ್‌ನಲ್ಲಿ ನೇರವಾಗಿ ಭಾಗಿಯಾಗಲಿರುವ ವಿರಾಟ್ ಕೊಹ್ಲಿ

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್‌ ಇಂಡೀಸ್ ಟಿ20 ಹಾಗೂ ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದಷ್ಟೇ ಅಲ್ಲದೆ, ಜಿಂಬಾಬ್ವೆ ಪ್ರವಾಸಕ್ಕೂ ಸಹ ತೆರಳಲಿಲ್ಲ. ಹೀಗಾಗಿ ವಿರಾಟ್ ಏಷ್ಯಾಕಪ್‌ನಲ್ಲಿ ನೇರವಾಗಿ ಭಾಗಿಯಾಗಲಿದ್ದು, ಆಗಸ್ಟ್ 28ರಂದು ನಡೆಯಲಿರುವ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ.

ಟಿ20 ವಿಶ್ವಕಪ್‌ ಮುನ್ನ ಚುಟುಕು ಫಾರ್ಮೆಟ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ ಪ್ರತಿ ತಂಡಗಳಿಗೂ ಬಹುಮುಖ್ಯವಾದ ವೇದಿಕೆಯಾಗಿದ್ದು, ಪ್ರಾಬಲ್ಯ ಸಾಧಿಸಲು ಈಗಾಗಲೇ ಯೋಜನೆಗಳನ್ನ ರೂಪಿಸಿಕೊಂಡಿವೆ. ಆಗಸ್ಟ್‌ 27ರಂದು ಚಾಲನೆ ಸಿಗಲಿರುವ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.

Story first published: Tuesday, August 16, 2022, 12:20 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X